ಹೊನ್ನಾವರ: ಯುವತಿಯೊಬ್ಬಳು ಉದ್ಯೋಗ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊನ್ನಾವರ ಹಳದೀಪುರ ದಲ್ಲಿ ನಡೆದಿದೆ.
ಸಾಧನ ಶ್ರೀಧರ ಆಚಾರಿ ಎನ್ನುವ ಯುವತಿಯೇ ಮೃತ ದುರ್ದೈವಿ ಯಾಗಿದ್ದಾಳೆ. ಯುವತಿ ಎಂಬಿಎ ವ್ಯಾಸಂಗವನ್ನು ಮುಗಿಸಿದ್ದು ಉನ್ನತ ಪದವಿಯನ್ನು ಪಡೆದಿದ್ದರೂ ಕೂಡ ಉದ್ಯೋಗ ಸಿಗದೇ ಇರುವುದನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಜೀವನ ಎಂಬುವುದು ಅತ್ಯಮೂಲ್ಯವಾದದ್ದು. ಕರೋನವೈರಸ್ ಕಾಲದಲ್ಲಿ ಉದ್ಯೋಗವಕಾಶಗಳು ತುಂಬಾ ಕಡಿಮೆ. ಹಾಗಂತ ಧೃತಿಗೆಡುವುದು ಸಮಯೋಚಿತವಾದ ನಿರ್ಧಾರವಲ್ಲ. ಈಗಿನ ಪೀಳಿಗೆಯ ಯುವಕ-ಯುವತಿಯರು ಯಾವುದೇ ಕಾರಣಕ್ಕೂ ದೃತಿಗೆಡದೆ ಕೆಟ್ಟ ನಿರ್ಧಾರಗಳಿಗೆ ಆಸ್ಪದ ಕೊಡದೆ ಧೈರ್ಯವಾಗಿ ಮುನ್ನುಗ್ಗಬೇಕು ಎಂಬುವುದು ನಮ್ಮ ವಾಹಿನಿಯ ಆಶಯ.