ಭಟ್ಕಳ ತಾಲೂಕಿನ ದೇವಿ ರೋಡ್ ಬಳಿ ದನಕಳ್ಳರು ದನವನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಕಳ್ಳತನ ಮಾಡುತ್ತಿದ್ದ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಡೆರ ಮಠ ದೇವಸ್ಥಾನದ ಸಿಸಿಟಿವಿಯಲ್ಲಿ ದನ ಕಳ್ಳತನದ ಈ ದೃಶ್ಯ ಸೆರೆಯಾಗಿದೆ.
ಈ ಘಟನೆಯು ಆಗಸ್ಟ್ 28ರ ಬೆಳಗ್ಗೆ 4:30 ಕ್ಕೆ ನಡೆದಿದ್ದು ಮುಂದಿ ದನಗಳ್ಳರು ನಂಬರ್ ಪ್ಲೇಟ್ ಇಲ್ಲದ ಬಿಳಿಯ ಕಾರಿನ ಒಂದರಲ್ಲಿ ಮೇಯುತ್ತಿದ್ದ ದನವನ್ನು ಕಟ್ಟಿ ಕಾರಿನೊಳಗೆ ತುಂಬುತ್ತಿದ್ದರು ಎನ್ನಲಾಗಿದೆ.
ಅದೇ ಸಮಯಕ್ಕೆ ಸರಿಯಾಗಿ ಹಾಲು ಮಾರುವವನು ಒಬ್ಬ ಬೈಕಿನಲ್ಲಿ ಅದೇ ಮಾರ್ಗವಾಗಿ ಬರುತ್ತಿದ್ದ. ಆತ ಆ ದೃಶ್ಯವನ್ನು ನೋಡಿದಾಗ ಮಾರಕಾಸ್ತ್ರಗಳನ್ನು ತೋರಿಸಿ ಆತನನ್ನು ಬೆದರಿಸಿ ಅಲ್ಲಿಂದ ಓಡಿಸಿದ್ದಾರೆ ಎಂದು ತಿಳಿದುಬಂದಿದೆ.
