ನಿಮ್ಮ ಸಿಟ್ಟು, ಕೋಪ- ತಾಪವನ್ನೆಲ್ಲ ಕಟ್ಟಿಡುವುದು ಉತ್ತಮ. ಸಣ್ಣ- ಪುಟ್ಟ ವಿಚಾರಕ್ಕೂ ರೇಗಿದರೆ, ಸಿಡುಕಿದರೆ ನಿಮ್ಮ ಜತೆಗೆ ಯಾರ ಉಳಿಯುವುದಿಲ್ಲ. ಇನ್ನು ಉದ್ಯೋಗ ಸ್ಥಳದಲ್ಲಿ ಮತ್ತೊಬ್ಬರಿಂದ ಕೆಲಸವನ್ನು ತೆಗೆಯುವ ಸಾಮರ್ಥ್ಯಕ್ಕೆ ನಿಮ್ಮ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರಲಿವೆ.
ಯಾವುದೇ ದಾಖಲೆ, ಸಾಕ್ಷ್ಯ ಇಲ್ಲದೆ ಇನ್ನೊಬ್ಬರ ಮೇಲೆ ಆರೋಪ ಹೊರಿಸಬೇಡಿ. ನಿಮ್ಮ ಹುದ್ದೆಯ ವಿಚಾರಕ್ಕೆ ಹಾಗೂ ಜವಾಬ್ದಾರಿ ಹಂಚಿಕೆ ಬಗ್ಗೆ ಸಣ್ಣ ಮಟ್ಟದಲ್ಲಿಯಾದರೂ ಅಸಮಾಧಾನ ಉದ್ಭವಿಸುತ್ತದೆ. ಹಣಕಾಸು ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ನಿಮಗೆ ಧೈರ್ಯ ಸಾಕಾಗುವುದಿಲ್ಲ.
ಆದಾಯದ ಮೂಲಗಳನ್ನು ಮಾಡಿಕೊಳ್ಳುವುದಕ್ಕೆ ನಾನಾ ದಾರಿಗಳು ಗೋಚರವಾಗುತ್ತವೆ. ಸಂಗಾತಿ ಕಡೆಯ ಸಂಬಂಧಿಕರು ನೆರವಿಗೆ ನಿಲ್ಲುತ್ತಾರೆ. ನಿರ್ಧಾರ ತೆಗೆದುಕೊಳ್ಳುವ ನಿಮ್ಮ ಸಾಮರ್ಥ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತದೆ. ತಾನಾಗಿಯೇ ಅವಕಾಶ ಬಂದಲ್ಲಿ ಸಾಧಕ- ಬಾಧಕಗಳ ಬಗ್ಗೆ ಆಲೋಚಿಸಿ, ಆ ನಂತರ ನಿರ್ಧಾರ ಕೈಗೊಳ್ಳಿ.
ಪೋಷಕರ ನೆರವು, ಸಲಹೆ ಪಡೆಯಬೇಕಾದ ಅನಿವಾರ್ಯ ಸನ್ನಿವೇಶ ಸೃಷ್ಟಿಯಾಗುತ್ತದೆ. ವೃತ್ತಿನಿರತರಿಗೆ ಅವಕಾಶಗಳು ಸಿಗದೆ ಬೇಸರ ಉಂಟಾಗಲಿದೆ. ಸ್ವಾಭಿಮಾನಕ್ಕೆ ಪೆಟ್ಟು ಬೀಳುವಂಥ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ದುಡ್ಡಿನ ವಿಚಾರದಲ್ಲಿ ಇತರರ ಆಮಿಷಗಳನ್ನು ನಂಬಬೇಡಿ.
ತಂದೆಗೆ ಆರೋಗ್ಯದಲ್ಲಿ ಸಮಸ್ಯೆಗಳಿದ್ದಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತದೆ. ಕೆಲಸದ ಒತ್ತಡ ಕೂಡ ಕಡಿಮೆ ಆದಂತೆ ಭಾಸವಾಗುತ್ತದೆ. ಜವಾಬ್ದಾರಿಗಳನ್ನು ಪೂರೈಸಲೇಬೇಕಾದ ಒತ್ತಡದಲ್ಲಿ ಕುಟುಂಬದ ಬಗ್ಗೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗುವುದಿಲ್ಲ. ಇದರಿಂದ ಸಂಗಾತಿ ಜತೆಗೆ ಮನಸ್ತಾಪ ಉಂಟಾಗಬಹುದು.
ತಾಯಿಯ ಮಾತನ್ನು ಕೇಳಿಸಿಕೊಳ್ಳಿ. ಅತಿಯಾದ ಖರ್ಚು ಆಗುವ ಯೋಗ ಇದೆ. ಕ್ರೆಡಿಟ್ ಕಾರ್ಡ್ ಬಳಸುವಂಥವರು ಎಚ್ಚರಿಕೆಯಿಂದ ಖರ್ಚನ್ನು ಮಾಡಿ. ದೂರ ಪ್ರಯಾಣ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾದಲ್ಲಿ ಅದರ ಅಗತ್ಯ ಇದೆಯೇ ಎಂಬುದನ್ನು ಒಂದಕ್ಕೆ ಎರಡು ಬಾರಿ ಆಲೋಚಿಸಿ.
