ನಿನ್ನೆ ನಡೆದ ಪಂದ್ಯದಲ್ಲಿ ಸಿಎಸ್ಕೆ ಸನ್ರೈಸ್ ಹೈದರಾಬಾದ್ ವಿರುದ್ಧ ಗೆಲುವನ್ನು ಪಡೆಯಿತು. ಆದರೆ ಅಭಿಮಾನಿಗಳು ಮಾತ್ರ ಧೋನಿಯವರ ಮೇಲೆ ಸಿಟ್ಟಾಗಿದ್ದಾರೆ ಅದು ಯಾಕೆ ಗೊತ್ತಾ?
ಕ್ರಿಕೆಟ್ ಅಭಿಮಾನಿಗಳು ಧೋನಿ ಮೇಲೆ ಸಿಟ್ಟ್ ಆಗಲು ಕಾರಣ ಅವರ ಕೋಪ.19ನೆಯ ಓವರ್'ನಲ್ಲಿ ಬೌಲಿಂಗ್ ಮಾಡುತ್ತಿದ್ದ ಶಾರ್ದುಲ್ ಠಾಕೂರ್ ಅವರ ಎಸೆತ ವೈಡ್ ಆಗಿತ್ತು. ಅಂಪೈರ್ ಅವರು ಮೊದಲು ಅರ್ಧಕ್ಕೆ wide ಸಿಗ್ನಲ್ ಮಾಡಿದ್ದರು. ಧೋನಿ ಅವರ ಕೋಪದ ಮುಖವನ್ನು ನೋಡಿ ಅವರು wide ಸಿಗ್ನಲ್ ಘೋಷಿಸಲಿಲ್ಲ ಎಂದು ಅಭಿಮಾನಿಗಳು ಹೇಳಿದ್ದಾರೆ. ಇದಾದ ಮೇಲೆ ಅಂತಿಮವಾಗಿ ಅಂಪೈರು wide ಎಂದು ಘೋಷಿಸಿದ್ದಾರೆ.
ಇದರಿಂದಾಗಿ ಅಭಿಮಾನಿಗಳು ಧೋನಿ ಅವರು ಅಂಪೈರ್ ಮೇಲೆ ನಡೆದುಕೊಂಡ ರೀತಿಯನ್ನು ನೋಡಿ ಅವರ ಈ ನಡೆಯನ್ನು ತುಂಬಾ ಕಟುವಾಗಿ ಟೀಕಿಸಿದ್ದಾರೆ. ಇನ್ನು ಕೆಲವರು ಸಿಎಸ್ಕೆ ಫ್ರಾಂಚೈಸಿಯನ್ನು ಐಪಿಎಲ್ ನಿಂದ ಬ್ಯಾನ್ ಮಾಡಿ ಎಂದು ಕೂಡ ಬರೆದುಕೊಂಡಿದ್ದಾರೆ.
Tags:
ಕ್ರೀಡಾ ಸುದ್ದಿಗಳು