ರಾಣೆಬೆನ್ನೂರು : ಕೊರೊನಾ ಸೋಂಕು ವೈರಸ್ನ ಸಮಯದಲ್ಲಿಯೂ ಕೂಡ ಅಂತರ್ಜಾತಿಯ ವಿವಾಹವನ್ನು ಮಾಡುವುದರ ಮೂಲಕ ರಾಣೆಬೆನ್ನೂರು ತಾಲೂಕಿನ ಅರೇಮಲ್ಲಾಪುರ ಗ್ರಾಮದ ಶರಣ ಬಸವೇಶ್ವರಮಠದ ಪ್ರಣವಾನಂದರಾಮಸ್ವಾಮಿಗಳು ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ.
ರಾಣೆಬೆನ್ನೂರು ತಾಲೂಕಿನ ಮಾಕನೂರ ಗ್ರಾಮದ ಮರಾಠಾ ಸಮಾಜದ ಯುವಕ ಶಿವಮೂರ್ತಿ ಜಯಪ್ಪ ಮೂರೇ ಎಂಬುವರ ಮದುವೆ ಚನ್ನಗಿರಿ ತಾಲೂಕಿನ ಗಂಗಾಮಾತಾ ಸಮಾಜದ ಕಾವ್ಯ ಕರಿಯಪ್ಪ ಸುಣಗಾರ ಎಂಬಾಕೆಯ ಜೊತೆ ನಡೆಯಿತು. ಇಲ್ಲಿ ನಡೆದ ಮದುವೆಯ ಸಮಾರಂಭದಲ್ಲಿ ಗಂಡು ಮತ್ತು ಹೆಣ್ಣಿನ ತಂದೆ ತಾಯಿ ಮತ್ತು ಸಂಬಂಧಿಕರೆಲ್ಲರೂ ಭಾಗವಹಿಸಿದ್ದರು.
ಡಾ.ಪ್ರಣವಾನಂದರಾಮಸ್ವಾಮಿ ಮಾತನಾಡಿ, 12ನೇ ಶತಮಾನದಲ್ಲಿ ನಮ್ಮ ಪೂಜ್ಯ ಗುರುಗಳಾದ ಬಸವಣ್ಣನವರು ಹಾಕಿಕೊಟ್ಟ ಮಾರ್ಗದರ್ಶನದಂತೆ ಇಲ್ಲಿಯತನಕ ನಮ್ಮ ಶ್ರೀಮಠ ನಡೆದುಕೊಂಡು ಬಂದಿದೆ. ಸಮಾಜದಲ್ಲಿ ಜಾತಿ ಎಂಬ ವಿಚಾರಗಳಿಗಿಂತ ಮನಸ್ಸಿನ ಹೊಂದಾಣಿಕೆ ಜೀವನದಲ್ಲಿ ತುಂಬಾ ಮುಖ್ಯ ಎಂದು ಹೇಳಿದರು.
ಮೌನೇಶ್ ಹೊಳಿಯಪ್ಪ ತಳವಾರ, ಭೀಮಣ್ಣ ಚಿನ್ನಣ್ಣನವರ, ಮಂಜುನಾಥ ವಡ್ಡರ, ಗಾಳೆಪ್ಪ ಮರಿಯಮ್ಮನವರ, ಪ್ರಭುಗೌಡ ಮುದಿಗೌಡ್ರ ಹಾಗೂ ಮಠದ ಮುಂತಾದ ಭಕ್ತರೆಲ್ಲರೂ ಸೇರಿಕೊಂಡು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದರ ಮೂಲಕ ಮದುವೆಯಲ್ಲಿ ಭಾಗವಹಿಸಿದ್ದರು.
