ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ವಿಶ್ವದ ಶ್ರೇಷ್ಠ ಸ್ಪಿನ್ನರ್ ಅಲ್ಲಿ ಒಬ್ಬರಾದ ವಾರ್ನ್ ಅವರು ತನ್ನ ಕ್ರಿಕೆಟ್ ಜೀವನದಲ್ಲಿ ತಾನು ಎದುರಿಸಿದ ಇಬ್ಬರೂ ಶ್ರೇಷ್ಠ ಬ್ಯಾಟ್ಸ್ಮನ್ ಯಾರು ಎಂದು ಹೇಳಿದ್ದಾರೆ. ಅವರೇ ಸಚಿನ್ ತೆಂಡೂಲ್ಕರ್ ಮತ್ತು ಬ್ರಿಯಾನ್ ಲಾರಾ.
ಈ ಇಬ್ಬರೂ ಬ್ಯಾಟ್ಸ್ಮನ್ಗಳು ಮಾತ್ರ ನಾನು ಎಷ್ಟೇ ಚೆನ್ನಾಗಿ ಬೌಲಿಂಗ್ ಮಾಡಿದರೂ ಅದನ್ನು ಚೆನ್ನಾಗಿ ದಂಡಿಸುತ್ತಿದ್ದರು. ಆದರೂ ಕೂಡ ನಾನು ಈ ಇಬ್ಬರೂ ಬ್ಯಾಟ್ಸ್ ಮನ್ ಗಳಿಗೆ ಬೌಲಿಂಗ್ ಮಾಡಲು ಇಷ್ಟಪಡುತ್ತಿದ್ದೆ ಎಂದು ಅವರು ಹೇಳಿದ್ದಾರೆ.
ನನ್ನ ಆಕ್ರಮಣಕಾರಿ ಎಸೆತಗಳನ್ನು ಅವರು ಬೌಂಡರಿಗೆ ಅಟ್ಟುತ್ತಿದ್ದರು, ನಾನು ಕೂಡ ಅವರನ್ನು ಔಟ್ ಮಾಡುತ್ತಿದ್ದೆ. ಹೀಗೆ ನಮ್ಮ ಮೂವರ ಆಟ ತುಂಬಾನೇ ರೋಮಾಂಚನಕಾರಿ ಯಾಗುತ್ತಿತ್ತು. ಇದರಿಂದಾಗಿಯೇ ಕ್ರಿಕೆಟ್ ಅಭಿಮಾನಿಗಳು ನಮ್ಮ ಮೂವರಿಗೆ ಬಿಗ್ ತ್ರಿಗಳು ಎಂದು ಕರೆಯುತ್ತಿದ್ದರು.
ಶ್ರೇಷ್ಠ ಸ್ಪಿನ್ನರ್ ಎಂದೇ ಹೆಸರಾದ ಶೇನ್ ವಾರ್ನ್ ಅವರು ಆಸ್ಟ್ರೇಲಿಯಾದ ಪರ 145 ಟೆಸ್ಟ್ ಪಂದ್ಯಗಳನ್ನು ಆಡಿದ್ದು 108 ವಿಕೆಟ್ಗಳನ್ನು ಕಬಳಿಸಿದ್ದಾರೆ. ಹಾಗೆಯೇ ಏಕದಿನ ಪಂದ್ಯದಲ್ಲಿ 194 ಪಂದ್ಯಗಳನ್ನು ಆಡಿದ್ದು ಅದರಲ್ಲಿ 293 ವಿಕೆಟ್ಗಳನ್ನು ಕಬಳಿಸಿದ್ದಾರೆ. ಐಪಿಎಲ್ ನಲ್ಲಿ ರಾಜಸ್ಥಾನದ ಪರವಾಗಿ ಆಡಿದ ಶೇನ್ ವಾರ್ನ್ ಅವರು 51 ಪಂದ್ಯಗಳಿಂದ 57 ವಿಕೆಟ್ಗಳನ್ನು ಕಿತ್ತಿದ್ದಾರೆ.