ಫೆಬ್ರವರಿ 23 ರಿಂದ 28ವರೆಗೆ ಬೆಂಗಳೂರಿನ ಪಡುಕೋಣೆ-ದ್ರಾವಿಡ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸೆಲೆನ್ಸ್ ನಲ್ಲಿ ನಡೆದ ರಾಜ್ಯ ಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಕುಮಟಾದ ರತ್ನಾಕರ್ ನಾರಾಯಣ ಅಂಬಿಗ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದರು.
ಕಳೆದ ಎರಡು ವರ್ಷಗಳಿಂದ ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿಯಲ್ಲಿ ತರಬೇತುದಾರ ಶ್ರೀ ರವಿಚಂದ್ರ ಬಾಲೇಹೊಸೂರು ಮಾರ್ಗದರ್ಶನದಲ್ಲಿ ಶೂಟಿಂಗ್ ತರಬೇತಿ ಪಡೆಯುತ್ತಿದ್ದಾರೆ.ಸನ್ ಲೈಟ್ ಎನರ್ಜಿ ಸೋಲಾರ್ ಕಂಪನಿ ಕಾರವಾರ ಶಾಖೆಯ ಪ್ರೊಪ್ರೈಎಟೋರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಜೊತೆ ಜೊತೆಗೆ ಶೂಟಿಂಗ್ ತರಬೇತಿ ಪಡೆದು ರಾಜ್ಯ ಮಟ್ಟದಲ್ಲಿ ಭಾಗವಹಿಸುತ್ತಿರುವುದು ಸಂತಸದ ವಿಷಯವಾಗಿದೆ. ಮುಂಬರುವ ದಿನಗಳಲ್ಲಿ ರತ್ನಾಕರ್ ಅಂಬಿಗ ಹೆಚ್ಚಿನ ಸಾಧನೆ ಮಾಡಲೆಂದು ಹಾರೈಸೋಣ.