ಬ್ಯೂಟಿ ಪಾರ್ಲರ್, ಸಲೂನ್ ಗೆ ತೆರಳುವವರು ಅಲ್ಲಿ ಬಳಸುವಂಥ ಪ್ರಾಡಕ್ಟ್ ಗಳ ಬಗ್ಗೆ ಎಚ್ಚರಿಕೆ ವಹಿಸಿ. ಇಲ್ಲದಿದ್ದಲ್ಲಿ ಚರ್ಮದ ಅಲರ್ಜಿ ಆಗುವ ಸಾಧ್ಯತೆಗಳಿವೆ. ಉದ್ಯೋಗ ಸ್ಥಳದಲ್ಲಿ ಹಣದ ವಿಚಾರಕ್ಕೆ ಭಿನ್ನಾಭಿಪ್ರಾಯಗಳು ಏರ್ಪಡಬಹುದು. ಸ್ವಂತ ವ್ಯಾಪಾರ ಆರಂಭಿಸಬೇಕು ಎಂದಿರುವವರಿಗೆ ಆ ತುಡಿತ ಹೆಚ್ಚಾಗಲಿದೆ.
ಕುಟುಂಬ ವ್ಯವಹಾರಗಳನ್ನು ನಡೆಸುತ್ತಿರುವವರಿಗೆ ಹಣಕಾಸಿನ ಒತ್ತಡ ಹೆಚ್ಚಾಗಲಿದೆ. ಸಂಗಾತಿ, ಮಕ್ಕಳು ಹೇಳುವ ಮಾತನ್ನು ಗಂಭೀರವಾಗಿ ಪರಿಗಣಿಸಿ. ಯಾರ ಬಗ್ಗೆಯೂ ಕಠಿಣವಾದ ಮಾತುಗಳನ್ನು ಆಡಬೇಡಿ. ಇದರಿಂದ ಸಂಬಂಧಗಳು ಹಾಳಾಗಬಹುದು. ಆದ್ದರಿಂದ ನಾಲಗೆ ಮೇಲೆ ಹಿಡಿತ ಇರಲಿ.
ಸ್ವಂತ ವ್ಯಾಪಾರ- ವ್ಯವಹಾರ ವಿಸ್ತರಣೆಗಾಗಿ ಹೆಚ್ಚಿನ ಶ್ರಮ ಹಾಕಲಿದ್ದೀರಿ. ಸಾಲಕ್ಕಾಗಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಪ್ರಯತ್ನ ತೀವ್ರಗೊಳಿಸಲಿದ್ದೀರಿ. ಸ್ನೇಹಿತರ ಜತೆಗಿನ ಚರ್ಚೆ ನಿಮ್ಮ ಕೆಲಸಕ್ಕೆ ಸಹಾಯ ಮಾಡಬಹುದು. ತಲೆ, ಕಣ್ಣು ನೋವು ಕಾಡಬಹುದು. ಅಗತ್ಯ ಪ್ರಮಾಣದ ವಿಶ್ರಾಂತಿ ಪಡೆಯಿರಿ.
ಯಾವುದೋ ಒಂದು ಬಗೆಯ ಭ್ರಮೆ ನಿಮ್ಮನ್ನು ಕಾಡಬಹುದು. ಎಂದೋ ನಡೆದ ಘಟನೆಯು ಇಂದಿನ ಸನ್ನಿವೇಶಕ್ಕೆ ತಳುಕು ಹಾಕಿಕೊಂಡು, ಮನಸ್ಸಿನಲ್ಲಿ ಆತಂಕ ಕಾಡುತ್ತದೆ. ಇತರರಿಗೆ ಭವಿಷ್ಯದ ಬಗ್ಗೆ ಸಲಹೆ- ಸೂಚನೆಗಳನ್ನು ನೀಡುವಾಗ ಧ್ವನಿಯಲ್ಲಿ ಕಾಠಿಣ್ಯ ಬೇಡ. ತಾಳ್ಮೆ- ಸಂಯಮದಿಂದ ಇರಬೇಕು.
ಹೊಸ ಮೊಬೈಲ್ ಫೋನ್, ಗ್ಯಾಜೆಟ್ ಅಥವಾ ಮನೆಗೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಿ ತರುವ ಸಾಧ್ಯತೆ ಇದೆ. ಅದಕ್ಕಾಗಿ ಕ್ರೆಡಿಟ್ ಕಾರ್ಡ್ ಅಥವಾ ಸಾಲ ಪಡೆಯುವ ಸಾಧ್ಯತೆ ಇದೆ. ಕಾಲು ನೋವು, ಹೊಟ್ಟೆ ನೋವಿನ ಸಮಸ್ಯೆ ಇರುವವರಿಗೆ ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ, ಎಚ್ಚರ.
ಆದಾಯ ಮೂಲಗಳನ್ನು ಹೆಚ್ಚಿಸಿಕೊಳ್ಳಲು ಬಹಳ ಶ್ರಮ ಪಡುತ್ತೀರಿ. ಆದರೆ ತಪ್ಪಾದ ದಾರಿಯಲ್ಲಿ ಬಹಳ ಮುಂದೆ ಸಾಗುವ ಸಾಧ್ಯತೆ ಇದೆ. ಆ ಕಾರಣದಿಂದ ಪ್ರತಿ ಹೆಜ್ಜೆಯನ್ನು ಇಡುವಾಗಲೂ ಎಚ್ಚರಿಕೆಯಿಂದ ಇರಬೇಕು. ಇತರರು ಮಾಡುವ ವಿಮರ್ಶೆಗಳಿಗೆ ಸಿಟ್ಟಾಗದೆ, ತಾಳ್ಮೆಯಿಂದ ಮುಂದಡಿ ಇಡಬೇಕು.
