ವಿವಾಹ ವಯಸ್ಕ ಮಕ್ಕಳಿಗೆ ಸೂಕ್ತ ಸಂಬಂಧಗಳು ಬರುವ ಸಾಧ್ಯತೆ ಇದೆ. ಹಣದ ಸಂಗ್ರಹಕ್ಕೆ ಪ್ರಯತ್ನ ಹೆಚ್ಚಿಸಲಿದ್ದೀರಿ. ಸಂಬಂಧಿಕರು, ಸ್ನೇಹಿತರು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಇರುವವರಿಗೆ ಹಾಗೂ ಆರಕ್ಷಕ, ಸೈನ್ಯದಲ್ಲಿ ಇರುವವರಿಗೆ ಮಿಶ್ರ ಫಲ ಇದೆ.
ಸಾಲ ತೆಗೆದುಕೊಂಡು, ಹೂಡಿಕೆ ಮಾಡುವ ಆಲೋಚನೆಗಳು ಬಂದಲ್ಲಿ ಅದನ್ನು ತಲೆಯಿಂದ ತೆಗೆದುಹಾಕಿ. ಇನ್ನು ಈಗ ಮಾಡುತ್ತಿರುವ ಉದ್ಯೋಗದ ಬದಲಾವಣೆಗೆ ಪ್ರಯತ್ನಿಸುತ್ತಿದ್ದಲ್ಲಿ ಈ ತಿಂಗಳ ಒಳಗಾಗಿ ಮಾಡಬೇಕು. ಆ ನಂತರವಾದರೆ ಬೇಡ. ಅನುಭವಿಗಳ ಮಾರ್ಗದರ್ಶನವನ್ನು ಪಡೆಯಿರಿ.
ದೈವಾನುಗ್ರಹ ಇರುವುದರಿಂದ ನಿಮಗೆ ಭವಿಷ್ಯದಲ್ಲಿ ಅನುಕೂಲ ಆಗುವಂಥ ವ್ಯಕ್ತಿಗಳ ಪರಿಚಯ ಆಗಬಹುದು. ಸ್ಥೂಲಕಾಯದ ಸಮಸ್ಯೆ ಇರುವವರು ವೈದ್ಯರನ್ನು ಭೇಟಿ ಆಗುವುದು ಬಹಳ ಮುಖ್ಯ. ಉದ್ಯೋಗ ಸ್ಥಳದಲ್ಲಿ ಮಹತ್ತರವಾದ ಬದಲಾವಣೆ ಆಗುವ ಸೂಚನೆಗಳು ಕಂಡುಬರಲಿವೆ.
ಯಾರನ್ನೋ ಓಲೈಸಿಕೊಳ್ಳುವ ಸಲುವಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಈ ಹಿಂದೆ ಯಾವಾಗಲೋ ನೀವು ಮಾಡಿದ ತಪ್ಪನ್ನು ಈಗ ಎತ್ತಾಡಿ, ಅವಮಾನಕ್ಕೆ ಗುರಿ ಮಾಡಲು ಕೆಲವರು ಪ್ರಯತ್ನಿಸಲಿದ್ದಾರೆ. ಕಾನೂನು ವಿಚಾರಗಳನ್ನು ಎದುರಿಸುತ್ತಿದ್ದಲ್ಲಿ ಕಾಗದ- ಪತ್ರ, ದಾಖಲೆಗಳ ಕಡೆಗೆ ಹೆಚ್ಚಿನ ಗಮನ ನೀಡಿ.
ಮಾನಸಿಕವಾಗಿ ಬಹಳ ಕಿರಿಕಿರಿ ಆಗಬಹುದು. ಮುಖ್ಯವಾಗಿ ಇತರರು ನಿಮ್ಮ ಮೇಲೆ ತಮ್ಮ ಅಭಿಪ್ರಾಯವನ್ನು ಹೇರುತ್ತಿದ್ದಾರೆ ಎಂದೆನಿಸಬಹುದು. ಅಥವಾ ನೀವು ಪಡುವ ಶ್ರಮವನ್ನು ಯಾರೂ ಗುರುತಿಸುತ್ತಿಲ್ಲ ಎಂಬ ಬೇಸರ ಕಾಡಬಹುದು. ಸರ್ಕಾರಿ ಕಾಂಟ್ರ್ಯಾಕ್ಟ್ ಗಳನ್ನು ಮಾಡುವವರಿಗೆ ಸಮಯಕ್ಕೆ ಸರಿಯಾಗಿ ಹಣ ಬರುವುದಿಲ್ಲ.
ಹೇಗಾದರೂ ಹಣ ಮಾಡಲೇಬೇಕು ಎಂಬ ಧೋರಣೆ ಸರಿಯಿಲ್ಲ. ನಿಮ್ಮ ಸಾಮರ್ಥ್ಯ, ಆಸಕ್ತಿ ಹಾಗೂ ನೈತಿಕತೆ ಉಳಿಸಿಕೊಂಡು ಮುಂದುವರಿಯುವ ಬಗ್ಗೆ ಆಲೋಚನೆ ಮಾಡಿ. ಮಕ್ಕಳ ಮೇಲೆ ಸಿಟ್ಟು ಮಾಡಿಕೊಂಡು, ಕೂಗಾಡಿದರೆ ಏನಾದರೂ ಅನಾಹುತ ಆಗಬಹುದು. ಆದ್ದರಿಂದ ತಾಳ್ಮೆಯಿಂದ ವ್ಯವಹರಿಸಿ.
