ಅಂಕೋಲಾ, ಆಗಸ್ಟ್ 6: ಅಂಕೋಲೆ ತಾಲೂಕಿನ ದೊಂಗ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಳ್ಳಾಪುರ ಸೇತುವೆಯ ಬಳಿ ಎಲ್ಲಿ ರಸ್ತೆಯಲ್ಲಿ ಸಾಗುತ್ತಿರುವಾಗ ನೀರಿನ ರಭಸಕ್ಕೆ ಬೈಕ್ ಸವಾರನೊಬ್ಬ ಆಯಾತಪ್ಪಿ ಜಾರಿಬಿದ್ದು ಸಮೇತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ. ಈ ಘಟನೆ ಬುಧವಾರವಷ್ಟೇ ನಡೆದಿತ್ತು. ಈ ಘಟನೆಯ ಕುರಿತಾಗಿ ಕೊಚ್ಚಿಕೊಂಡು ಹೋದ ಯುವಕನ ಮಾವ ಸೀತಾರಾಮ ನಾಗಪ್ಪ ನಾಯಕರು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಇದರ ಬಗ್ಗೆ ದೂರನ್ನು ಸಲ್ಲಿಸಿದ್ದರು. ಪ್ರಕರಣವನ್ನು ದಾಖಲಿಸಿಕೊಂಡು ಅಂಕೋಲಾ ಪೊಲೀಸ್ ಠಾಣೆಯ ಪೊಲೀಸರು ತನಿಖೆಯನ್ನು ಆರಂಭಿಸಿದ್ದರು. (DMCA- Copyright)
ಇದೇ ವೇಳೆಯಲ್ಲಿ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದ ಸಂತೋಷ್ ಈತನ ಮೃತದೇಹ ಘಟನೆ ನಡೆದ ಸ್ಥಳದಲ್ಲಿ ಅನತಿ ದೂರದಲ್ಲಿಯೇ ಶವವಾಗಿ ತೇಲುತ್ತಿರುವುದನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ನಂತರ ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕದಳದ ಸಿಬ್ಬಂದಿ ಗಳ ಸಹಾಯದಲ್ಲಿ ದೇಹವನ್ನು ನೀರಿನಿಂದ ಮೇಲಕ್ಕೆತ್ತಿ ಲಾಯಿತು.
ಈ ಘಟನೆ ನಡೆದ ಸಂದರ್ಭದಲ್ಲಿ ಅಂಕೋಲಾ ಪೊಲೀಸ್ ಠಾಣೆಯ ಪಿ.ಎಸ್.ಐ ಇ.ಸಿ ಸಂಪತ್, ಪಿ.ಡಿ.ಓ ಗಿರೀಶ ನಾಯಕ ಹಾಗೂ ಇನ್ನಿತರ ಅಧಿಕಾರ ವರ್ಗದವರು ಹಾಜರಿದ್ದರು. ಮೃತದೇಹವನ್ನು ಅಂಕೋಲಾ ತಾಲೂಕಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತಿದೆ ಎಂಬ ವಿಷಯ ಮೂಲಗಳಿಂದ ತಿಳಿದುಬಂದಿದೆ.