ಹೌದು, ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಅದಾಗಲೇ ಜಗತ್ ಪ್ರಸಿದ್ದಿ. ದಕ್ಷಿಣ ಕಾಶಿ ಎಂದು ಕರೆಯಲ್ಪಡುವ ನಮ್ಮ ಗೋಕರ್ಣದಲ್ಲಿ ಯುವತಿಯೊಬ್ಬಳು ಫಸ್ಟ್ ಲೇಡಿ ಪೈಲೆಟ್ ಆಗಿ ಇದೀಗ ಗುರುತಿಸಿಕೊಂಡಿದ್ದಾರೆ.
ಗೋಕರ್ಣದ ರಥಬಿದಿಯ ಕುರ್ಸೆ ಎಂಬ ಮನೆತನದ ಕುಮಾರಿ ಕಾವ್ಯಶ್ರೀ ಈ ಸಾಧನೆಯನ್ನು ಮಾಡಿದ್ದಾಳೆ. ಶ್ರೀಯುತ ಲಷ್ಮಿನಾರಾಯಣ ಭಟ್ ದಂಪತಿಗಳ ಮಗಳಾದ ಕಾವ್ಯಶ್ರೀ ಪ್ರಸ್ತುತ ಸಣ್ಣ ಪ್ರಮಾಣದ ಸೇಸ್ನಾ ವಿಮಾನವನ್ನು ನಡೆಸುವ ಪೈಲೆಟ್ ಆಗಿ ನಿಯೋಜಿತಗೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಜೊತೆ ಜೊತೆಗೆ ಇಡೀ ದೇಶಕ್ಕೆ ಗೌರವ ತಂದ ಈ ಕುವರಿಗೆ ನಿಮ್ಮದೊಂದು ಮೆಚ್ಚುಗೆ ಹಾರೈಕೆ ಸದಾ ಇರಲಿ