ಎಲ್ಲದರಲ್ಲೂ ಲಾಭ ಆಗಲೇಬೇಕು ಅಂದರೆ ಕಷ್ಟ. ಕೆಲವು ಕೆಲಸಗಳಿಂದ ಹೆಸರು, ಗೌರವ, ಪರಿಚಯ ದೊರೆಯುತ್ತದೆ. ಈ ದಿನ ಅಂಥದ್ದೇ ಸಂದರ್ಭ ಒದಗಿ ಬರಲಿದೆ. ದೀರ್ಘಾವಧಿ ಹೂಡಿಕೆ ಕಡೆಗೆ ಗಮನ ನೀಡಲಿದ್ದೀರಿ. ಸೋದರ- ಸೋದರಿಯರ ಜತೆಗೆ ಸಣ್ಣ- ಪುಟ್ಟ ಮನಸ್ತಾಪ ಎದುರಾಗಬಹುದು.
ಮನೆಯ ಸಲುವಾಗಿ ಹೆಚ್ಚಿನ ಖರ್ಚಾಗುವ ಸಾಧ್ಯತೆ ಇದೆ. ಸ್ನೇಹಿತರು- ಬಂಧುಗಳ ಕೆಲಸಕ್ಕಾಗಿ ನೀವು ಕೈಯಾರೆ ಹಣ ಖರ್ಚು ಮಾಡುವ ಸನ್ನಿವೇಶ ಸೃಷ್ಟಿ ಆಗಬಹುದು. ಒಪ್ಪಿಕೊಂಡ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಿಕೊಡುವ ಕಡೆಗೆ ಲಕ್ಷ್ಯ ನೀಡಿ. ವೈಯಕ್ತಿಕ ಕಾರಣಗಳನ್ನು ನೀಡಿ, ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಬೇಡ.
ಹಳೇ ಪ್ರೇಮ ಪ್ರಕರಣಗಳು ವಿಪರೀತ ನೆನಪಾಗಿ ಕಾಡಬಹುದು. ಅಥವಾ ಆಪ್ತರ ಅಗಲಿಕೆ ಮನಸ್ಸನ್ನು ಹಿಂಸೆ ಮಾಡಬಹುದು. ಸಾಧ್ಯವಾದಷ್ಟು ಧ್ಯಾನ- ಯೋಗದ ಕಡೆಗೆ ಗಮನ ನೀಡಿ. ಬೆಂಕಿ ಅಥವಾ ಅಪಾಯಕಾರಿ ವಸ್ತುಗಳ ಮುಂದೆ ನಿಂತು ಕೆಲಸ ಮಾಡುವವರು ಏಕಾಗ್ರತೆಯಿಂದ ಇರಬೇಕು.
ಸಮ್ಗಾತಿ- ಮಕ್ಕಳ ಜತೆಗೆ ಹೆಚ್ಚಿನ ಸಮಯ ಕಳೆಯಬೇಕು ಎಂದು ಬಯಸುತ್ತೀರಿ. ಹಣಕಾಸು ಹರಿವು ನಿರೀಕ್ಷಿತ ಮಟ್ಟದಲ್ಲಿ ಇರದೆ ಬೇಸರ ಉಂಟಾಗಲಿದೆ. ಅಭಿಪ್ರಾಯ ಭೇದ ಉದ್ಭವಿಸಿ, ನೀವು ಬಹಳ ಇಷ್ಟಪಡುವವರ ಜತೆಗೆ ಜಗಳ- ಕಲಹ ಮಾಡಿಕೊಳ್ಳುವ ಯೋಗ ಇದೆ. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು.
ಪರ ಊರುಗಳಲ್ಲಿ ಇರುವವರಿಗೆ ಮನೆಯ ನೆನಪು ಬಹಳ ಕಾಡುತ್ತದೆ. ಕೆಲವರು ಪ್ರಯಾಣ ಕೈಗೊಳ್ಳುವ ಸಾಧ್ಯತೆ ಕೂಡ ಇದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಸೂಕ್ತ ಕಾಳಜಿ ತೆಗೆದುಕೊಳ್ಳಿ. ಕಾಲು ನೋವು- ಬೆನ್ನು ನೋವು ಕಾಡುತ್ತಿದ್ದಲ್ಲಿ ತಕ್ಷಣ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವವರು ಚರ್ಚೆಗೆ ಗುರಿ ಆಗುತ್ತೀರಿ. ಸ್ನೇಹಿತರು ನಿಮ್ಮ ಧೈರ್ಯಕ್ಕೆ ಮೆಚ್ಚುಗೆಯನ್ನು ಸೂಚಿಸುತ್ತಾರೆ. ಬಹಳ ಭರವಸೆ ಇಟ್ಟುಕೊಂಡಿದ್ದ ಕೆಲಸ ಮುಂದಕ್ಕೆ ಹೋಗಬಹುದು. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಬಗ್ಗೆ ದಯೆ- ಕರುಣೆ ಇರಲಿ.
Tags:
ದಿನ ಭವಿಷ್ಯ