ಎಟಿಎಂ ಬೂತ್ ಗೆ ಬಂದ ಅಮಾಯಕ ಜನರನ್ನು ವಂಚಿಸಿ ಮಹಿಳೆಯೊಬ್ಬಳು ಹಣವನ್ನು ಲಪಟಾಯಿಸುತ್ತಿದ್ದಳು. ಎಟಿಎಂನಲ್ಲಿ ಡ್ರಾ ಮಾಡುವ ವಿಧಾನ ಗೊತ್ತಿರದ ಕೆಲವಷ್ಟು ಮಂದಿ ಬರುತ್ತಾರೆ. ಅಂಥವರನ್ನು ಟಾರ್ಗೆಟ್ ಮಾಡಿಕೊಂಡು ಅವರಿಗೆ ಹಣವನ್ನು ತೆಗೆದುಕೊಡುವ ನಾಟಕ ಮಾಡಿ ಅವರ ಎಟಿಎಂ ಅನ್ನು ಬದಲಾಯಿಸಿ ಈಕೆ ಅವರಿಂದ ಹಣವನ್ನು ಲಪಟಾಯಿಸುತ್ತಿದ್ದ ಳು.
ಸದ್ಯಕ್ಕೆ ಪೊಲೀಸರ ಅತಿಥಿಯಾಗಿರುವ ಈಕೆಯನ್ನು ಹಾನಗಲ್ಲ ತಾಲೂಕಿನ ಬಾಳೂರು ಗ್ರಾಮದ ಶಿರಾಳಕೊಪ್ಪ ನಿವಾಸಿ ಕೌಸರಬಾನು ಇಸ್ತಾರಅಹ್ಮದ ಬಂಕಾಪೂರ ಎಂದು ಗುರುತಿಸಲಾಗಿದೆ.