ನವದೆಹಲಿ, ಸೆಪ್ಟೆಂಬರ್ 03: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಧಿಕೃತ ವೆಬ್‌ಸೈಟ್ ಮತ್ತು ಟ್ವಿಟ್ಟರ್ ಖಾತೆ ಹ್ಯಾಕರ್ಸ್ ಗಳಿಂದ ಹ್ಯಾಕ್ ಆಗಿದ್ದು, ಇದರ ಬಗ್ಗೆ ತನಿಖೆ ಆರಂಭವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟ್ಟರ್ ಖಾತೆಯಿಂದ ಕೆಲವೊಂದು ಟ್ವೀಟ್ ಗಳನ್ನು ಮಾಡಲಾಗಿತ್ತು. ಕೋವಿಡ್ 19 ಗೆ ಪ್ರಧಾನಮಂತ್ರಿ ಪಿಎಂಕೆಕೆ ಗೆ ಉದಾರವಾಗಿ ದೇಣಿಗೆ ನೀಡುವಂತೆ ನಾನು ನಿಮ್ಮೆಲ್ಲರ ಹತ್ತಿರ ಪ್ರಾರ್ಥಿಸಿಕೊಳ್ಳುತ್ತೇನೆ ಎಂಬುದಾಗಿ ಟ್ವೀಟ್ ಮಾಡಲಾಗಿತ್ತು.
ಪ್ರಧಾನಮಂತ್ರಿ ಮೋದಿ ಅವರ ಟ್ವಿಟರ್ ಖಾತೆಯನ್ನು ಸಂರಕ್ಷಿಸಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ. ಮೋದಿಯವರ ಟ್ವಿಟ್ಟರ್ ಖಾತೆಯಲ್ಲಿ ಸುಮಾರು 2.25 ಮಿಲ್ಲಿಯನ್ ಫಾಲವರ್ಸ್ ಇದ್ದಾರೆ.