ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಿ ಸಂಗಾತಿಯಿಂದ ದೂರ ಇರುವುದು ಒಳ್ಳೆಯದಲ್ಲ. ನೀವು ಆಡುವ ಮಾತುಗಳನ್ನು ಇನ್ನೊಬ್ಬರೂ ಅಷ್ಟೇ ಗಹನವಾಗಿ ಚಿಂತಿಸುತ್ತಾರೆ ಎಂಬುದನ್ನು ತಿಳಿಯಿರಿ.
ತಾಯಿಯ ಸುಖ ಮತ್ತು ವಾಹನ ಸುಖ ದೊರೆಯುವುದಾದರೂ ಸಂಗಾತಿಯ ಅಸಹಕಾರ ನಿಮ್ಮ ಮನೋಚಿಂತನೆಯನ್ನು ಹೆಚ್ಚಿಸುವುದು. ಮನೋನಿಯಾಮಕ ರುದ್ರ ದೇವರನ್ನು ಭಜಿಸಿ, ಒಳಿತಾಗುವುದು.
ಹಣಕಾಸಿನ ತೊಂದರೆ ಇರುವುದಿಲ್ಲ. ಬಾಳಸಂಗಾತಿಯೊಡನೆ ಚರ್ಚಿಸಿ ಸಲಹೆ ಪಡೆಯಲು ಸಕಾಲವಾಗಿದೆ. ನೀವಾಡುವ ಮಾತು ಇತರರಿಗೆ ರುಚಿಸುವುದಿಲ್ಲ. ಆರೋಗ್ಯದ ಸಲುವಾಗಿ ಗಣಪತಿಯನ್ನು ಪ್ರಾರ್ಥಿಸಿ.
ನಿಮ್ಮ ಸಮೀಪದ ಜನ ಅಥವಾ ಬಂಧುಗಳೇ ನಿಮ್ಮ ಕಾರ‍್ಯವೈಖರಿಯನ್ನು ಟೀಕಿಸುವರು. ನೀವು ಸಮಾಜದಲ್ಲಿ ಗಳಿಸುತ್ತಿರುವ ಗೌರವ, ಆದರಗಳನ್ನು ಕಂಡು ಇತರರು ಹೊಟ್ಟೆಕಿಚ್ಚು ಪಡುವರು. ನಿಮ್ಮ ಬಗ್ಗೆ ದೂರು ಹೇಳಿದರೆ ನಕ್ಕು ಸುಮ್ಮನಾಗಿ.
ನೀವು ನಿಮ್ಮ ಮಕ್ಕಳ ಮೇಲೆ ಇಟ್ಟಿರುವ ಭರವಸೆ ಕಾರ್ಯರೂಪಕ್ಕೆ ಬರುವುದು. ಸಾಲದ ತೀರುವಳಿ ಮಾಡಿದಲ್ಲಿ ಅನುಕೂಲವಾಗುವುದು. ಭಗವಂತನ ಕೃಪೆ ಇದ್ದಲ್ಲಿ ನಿಮ್ಮನ್ನು ಜನರು ಹಾಡಿ ಕೊಂಡಾಡುವರು.
ವ್ಯಾಪಾರ, ವ್ಯವಹಾರ ಎಂದರೆ ಲಾಭ ನಷ್ಟ ಇದ್ದದ್ದೇ. ಎಲ್ಲಾ ಕಾಲದಲ್ಲೂ ಲಾಭವೇ ಆಗುತ್ತದೆ ಎಂದು ತಿಳಿಯಬಾರದು. ಮುಷ್ಟಿ ಕಾಳು ಚೆಲ್ಲಿ ಮೂಟೆ ಕಾಳನ್ನು ಪಡೆಯುವಂತೆ ನಿಮ್ಮ ಹಣ ಖರ್ಚಾಗುವುದು. ಆದರೂ ಮುಂದೆ ಒಳಿತಾಗುವುದು.
