ಎಲ್ಲಾ ಕಾಲದಲ್ಲೂ ನಿಮ್ಮ ಮಾತೇ ಅಂತಿಮ ಎನ್ನುವ ಧೋರಣೆ ಬಿಡಿ. ಇತರರ ಮಾತಿಗೂ ಬೆಲೆ ಕೊಡುವುದನ್ನು ಕಲಿತರೆ ಜೀವನ ಸುಂದರಮಯವಾಗಿರುತ್ತದೆ. ಸಂಗಾತಿಯು ಮಾತಾಡುವ ವಿಷಯಗಳಿಗೆ ಅಪಾರ್ಥ ಕಲ್ಪಿಸಕೊಳ್ಳದಿರಿ.
ಬಾಳಸಂಗಾತಿಯನ್ನು ನಿರ್ಲಕ್ಷಿಸದಿರಿ. ಬಾಳಸಂಗಾತಿಯ ಇಚ್ಛೆಯನ್ನು ಅರಿತು ಸ್ಪಂದಿಸಿದಲ್ಲಿ ಸಂಸಾರವು ಸುಖಮಯವಾಗಿರುವುದು. ಸುಖಾ ಸುಮ್ಮನೆ ನೀವೇ ಅಪಾರ್ಥಗಳನ್ನು ಕಲ್ಪಿಸಿಕೊಂಡು ಸುಂದರ ಬದುಕನ್ನು ಹಾಳುಮಾಡಿಕೊಳ್ಳದಿರಿ.
ಚರರಾಶಿಯಲ್ಲಿ ಜನ್ಮಿಸಿರುವ ನೀವು ಒಂದೇ ಕಡೆ ಕುಳಿತು ಕೆಲಸ ಮಾಡುವವರಾಗಿದ್ದೀರಿ. ಕುಟುಂಬದಲ್ಲಿ ಒಡಕು ಮೂಡುವ ಸಾಧ್ಯತೆ ಇದೆ. ಬಾಳಸಂಗಾತಿ ಮತ್ತು ಮಕ್ಕಳಿಂದ ಪದೇ ಪದೇ ಪ್ರಶ್ನೆಗಳು ಬರುತ್ತವೆ. ಸುಬ್ರಮಣ್ಯಸ್ವಾಮಿಯನ್ನು ಆರಾಧಿಸಿ.
ಸಾಧು ಪ್ರಾಣಿಗಳನ್ನೇ ಬಲಿಕೊಡುವರೇ ಹೊರತು ಹುಲಿ ಸಿಂಹಗಳನ್ನು ಬಲಿ ಕೊಡುವುದಿಲ್ಲ. ಹಾಗಾಗಿ ನಿಮ್ಮ ತೀರ್ಮಾನಗಳನ್ನು ಯಾರೂ ಪ್ರಶ್ನಿಸದೆ ಒಪ್ಪಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ನಿಮ್ಮ ದೃಢ ನಿರ್ಧಾರವೇ ಕಾರಣ.
ಆಸ್ತಿ ಖರೀದಿಯ ಬಗ್ಗೆ ನಿಧಾನ ಪ್ರಗತಿಯುಂಟಾಗುವುದು. ಸ್ನೇಹಿತರು ಸಹಾಯ ಮಾಡುವರು. ಭೂವ್ಯವಹಾರಕ್ಕೆ ಸಂಬಂಧಪಟ್ಟಂತೆ ಮೋಸ ಹೋಗುವ ಸಾಧ್ಯತೆ ಇದೆ. ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ.
ಮುಂದೆ ಬರಬಹುದಾದ ಉತ್ತಮ ದಿನಗಳನ್ನು ಎದುರಿಸಲು ಸನ್ನದ್ಧರಾಗುವಿರಿ. ಎಲ್ಲೆಡೆಯೂ ನಿಮ್ಮ ಕಾರ್ಯವೈಖರಿಯ ಬಗ್ಗೆ ಚರ್ಚೆ ನಡೆಯುವುದು. ಆ ಚರ್ಚೆಯು ಹಾದಿ ತಪ್ಪದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದು.
ಎಷ್ಟೇ ಪ್ರಾಮಾಣಿಕವಾಗಿ ದುಡಿದರೂ ಪ್ರಯೋಜನಕ್ಕೆ ಬರುತ್ತಿಲ್ಲ ಎಂಬ ಕೊರಗು ನಿಮ್ಮನ್ನು ಕಾಡುತ್ತಿದೆ. ಕೆಲ ಗ್ರಹಸ್ಥಿತಿಗಳು ನೀವು ಕೈಗೊಳ್ಳುವ ಕಾರ್ಯದಲ್ಲಿ ವಿಳಂಬ ಉಂಟು ಮಾಡುವುದು. ಆಂಜನೇಯ ಸ್ಮರಣೆ ಮಾಡಿ.
ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಪ್ರಗತಿಯತ್ತ ಸಾಗುವವು. ಕೆಲವರಿಗೆ ಬಡ್ತಿ ಸಿಗುವುದು. ದೂರದ ಊರುಗಳಿಗೆ ವರ್ಗಾವಣೆಗೆ ಹೋಗುವುದಕ್ಕಿಂತ ಇದ್ದಲ್ಲೇ ಇದ್ದರೆ ಬಡ್ತಿ ದೊರೆಯುವುದು.
ಹಣಕಾಸಿನ ಹರಿವಿಗೆ ಇದ್ದ ಅಡೆತಡೆಗಳು ನಿವಾರಣೆಯಾಗಿ ಹಣ ಬರುವ ಮಾರ್ಗ ನಿಚ್ಚಳವಾಗುವುದು. ವಾಕ್ ಚಾತುರ್ಯದಿಂದ ನಿಮ್ಮ ಸಹಪಾಠಿಗಳನ್ನು ಗೆಲ್ಲುವಿರಿ. ದುಷ್ಟ ಫಲ ನಿವಾರಣೆಗಾಗಿ ಗಣಪತಿಯನ್ನು ಆರಾಧಿಸಿರಿ.
ನಿಮ್ಮ ಬುದ್ಧಿ ಚಾತುರ್ಯಕ್ಕೆ ಎಂತಹವರೂ ತಲೆ ಬಾಗುವರು. ಜೀವನದಲ್ಲಿನ ಕಷ್ಟಗಳ ಮೇಲೆ ಜಯ ಸಾಧಿಸುವಿರಿ. ಉತ್ತಮ ಸ್ನೇಹಿತರ ಬೆಂಬಲ ನಿಮಗೆ ದೊರೆಯುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ನಂಬಿದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಕ್ರಮೇಣ ತೊಂದರೆಗೆ ದಾರಿ ಆಗುವುದು. ಕೆಲವು ಅಡೆತಡೆಗಳು ಉಂಟಾಗುವ ಸಾಧ್ಯತೆ ಇದೆ. ಕುಲದೇವತಾ ಸ್ಮರಣೆ ಮಾಡಿರಿ. ಗುರು, ಹಿರಿಯರ ಆಶೀರ್ವಾದ ಪಡೆಯಿರಿ.
ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಿ ಸಂಗಾತಿಯಿಂದ ದೂರ ಇರುವುದು ಒಳ್ಳೆಯದಲ್ಲ. ನೀವು ಆಡುವ ಮಾತುಗಳನ್ನು ಇನ್ನೊಬ್ಬರೂ ಅಷ್ಟೇ ಗಹನವಾಗಿ ಚಿಂತಿಸುತ್ತಾರೆ ಎಂಬುದನ್ನು ತಿಳಿಯಿರಿ.
Tags:
ದಿನ ಭವಿಷ್ಯ