ವೇತನದ ವಿಚಾರ ಬಹಳ ಮುಖ್ಯವಾಗಿ ಕಂಡುಬರುತ್ತದೆ. ಉದ್ಯೋಗ ಸ್ಥಳದಲ್ಲಿ ಪ್ರಮುಖವಾದ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕಾಗುತ್ತದೆ. ಯಾವುದಕ್ಕೂ ಹೆದರಿಕೊಳ್ಳದೆ ಮುಂದಕ್ಕೆ ಹೆಜ್ಜೆ ಇಡಬೇಕು. ಪ್ರಯಾಣ ಮಾಡಬೇಕಾದ ಸಂದರ್ಭ ಬರುತ್ತದೆ. ದೇಹಾಯಾಸವು ಕಾಡುತ್ತದೆ.
ಮನೆಯ ದುರಸ್ತಿ, ಪೇಂಟಿಂಗ್, ವಸ್ತುಗಳ ಬದಲಾವಣೆ ಇತ್ಯಾದಿಗಳಿಗೆ ಹಣ ಖರ್ಚು ಮಾಡಬೇಕಾಗುತ್ತದೆ. ತಂದೆಯ ನೆರವು ದೊರೆತು, ಕೆಲಸ- ಕಾರ್ಯಗಳು ಸುಲಭವಾಗಿ ಸಾಗುತ್ತದೆ. ಮಕ್ಕಳಿಗಾಗಿ ಮಾಡಿದ್ದ ಉಳಿತಾಯದ ಹಣಕ್ಕೆ ಇನ್ನಷ್ಟು ಸೇರ್ಪಡೆ ಮಾಡುವಂಥ ಸಾಧ್ಯತೆ ಇದೆ.
ಒಂಟಿತನ ಬಹಳ ಕಾಡುತ್ತದೆ. ನೀವು ಹೇಳಿಕೊಳ್ಳಬೇಕು ಅಂದುಕೊಂಡ ವಿಚಾರವು ಬಹಳ ಸೂಕ್ಷ್ಮವಾಗಿರುವುದರಿಂದ ಹೊಸಬರೊಂದಿಗೆ ಮಾತುಕತೆ ಕಷ್ಟವಾಗುತ್ತದೆ. ಇನ್ನು ಸಂಗಾತಿ ಜತೆ ಹಂಚಿಕೊಂಡರೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಂತೆ ಆಗುತ್ತದೆ. ಆದ್ದರಿಂದ ಸಾಧ್ಯವಾದಷ್ಟೂ ಮೌನವಾಗಿರಿ.
ಮರೆವು ಕಾಡಬಹುದು. ಮುಖ್ಯವಾದ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಲ್ಲಿ ಅದನ್ನು ಏಕಾಗ್ರತೆಯಿಂದ ಮಾಡಿ, ಮುಗಿಸಿ. ಎಲ್ಲದರಲ್ಲೂ ಲಾಭದ ದೃಷ್ಟಿ ಇಟ್ಟುಕೊಂಡೇ ಆಲೋಚನೆ ಮಾಡುವುದು ತಪ್ಪಾಗುತ್ತದೆ. ಅದರಲ್ಲೂ ಸಂಬಂಧಿಕರು ಸಹಾಯ ಕೇಳಿದರೆ ಮುಕ್ತ ಮನಸ್ಸಿನಿಂದ ನೆರವು ನೀಡಿ.
ಆಹ್ವಾನ ಇದ್ದಲ್ಲಿ ಮಾತ್ರ ಸಂಬಂಧಿಕರು, ಸ್ನೇಹಿತರ ಮನೆಗೆ ಹೋಗಿ, ಇಲ್ಲದಿದ್ದಲ್ಲಿ ಅವಮಾನ ಎದುರಿಸಬೇಕಾಗುತ್ತದೆ. ಎಂದೋ ಆಗಿಹೋದ ಘಟನೆಯನ್ನು ಎಳೆದುತಂದು ನಿಮ್ಮ ವರ್ಚಸ್ಸಿಗೆ ಧಕ್ಕೆ ತರುವುದಕ್ಕೆ ಕೆಲವರು ಪ್ರಯತ್ನಿಸಬಹುದು. ನೀವು ಅದಕ್ಕೆ ಅವಕಾಶ ಮಾಡಿಕೊಡಬೇಡಿ.
ಈ ಹಿಂದೆ ಶ್ರಮ ಪಟ್ಟು ಮಾಡಿದ ಕೆಲಸಗಳಿಗೆ ಈಗ ಪ್ರತಿಫಲ ದೊರೆಯಲಿದೆ. ಮೇಲಧಿಕಾರಿಗಳು ನಿಮ್ಮ ಸಾಮರ್ಥ್ಯವನ್ನು ಗುರುತಿಸಲಿದ್ದಾರೆ. ಮುಖ್ಯ ಜವಾಬ್ದಾರಿಗಳನ್ನು ನಿಮಗೆ ವಹಿಸುವ ಸಾಧ್ಯತೆ ಇದೆ. ಸಮಯಕ್ಕೆ ಸರಿಯಾಗಿ ಊಟ- ತಿಂಡಿಯನ್ನು ಮಾಡಿ. ದೇಹಾಯಾಸದಿಂದ ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಆಗಬಹುದು.
Tags:
ದಿನ ಭವಿಷ್ಯ