ಕರ್ನಾಟಕದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ವತಿಯಿಂದ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ಅದೇ ಕೋಳಿ ಫಾರಂ ಯೋಜನೆ. ಈ ಯೋಜನೆಯಲ್ಲಿ ಕರ್ನಾಟಕ ಸಹಕಾರ ಕುಕ್ಕುಟ ಮಂಡಳಿಯಿಂದ ಉಚಿತ ತರಬೇತಿಯ ಜೊತೆಗೆ ಕೋಳಿ ಫಾರಂ ವ್ಯವಹಾರವನ್ನು ನಡೆಸಲು ಕರ್ನಾಟಕ ಸರ್ಕಾರದ ವತಿಯಿಂದ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.
ಸಾಮಾನ್ಯ ವರ್ಗದ ಜನರಿಗೆ ಒಂದು ಲಕ್ಷದ ಅರವತ್ತು ಸಾವಿರ ಹಾಗೆ ಎಸ್ಸಿ ಎಸ್ಟಿ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳಿಗೆ ಸುಮಾರು ಒಂದು ಲಕ್ಷದ ಎಂಬತ್ತು ಸಾವಿರ ರೂಪಾಯಿ ತನಕ ಸಾಲ ಸೌಲಭ್ಯವನ್ನು ಒದಗಿಸಿ ಕೊಡುತ್ತದೆ.
ಒದಗಿಸಿದ ಈ ಸಾಲದಲ್ಲಿ ಸಾಮಾನ್ಯ ವರ್ಗದವರಿಗೆ 40 ಸಾವಿರ ರೂಪಾಯಿ ವರೆಗೆ ಸಬ್ಸಿಡಿ ದೊರೆಯುತ್ತದೆ. ಹಾಗೆ ಎಸ್ಸಿ ಎಸ್ಟಿ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳ ಸಾಲಕ್ಕೆ ಸುಮಾರು 80 ಸಾವಿರ ರೂಪಾಯಿ ಕನಕ ಸಬ್ಸಿಡಿ ದೊರೆಯುತ್ತದೆ.
ಈ ಸಾಲವನ್ನು ಪಡೆಯಲು ಅಭ್ಯರ್ಥಿಗಳು ಕರ್ನಾಟಕ ಸಹಕಾರ ಕುಕ್ಕುಟ ಮಂಡಳಿ ನಡೆಸುವ ಐದು ದಿನಗಳ ಉಚಿತ ತರಬೇತಿಗೆ ಹಾಜರಾಗಬೇಕು. ಈ ಉಚಿತ ತರಬೇತಿಯನ್ನು ಪೂರೈಸಿದ ಅಭ್ಯರ್ಥಿಗಳಿಗೆ ದಿನಕ್ಕೆ 200 ರೂಪಾಯಿಗಳಂತೆ 5 ದಿನಕ್ಕೆ ಒಂದು ಸಾವಿರ ರೂಪಾಯಿವರೆಗೆ ತರಬೇತಿ ಭತ್ಯೆಯನ್ನು ನೀಡಲಾಗುವುದು. ಹಾಗೆ ತರಬೇತಿಯನ್ನು ಮುಗಿಸಿರುವುದರ ಬಗ್ಗೆ ಒಂದು ಸರ್ಟಿಫಿಕೇಟ್ ಕೂಡ ನೀಡಲಾಗುವುದು. ಈ ಸರ್ಟಿಫಿಕೇಟನ್ನು ಉಪಯೋಗಿಸಿಕೊಂಡು ಅಭ್ಯರ್ಥಿಗಳು ಕೋಳಿ ಫಾರಂ ಬಿಜಿನೆಸ್ ನಡೆಸಲು ಸಾಲವನ್ನು ಪಡೆಯಬಹುದು.
ಅಪ್ಲೈ ಮಾಡುವುದು ಹೇಗೆ?
ನೀವೇನಾದರೂ ತರಬೇತಿಗೆ ಅಪ್ಲೈ ಮಾಡುವುದಿದ್ದರೆ ನಿಮ್ಮ ನಿಮ್ಮ ಜಿಲ್ಲೆಯ ಕರ್ನಾಟಕ ಸಹಕಾರ ಕುಕ್ಕುಟ ಮಂಡಳಿಗೆ ಭೇಟಿ ನೀಡಿ ಅಲ್ಲಿ ಅಪ್ಲಿಕೇಶನ್ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಒಂದು ವೇಳೆ ಕರ್ನಾಟಕ ಸಹಕಾರ ಕುಕ್ಕುಟ ಮಂಡಳಿ ವಿಳಾಸ ಗೊತ್ತಿಲ್ಲದ ಪಕ್ಷದಲ್ಲಿ ಹತ್ತಿರದಲ್ಲಿರುವ ಪಶು ವೈದ್ಯರನ್ನು ಸಂಪರ್ಕಿಸಿ ಮಾಹಿತಿಯನ್ನು ಕೇಳಬಹುದು.
ನಿಮಗೆ ಒಳ್ಳೆಯದಾಗಲಿ. ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಖಂಡಿತ ಲೈಕ್ ಮತ್ತು ಶೇರ್ ಮಾಡಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಆಗಿ.
youtube.com/kannadatechknowledge