ಮುಂಡಗೋಡ ತಾಲೂಕಿನ ಅರಿಶಿನ ಗಿರಿಯಲ್ಲಿ ರೈತನೊಬ್ಬ ಸಾಲಬಾಧೆ ಕಾರಣದಿಂದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ದೇವೇಂದ್ರಪ್ಪ ಈರಪ್ಪ ಎಂದು ಗುರುತಿಸಲಾಗಿದೆ. ಈತ 4ಎಕರೆ ಜಮೀನು ಹೊಂದಿದ್ದು ಸುಮಾರು ಒಂದು ಲಕ್ಷ ಇಪ್ಪತ್ತು ಸಾವಿರ ಸಾಲ ಮಾಡಿ ಶೇಂಗಾ ಬೆಳೆಯನ್ನು ಬೆಳೆದಿದ್ದ. ಆದರೆ ಮಳೆಯ ಕಾರಣದಿಂದಾಗಿ ಬೆಳೆ ನಾಶವಾಗಿದ್ದು ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತ ವ್ಯಕ್ತಿಯ ಪುತ್ರ ಮುಂಡಗೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.