ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆಡಳಿತ ಇದೀಗ ಒಂದು ವಿಚಿತ್ರವಾದ ಆಜ್ಞೆಯೊಂದನ್ನು ಹೊರಡಿಸಿದ್ದಾರೆ ಅಂತೆ.
ಅವರ ಆದೇಶವನ್ನು ಕೇಳಿದರೆ ನಾಯಿ ಪ್ರಿಯರಂತೂ ಬೆಚ್ಚಿ ಬೀಳುವುದು ಗ್ಯಾರಂಟಿ. ಅವರ ಆದೇಶದ ಪ್ರಕಾರ ಯಾರ್ಯಾರು ತಮ್ಮ ಮನೆಯಲ್ಲಿ ಸಾಕು ನಾಯಿಗಳನ್ನು ಇಟ್ಟುಕೊಂಡಿದ್ದಾರೆ ಅವರೆಲ್ಲರೂ ಕೂಡ ಆ ಸಾಕು ನಾಯಿಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕೆಂದು ಆದೇಶವನ್ನು ಹೊರಡಿಸಿದ್ದಾರೆ.
ಉತ್ತರ ಕೊರಿಯಾದಲ್ಲಿ ಇದೀಗ ತೀವ್ರ ಆಹಾರದ ಬಿಕ್ಕಟ್ಟಿನ ಸಮಸ್ಯೆ ತಲೆದೋರಿದ್ದು ಇದರಿಂದ ಇಂತಹ ಆದೇಶವನ್ನು ಹೊರಡಿಸಿದ್ದಾರೆ ಎಂದು ಹೇಳಲಾಗಿದೆ.
ಈ ಸರ್ವಾಧಿಕಾರಿಯ ಆದೇಶದಂತೆ ಅಧಿಕಾರಿಗಳು ಪ್ರತಿಯೊಂದು ಮನೆಗೆ ತೆರಳಿ ಸಾಕು ನಾಯಿಗಳನ್ನು ವಶಪಡಿಸಿಕೊಳ್ಳುತ್ತಿದ್ದಾರಂತೆ. ಈ ಆದೇಶದಿಂದ ಕೆಲವು ಮಂದಿಗೆ ಗೊಂದಲವುಂಟಾದರೂ ಕೂಡ ಈ ಬಗ್ಗೆ ಸರ್ವಾಧಿಕಾರಿ ಕಿಮ್‌ನ ಎದುರು ಮಾತನಾಡುವ ಧೈರ್ಯ ಯಾರಿಗೂ ಇಲ್ಲವಾಗಿದೆ.
ಉತ್ತರ ಕೊರಿಯಾದಲ್ಲಿ ಕೊರೊನಾ ವೈರಸ್ ಸೋಂಕು ಕಾರಣದಿಂದ ಶೇ.90ರಷ್ಟು ಆಹಾರ ಪೂರೈಕೆ ನಿಂತಿದ್ದು ಇದೀಗಾಗಲೇ ಶೇ.60ರಷ್ಟು ಮಂದಿ ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಇದೇ ಕಾರಣದಿಂದಾಗಿ ಶ್ವಾನಗಳನ್ನು ಮಾಂಸಾಹಾರಕ್ಕಾಗಿ ಪೂರೈಸಲು ಆದೇಶ ಹೊರಡಿಸಿದ್ದಾನೆ ಎಂದು ಹೇಳಲಾಗಿದೆ.