ಭಟ್ಕಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ಕಾಮಾಕ್ಷಿ ಪೆಟ್ರೋಲ್ ಬಂಕಿನ ಹತ್ತಿರ ನಡೆದುಕೊಂಡು ಬರುತ್ತಿದ್ದ ವ್ಯಕ್ತಿಯೊಬ್ಬನಿಗೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ವ್ಯಕ್ತಿ ಸ್ಥಳದಲ್ಲೇ ಮತಪಟ್ಟ ಘಟನೆ ಭಟ್ಕಳದಲ್ಲಿ ಮಂಗಳವಾರದಂದು ನಡೆದಿದೆ.
ಇದನ್ನು ಓದಿ: ನನ್ನಿಂದ ಕೊರೊನಾ ಹರಡಬಾರದು: ಇಟಲಿಯಲ್ಲೇ ಉಳಿದ ಶಿರಸಿಯ ಕನ್ನಡತಿ
ಅಪಘಾತದಲ್ಲಿ ಮತಪಟ್ಟ ವ್ಯಕ್ತಿಯನ್ನು ಸೈಯದ್ ಎಂದು ಹೇಳಲಾಗಿದೆ. ಈತ ಜಾಲಿ ದೇವಿ ನಗರದ ನಿವಾಸಿ ಎಂದು ತಿಳಿದು ಬಂದಿದೆ. ಶಿರಾಲಿಯಿಂದ ಕುಂದಾಪುರದ ಕಡೆಗೆ ಅತಿವೇಗದಲ್ಲಿ ಬರುತ್ತಿದ್ದ ವಾಹನ ಡಿಕ್ಕಿ ಹೊಡೆದಿದ್ದರ ಪರಿಣಾಮ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಚಾಲಕ ವಾಹನವನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.