ಮನೆಗೆ ಅಗತ್ಯ ಇರುವ ವಸ್ತುಗಳನ್ನು ಖರೀದಿ ಮಾಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಈ ಹಿಂದೆ ನೀವು ಕೆಲಸ ಮಾಡಿದ್ದ ಸ್ಥಳದಿಂದ ಕರೆ ಬರುವ ಸಾಧ್ಯತೆ ಇದೆ. ಹೆಚ್ಚಿನ ಸಂಬಳ- ಹುದ್ದೆಗೆ ಬರುವಂತೆ ಕರೆಯಬಹುದು. ಆದರೆ ಈ ಬಗ್ಗೆ ಪೂರ್ಣವಾದ ಮಾತುಕತೆ ನಡೆಸದೆ ಮುಂದಕ್ಕೆ ಹೆಜ್ಜೆ ಇಡಬೇಡಿ.
ನೀವೇ ಅವಕಾಶ ಕೊಡಿಸಿದ ವ್ಯಕ್ತಿಗಳಿಂದ ಈಗ ತೊಂದರೆ ಎದುರಾಗಬಹುದು. ದೀರ್ಘಾವಧಿ ಹೂಡಿಕೆ ಬಗ್ಗೆ ಸಂಗಾತಿ ಜತೆ ಚರ್ಚೆ ನಡೆಸಲಿದ್ದೀರಿ. ಒಪ್ಪಂದದಂತೆ ಕೆಲಸ ಮುಗಿಸಿಕೊಡುವುದು ನಿಮಗೆ ಕಷ್ಟವಾಗಬಹುದು. ಆದರೆ ಈ ಕಾರಣಕ್ಕೆ ಮಾನಸಿಕವಾಗಿ ಚಿಂತೆಗೆ ಗುರಿಯಾಗುವುದರಲ್ಲಿ ಅರ್ಥವಿಲ್ಲ.
ವ್ಯಾಪಾರ- ವ್ಯವಹಾರದಲ್ಲಿ ಇರುವವರು ದೊಡ್ಡ ಮಟ್ಟದ ಹೂಡಿಕೆಗಳನ್ನು ಮಾಡಬಾರದು. ಅನಿವಾರ್ಯ ಅಥವಾ ತೀರಾ ತುರ್ತಿನ ಸಂದರ್ಭ ಹೊರತುಪಡಿಸಿದರೆ ಸಾಲ ಮಾಡಬಾರದು. ಅಥವಾ ಯಾರಿಗಾದರೂ ಸಾಲಕ್ಕೆ ಜಾಮೀನಾಗಿ ನಿಂತರೂ ಅದರಿಂದ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.
ಹೆಚ್ಚು ಹಣ ಖರ್ಚು ಮಾಡುವ ಯೋಗ ಇದೆ. ಖರ್ಚು ಮಾಡುವ ವಿಚಾರದಲ್ಲಿ ಸ್ಪಷ್ಟತೆ ಬಹಳ ಅಗತ್ಯ. ಯಾರ ಮೇಲೂ ದ್ವೇಷ ಸಾಧಿಸಲು ಪ್ರಯತ್ನಿಸಬೇಡಿ. ಮಾಧ್ಯಮ ಕ್ಷೇತ್ರದಲ್ಲಿ ಇರುವವರಿಗೆ ಒತ್ತಡದ ದಿನವಾಗಿರುತ್ತದೆ. ಮೇಲಧಿಕಾರಿಗಳು ನಿಮ್ಮ ಮೇಲೆ ಸಿಟ್ಟು ಮಾಡಿಕೊಳ್ಳುವ ಸಾಧ್ಯತೆ ಇದೆ.
ಹಣ ಉಳಿಸಬೇಕು ಎಂಬ ನಿಮ್ಮ ಪ್ರಯತ್ನಗಳು ಸ್ವಲ್ಪ ಮಟ್ಟಿಗೆ ಕೈಗೂಡುತ್ತವೆ. ಸಂಗಾತಿ ಜತೆಗೆ ಉತ್ತಮ ಕ್ಷಣಗಳನ್ನು ಕಳೆಯುವ ಯೋಗ ಇದೆ. ಕಿರು ಪ್ರಯಾಣದಿಂದ ಲಾಭವಾಗುವ ಸಾಧ್ಯತೆ ಇದೆ. ಪಾರ್ಟನರ್ ಷಿಪ್ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ವ್ಯಾಪಾರ ವಿಸ್ತರಣೆ ಆಲೋಚನೆ ಬರುತ್ತದೆ.
ಚರ್ಮಕ್ಕೆ ಸಂಅಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ವೈದ್ಯರನ್ನು ಕಡ್ಡಾಯವಾಗಿ ಭೇಟಿ ಮಾಡಿ. ಆಹಾರ ಪಥ್ಯ- ನೀರು ಸೇವನೆ ಕಡೆ ಗಮನ ಇರಲಿ. ಎಲ್ಲೆಂದರಲ್ಲಿ ಆಹಾರ- ನೀರು ಸೇವಿಸಿದಲ್ಲಿ ಆರೋಗ್ಯ ಸಮಸ್ಯೆ ಎದುರಾದೀತು, ಎಚ್ಚರ. ಉದ್ಯೋಗ ಸ್ಥಳದಲ್ಲಿ ಬದಲಾವಣೆ ಸಾಧ್ಯತೆ ಇದೆ.
Tags:
ದಿನ ಭವಿಷ್ಯ