ಮಾತು ಬಲ್ಲವನಿಗೆ ಜಗಳವಿಲ್ಲ ಎಂದರು ಹಿರಿಯರು. ನೀವಾಡುವ ಮಾತುಗಳು ಮತ್ತೊಬ್ಬರಿಗೆ ನೋವನ್ನುಂಟು ಮಾಡುವುದು. ಈ ಬಗ್ಗೆ ಜಾಗ್ರತೆ ಇರಲಿ. ಆರೋಗ್ಯದ ಕಡೆ ಗಮನ ಇರಲಿ.
ನಿಮ್ಮ ಬುದ್ಧಿ ಬಲದಿಂದ ಪದೋನ್ನತಿ ಸಿಗುವುದು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಓದು ಮುಂದುವರಿಕೆಯ ಬಗ್ಗೆ ಚಿಂತನೆ ನಡೆಸುವಿರಿ. ಸಹಜವಾಗಿಯೇ ಕೆಲವರು ವಿರೋಧಿಸುವ ಜನ ಇರುತ್ತಾರೆ. ಅವರ ಟೀಕೆಗಳಿಗೆ ಕಿವಿಗೊಡದಿರಿ.
ಹಣಕಾಸಿನ ವ್ಯವಹಾರದ ನಿಮ್ಮ ನಿರ್ವಹಣಾ ಸಾಮರ್ಥ್ಯವು ನಿಮಗೆ ಹೆಚ್ಚಿನ ಪ್ರಶಂಸೆಯನ್ನು ತಂದುಕೊಡುವುದು. ನಿಮ್ಮಂತಹ ಮನಸ್ಥಿತಿಯುಳ್ಳವರೇ ದೊಡ್ಡ ದೊಡ್ಡ ಕಾರ್ಯಗಳನ್ನು ಲೀಲಾಜಾಲವಾಗಿ ಮಾಡಿ ಮುಗಿಸುವಂತವರು.
ಎಲ್ಲಾ ವಿಚಾರಕ್ಕೂ ಪರರ ಸಲಹೆಯನ್ನು ಕೇಳುತ್ತಾ ಕೂತರೆ ಉತ್ತಮ ಅವಕಾಶ ತಪ್ಪಿ ಹೋಗುವುದು. ಅಂಜಿಕೆ, ಅಧೈರ್ಯ ಬದಿಗಿಟ್ಟು ಕಾರ್ಯವನ್ನು ಮುನ್ನುಗ್ಗಿ ಮಾಡಿ. ದೈವಬಲವಿದೆ. ನೀವು ಯಶಸ್ಸನ್ನು ಹೊಂದುವಿರಿ.
ನಂಬಿದ ಜನರು ಕೈಕೊಡುತ್ತಿದ್ದಾರೆ ಎಂದು ಬೇಸರಿಸುವುದರಲ್ಲಿ ಅರ್ಥವಿಲ್ಲ. ಬೇವು ಬಿತ್ತಿ ಮಾವು ಪಡೆಯಲು ಸಾಧ್ಯವಿಲ್ಲ. ಅಂತೆಯೇ ನಿಮ್ಮ ನಡೆನುಡಿಗಳಲ್ಲಿ ಬದಲಾವಣೆ ತಂದುಕೊಂಡಲ್ಲಿ ಒಳಿತಾಗುವುದು.
ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬ ಕಹಿ ಸತ್ಯ ನಿಮಗೆ ಗೊತ್ತಾಗುವ ಹೊತ್ತಿಗೆ ಅಧಿಕ ಹಣವನ್ನು ಕಳೆದುಕೊಳ್ಳುವಿರಿ. ಹಾಗಾಗಿ ವ್ಯವಹಾರ ಮಾಡುವಾಗ ಎದುರಾಳಿಯ ಪೂರ್ವಾಪರ ವಿಚಾರಗಳನ್ನು ತಿಳಿದುಕೊಳ್ಳಿ.
Tags:
ದಿನ ಭವಿಷ್ಯ