ಅಂಕೋಲಾ : ವರ್ಷಕ್ಕೆ 30 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಅದರ ಲಾಲನೆ ಪಾಲನೆ ಮಾಡುತ್ತ ತನ್ನ ಪರಿಸರ ಸಾಧನೆಯ ಮೂಲಕವೇ ಜಗತ್ತಿನಾದ್ಯಂತ ``ವೃಕ್ಷಮಾತೆ'' ಎಂದೇ ಪ್ರಖ್ಯಾತರಗಿದ್ದ ಅಂಕೋಲಾ ತಾಲೂಕಿನ ಹೊನ್ನಳ್ಳಿಯ ತುಳಸಿ ಗೌಡ ಅವರು ದಿನಾಂಕ 16 ಡಿಸೆಂಬರ್ 2024 ಸೋಮವಾರ ದಂದು ಇಹಲೋಕ ತ್ಯಜಿಸಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡರೂ ಸಹ ತನ್ನ ಇಬ್ಬರು ಮಕ್ಕಳನ್ನ ಸಾಕಿ ಸಲಹುತ್ತ ಜೊತೆಯಲ್ಲಿ ಅರಣ್ಯ ಇಲಾಖೆಯಲ್ಲಿ ದಿನಗೂಲಿಯಾಗಿ ಕೆಲಸ ಮಾಡುತ್ತ ಅಲ್ಲಿಯೇ ತನ್ನ ಗಿಡ ನೆಡುವ ಸಲಹುವ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದ್ದರು. ಅವರ ಈ ಸಾಧನೆಗೆ ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರು.