ಇಂದಿನ ಭವಿಷ್ಯ ಮೇ 31, 2020

Today astrology in kannada today horoscope in kannada
ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಮನೆಯಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯಲಿದೆ. ದುಡ್ಡಿನ ವಿಚಾರಕ್ಕೆ ಒತ್ತಡ ಹೆಚ್ಚಾಗಲಿದೆ. ಆಸ್ತಿ- ಭೂಮಿ ವ್ಯವಹಾರದಲ್ಲಿ ಹಿನ್ನಡೆ ಆಗಬಹುದು. ತಾಳ್ಮೆಯಿಂದ ಮುಂದಕ್ಕೆ ಹೆಜ್ಜೆ ಇಟ್ಟರೆ ಸವಾಲುಗಳನ್ನು ದಾಟಬಹುದು. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಆಗಲಿದೆ.
Today astrology in kannada today horoscope in kannada
ಸ್ವಂತ ವ್ಯವಹಾರ ಮಾಡುವವರಿಗೆ ಏಳ್ಗೆ ಇದೆ. ಕಿರು ಪ್ರಯಾಣ ಮಾಡುವ ಯೋಗ ಇದೆ. ವಾಹನ ಖರೀದಿ ಬಗ್ಗೆ ಮನೆಯಲ್ಲಿ ಚರ್ಚೆ ನಡೆಸಲಿದ್ದೀರಿ. ಸಾಲ ಮಾಡಬೇಕಾದ ಸ್ಥಿತಿ ನಿರ್ಮಾಣ ಆಗುತ್ತದೆ. ಮನೆಗೆ ಗೃಹಾಲಂಕಾರ ವಸ್ತುಗಳನ್ನು ಖರೀದಿ ಮಾಡುವ ಯೋಗ ಇದೆ. ಆದರೆ ಹಾಸಿಗೆ ಇದ್ದಷ್ಟು ಕಾಲು ಚಾಚಿ.

Today astrology in kannada today horoscope in kannada
ಹೇಳಿಕೆ ಮಾತುಗಳನ್ನು ಕೇಳಬೇಡಿ. ನಿಮ್ಮ ಮೂಲಕ ಇತರರು ತಮ್ಮ ಗುರಿ ಸಾಧನೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ಮೇಲಧಿಕಾರಿಗಳು ತಮ್ಮ ಮನಸ್ಸಿನಲ್ಲಿರುವ ವಿಚಾರ ನಿಮಗೆ ಹೇಳುತ್ತಿಲ್ಲ ಎಂಬುದು ನಿಮ್ಮ ಗಮನಕ್ಕೆ ಬರುತ್ತದೆ. ಮಾತಿನ ಮೇಲೆ ನಿಗಾ ಇರಬೇಕು. ಇಲ್ಲದಿದ್ದರೆ ಅನಗತ್ಯ ವಿವಾದ ಆಗಬಹುದು.

Today astrology in kannada today horoscope in kannada
ಆದಾಯದಲ್ಲಿನ ಇಳಿಕೆ ಚಿಂತೆಗೆ ಕಾರಣ ಆಗಬಹುದು. ಮಕ್ಕಳ ಸಲುವಾಗಿಯೇ ಸಾಲ ಮಾಡಬೇಕಾಗಬಹುದು. ಕಫ, ಶೀತ, ಜ್ವರದಂಥ ಆರೋಗ್ಯ ಸಮಸ್ಯೆಗಳು ಕಾಡಬಹುದು. ಒಲ್ಲದ ಮನಸಿನಿಂದಲೇ ಕೆಲವು ಕೆಲಸಗಳನ್ನು ಮಾಡಬೇಕಾಗಬಹುದು. ತಂದೆ- ತಾಯಿಗಳ ಮಾತಿಗೆ ಗೌರವ ನೀಡಿ. L.

Today astrology in kannada today horoscope in kannada
ಮನೆಯಲ್ಲಿ ಅಗತ್ಯ ಇರುವ ಕೆಲಸಗಳನ್ನು ಮಾಡಿಸಲು ಶ್ರಮ ಹಾಕಲಿದ್ದೀರಿ. ಖರ್ಚಿನ ಪ್ರಮಾಣ ಹೆಚ್ಚಾಗಲಿದೆ. ಸ್ನೇಹಿತರು, ಸಂಬಂಧಿಕರನ್ನು ಭೇಟಿ ಆಗಲಿದ್ದೀರಿ. ಹೂಡಿಕೆ ಬಗ್ಗೆ ಆಲೋಚನೆ ಮಾಡಲಿದ್ದೀರಿ. ರುಚಿಕಟ್ಟಾದ ಊಟ- ತಿಂಡಿ ಮಾಡುವ ಯೋಗ ಇದೆ. ಹೊಸಬರ ಜತೆ ಸಾಂಸಾರಿಕ ವಿಚಾರಗಳನ್ನು ಹಂಚಿಕೊಳ್ಳಬೇಡಿ.

Today astrology in kannada today horoscope in kannada
ನಿಮ್ಮ ಕೆಲಸವನ್ನು ನೀವೇ ಮಾಡಿಕೊಳ್ಳುವುದು ಉತ್ತಮ. ಇನ್ನೊಬ್ಬರಿಗೆ ವಹಿಸಿದ ಮೇಲೆ ಅತಿಯಾದ ನಿರೀಕ್ಷೆ ಬೇಡ. ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಆಪ್ತರ ಬಗ್ಗೆ ಅನುಮಾನ ಪಡುವುದು ಸರಿಯಲ್ಲ. ವಾಹನ ಚಾಲನೆ ಮಾಡುವವರು ಎಚ್ಚರಿಕೆಯಿಂದ ಇರಬೇಕು. ಆತುರ ಬೇಡ.

Today astrology in kannada today horoscope in kannada
ಹೊಸ ವಿಷಯಗಳನ್ನು ಕಲಿತುಕೊಳ್ಳಲಿದ್ದೀರಿ. ವಸ್ತ್ರಾಭರಣ ಖರೀದಿಸಲಿದ್ದೀರಿ. ಗುರು- ಹಿರಿಯರ ಆಶೀರ್ವಾದ ಇರಲಿದೆ. ಸ್ನೇಹಿತರು- ಬಂಧುಗಳು ಹಣಕಾಸಿನ ನೆರವು ನೀಡಬಹುದು. ಮನರಂಜನೆಗಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಯಾರಿಗೂ ಸಾಲಕ್ಕೆ ಜಾಮೀನಾಗಿ ನಿಲ್ಲಬೇಡಿ.

Today astrology in kannada today horoscope in kannada
ಸಂಗಾತಿ, ಮಕ್ಕಳ ಜತೆ ಉತ್ತಮ ಸಮಯ ಕಳೆಯಲಿದ್ದೀರಿ. ವ್ಯಾಪಾರ- ವ್ಯವಹಾರ ಮಾಡುವವರಿಗೆ ಏಳ್ಗೆ ಇದೆ. ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಚರ್ಚೆ ನಡೆಯಲಿದೆ. ದೈಹಿಕ ಆಯಾಸ ಪರಿಹಾರಕ್ಕೆ ವಿಶ್ರಾಂತಿ ಪಡೆಯಲಿದ್ದೀರಿ. ಹೆಚ್ಚುವರಿ ಆದಾಯ ಮೂಲದ ಬಗ್ಗೆ ಯೋಚಿಸುತ್ತೀರಿ.

Today astrology in kannada today horoscope in kannada
ಮಧುಮೇಹ, ರಕ್ತದೊತ್ತಡ ಸಮಸ್ಯೆ ಇರುವವರು ಬಹಳ ಎಚ್ಚರಿಕೆಯಿಂದ ಇರಬೇಕು. ಇತರರು ನೀಡುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಏಕಾಗ್ರತೆಯಿಂದ ಕೆಲಸ ಮಾಡಿ. ಸಣ್ಣ ಪುಟ್ಟ ಅಪಘಾತ ಆಗುವ ಸಾಧ್ಯತೆ ಇದೆ. ಆದ್ಯತೆ ಮೇಲೆ ಕೆಲಸ- ಕಾರ್ಯಗಳನ್ನು ಪೂರ್ಣಗೊಳಿಸಿ.

Today astrology in kannada today horoscope in kannada
ಕೃಷಿಕರಿಗೆ ಮನೆಯಲ್ಲಿ ಸಂತೋಷವಾದ ದಿನ. ಹೊಸ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸುವಿರಿ. ನೇರವಾದ ಮಾತುಗಳಿಂದ ಇತರರ ಗಮನ ಸೆಳೆಯುತ್ತೀರಿ. ಸ್ವಲ್ಪ ಮಟ್ಟಿಗೆ ದೇಹಾಲಸ್ಯ ಇರುತ್ತದೆ. ಅದಕ್ಕಾಗಿ ವಿಶ್ರಾಂತಿ ಪಡೆಯಲಿದ್ದೀರಿ. ವೃತ್ತಿಪರರಿಗೆ ಹಿನ್ನಡೆ ಇದೆ.

Today astrology in kannada today horoscope in kannada
ಪ್ರೇಮಿಗಳಿಗೆ ವಿರಹದ ದಿನವಾಗಿರುತ್ತದೆ. ಇಷ್ಟಪಡುವ ಊಟ- ತಿಂಡಿ ಮಾಡುವ ಯೋಗ ಇದೆ. ಹಣ ಉಳಿತಾಯ ಯೋಜನೆ ಬಗ್ಗೆ ಸಂಗಾತಿ ಜತೆ ಚರ್ಚೆ ನಡೆಸಲಿದ್ದೀರಿ. ಸಮಯಕ್ಕೆ ಸರಿಯಾಗಿ ಊಟ- ತಿಂಡಿ ಮಾಡಿ. ಇಲ್ಲದಿದ್ದರೆ ಗ್ಯಾಸ್ಟ್ರಿಕ ಸಮಸ್ಯೆ ಆಗಬಹುದು. ಎಲ್ಲ ವಿಚಾರಕ್ಕೂ ಅನುಮಾನ ಪಡುವುದು ಸರಿಯಲ್ಲ.

Today astrology in kannada today horoscope in kannada
ಪ್ರಭಾವಿ ವ್ಯಕ್ತಿಗಳ ಸಂಪರ್ಕಕಕ್ಕೆ ಬರಲಿದ್ದೀರಿ. ವೃತ್ತಿನಿರತರಿಗೆ ಭವಿಷ್ಯದ ಸವಾಲಿನ ಬಗ್ಗೆ ಸೂಚನೆ ದೊರೆಯಲಿದೆ. ಸೋಷಿಯಲ್ ಮೀಡಿಯಾ ಬಳಸುವವರು ಬಹಳ ಎಚ್ಚರಿಕೆಯಿಂದ ಇರಬೇಕು. ವಾಗ್ವಾದ- ಭಿನ್ನಾಭಿಪ್ರಾಯ ಇಲ್ಲದಂತೆ ನೋಡಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement