ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ವಿಪರೀತ ಒತ್ತಡದ ದಿನವಾಗಿರುತ್ತದೆ. ಖರ್ಚಿನ ಪ್ರಮಾಣ ವಿಪರೀತ ಹೆಚ್ಚಾಗುತ್ತದೆ. ಸಂಬಂಧಿಗಳು ಸಹಾಯ ಕೇಳಿಕೊಂಡು ಬರುವ ಸಾಧ್ಯತೆ ಇದೆ. ಅಥವಾ ಸಾಲವನ್ನು ಮರುಪಾವತಿ ಮಾಡಬೇಕಾದ ಅನಿವಾರ್ಯ ಸ್ಥಿತಿ ಉದ್ಭವ ಆಗುತ್ತದೆ.
ಸಿಹಿ ತಿನಿಸು ಸೇವಿಸುವಾಗ ಔಷಧ- ಪಥ್ಯದ ಕಡೆಗೆ ಗಮನ ಇರಲಿ. ಬೇರೆಯವರ ಕೆಲಸವನ್ನು ವಹಿಸಿಕೊಂಡು ಮಾಡುವಾಗ ಮೈಯೆಲ್ಲ ಕಣ್ಣಾಗಿರಲಿ. ನೀವಾಗಿಯೇ ಮೈಮೇಲೆ ಜವಾಬ್ದಾರಿ ಎಳೆದುಕೊಳ್ಳಬೇಡಿ. ಪಾರ್ಟನರ್ ಷಿಪ್ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ವಿಸ್ತರಣೆಗೆ ಅವಕಾಶ ದೊರೆಯುತ್ತದೆ.
ಚಿನ್ನ- ಬೆಳ್ಳಿ ಪದಾರ್ಥಗಳನ್ನು ಅಡಮಾನ ಮಾಡಬೇಕಾದ ಅಥವಾ ಮಾರಿಕೊಳ್ಳಬೇಕಾದ ಪರಿಸ್ಥಿತಿ ಬರಬಹುದು. ದುಡ್ಡು- ಕಾಸಿನ ವಿಚಾರದಲ್ಲಿ ಯಾರನ್ನು ನಂಬಬೇಕು ಎಂಬುದು ತಿಳಿಯದೆ ಗೊಂದಲಕ್ಕೆ ಸಿಲುಕಿಕೊಳ್ಳುತ್ತೀರಿ. ಸಾಫ್ಟ್ ವೇರ್ ಡೆವಲಪ್ ಮೆಂಟ್ ಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಪ್ರಗತಿ ಇದೆ.
ಸರ್ಕಾರಿ ಕೆಲಸ- ಕಾರ್ಯಗಳಲ್ಲಿ ಪ್ರಗತಿ ಇದೆ. ಬಾಕಿ ಉಳಿದ ಕೆಲಸಗಳನ್ನು ಆದ್ಯತೆ ಮೇಲೆ ಪೂರೈಸುತ್ತಾ ಸಾಗುತ್ತೀರಿ. ಇನ್ನೊಬ್ಬರ ಮೇಲಿನ ಮರುಕದಿಂದ ಸಾಲಕ್ಕೆ ಜಾಮೀನಾಗಿ ನಿಲ್ಲುವ ಮೊದಲು ಪೂರ್ವಾಪರ ಆಲೋಚನೆ ಮಾಡಿ, ಮುಂದಕ್ಕೆ ಹೆಜ್ಜೆ ಇಡಿ. ಚಿತ್ರರಂಗದಲ್ಲಿ ಇರುವವರಿಗೆ ಹೊಸ ಆಲೋಚನೆಗಳು ಮೂಡುತ್ತವೆ.
ನಾನು ಮಾಡಿದ್ದೇ ಸರಿ ಎಂಬ ಧೋರಣೆ ಈ ದಿನ ಸರಿಯಲ್ಲ. ನಿಮ್ಮ ಪಾಲಿನ ಜವಾಬ್ದಾರಿಯನ್ನು ಶ್ರದ್ಧೆಯಿಂದ, ನಿಶ್ಚಿತ ಕಾಲಾವಧಿಯೊಳಗೆ ಪೂರೈಸಿ. ಸಂತಾನ ಅಪೇಕ್ಷಿತ ದಂಪತಿಗೆ ಶುಭ ಸುದ್ದಿ ಕೇಳುವ ಯೋಗ ಇದೆ. ಮೇಲಧಿಕಾರಿಗಳ ಜತೆಗೆ ಬಡ್ತಿ ವಿಚಾರವಾಗಿ ಚರ್ಚೆ ನಡೆಸಲಿದ್ದೀರಿ.
ವೇದಾಧ್ಯಯನ, ಜ್ಯೊತಿಷ್ಯ ಅಧ್ಯಯನ ಮಾಡುತ್ತಿರುವವರಿಗೆ ದೊಡ್ಡ ಅವಕಾಶ ಕಾಣಿಸಿಕೊಳ್ಳುತ್ತದೆ. ಆದರೆ ಬಹಳ ಎಚ್ಚರಿಕೆಯಿಂದ ಇದನ್ನು ನಿರ್ವಹಿಸಬೇಕು. ಸ್ವಲ್ಪ ಹೆಚ್ಚ್- ಕಡಿಮೆಯಾದರೂ ಬೇರೆಯವರಿಗೆ ಈ ಅವಕಾಶ ಹೋಗುವ ಸಾಧ್ಯತೆ ಇರುತ್ತದೆ. ಮನೆಗೆ ಅಗತ್ಯ ಇರುವ ವಸ್ತುಗಳಿಗಾಗಿ ಖರ್ಚು ಮಾಡಲಿದ್ದೀರಿ.
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿ ಇರುವವರಿಗೆ ಚರ್ಚೆ, ವಾದ- ವಿವಾದ ಆಗುವ ಸಾಧ್ಯತೆಗಳಿವೆ. ನಿಮ್ಮ ಅಭಿಪ್ರಾಯವನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂಬ ಧೋರಣೆ ಸರಿಯಲ್ಲ. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಬಗ್ಗೆ ದಯೆ- ಕನಿಕರ ಇಟ್ಟುಕೊಳ್ಳ್. ಸಣ್ಣ- ಪುಟ್ಟ ತಪ್ಪುಗಳನ್ನು ದೊಡ್ಡದು ಮಾಡಬೇಡಿ.
ಅಧ್ಯಾತ್ಮ ಚಿಂತನೆಯಿಂದ ಮನಸಿಗೆ ನೆಮ್ಮದಿ ದೊರೆಯುತ್ತದೆ. ಹಳೇ ಸಾಲ ಬಾಕಿ ಬರಬೇಕಿದ್ದಲ್ಲಿ ಈಗ ಪ್ರಯತ್ನಿಸಿದರೆ ಫಲ ನೀಡುವ ಸಾಧ್ಯತೆ ಹೆಚ್ಚಿರುತ್ತದೆ. ಪ್ರೀತಿಪಾತ್ರರ ಜತೆಗೆ ಸಮಯ ಕಳೆಯಲು ಅವಕಾಶ ದೊರೆಯುತ್ತದೆ. ಹೊಸ ವಾಹನ ಖರೀದಿಗೆ ಮನಸ್ಸು ಮಾಡಲಿದ್ದೀರಿ.
ಹೊಸ ವಸ್ತ್ರ- ವಾಹನಗಳ ಖರೀದಿಗೆ ಸಂಗಾತಿ ಜತೆ ಚರ್ಚೆ ನಡೆಸಲಿದ್ದೀರಿ. ಭೂ ವ್ಯಾಜ್ಯಗಳು ಇದ್ದಲ್ಲಿ ಅದು ಇನ್ನಷ್ಟು ಗೋಜಲಾಗುವ ಸಾಧ್ಯತೆ ಇದೆ. ಮಕ್ಕಳ ಶಿಕ್ಷಣ ವಿಚಾರಕ್ಕೆ ನೀವು ಅಂದುಕೊಂಡಂತೆ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಖೇದ ಆಗುತ್ತದೆ. ವೈದ್ಯ ವೃತ್ತಿಯಲ್ಲಿ ಇರುವವರಿಗೆ ಒತ್ತಡ ಹೆಚ್ಚಾಗುತ್ತದೆ.
ರುಚಿಕಟ್ಟಾದ ಊಟ- ತಿಂಡಿ ಸವಿಯುವ ಯೋಗ ಇದೆ. ಸ್ನೇಹಿತರ ನೆರವಿನಿಂದ ಮಾನಸಿಕ ಸಂತೋಷ, ನೆಮ್ಮದಿ ಇದೆ. ಉದ್ಯೋಗ ವಿಚಾರವಾಗಿ ನಿರೀಕ್ಷಿತ ಮಟ್ಟ ಮುಟ್ಟಲು ಸಾಧ್ಯವಾಗುತ್ತಿಲ್ಲ ಎಂಬ ಚಿಂತೆ ಕಾಡಲಿದೆ. ವಕೀಲ ವೃತ್ತಿಯಲ್ಲಿ ಇರುವವರಿಗೆ ಹೊಸ ಒಪ್ಪಂದಗಳಿಗೆ ಸಹಿ ಹಾಕುವ ಯೋಗ ಇದೆ.
ಭೂಮಿ- ಆಸ್ತಿ ಖರೀದಿಗಾಗಿ ಮುಂಗಡ ನೀಡಿದ್ದರೆ ಅದೇ ವಿಚಾರವು ಚಿಂತೆಯಾಗಿ ಕಾಡಲಿದೆ. ತಂದೆ- ತಾಯಿ ಜತೆಗೆ ಬಿರುಸಿನ ಮಾತುಕತೆ ಆಗಬಹುದು. ನಿಮ್ಮ ಬಳಿ ಇರುವ ದಾಖಲೆ- ಪತ್ರಗಳಲ್ಲಿನ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿ. ಭವಿಷ್ಯದ ಬಗ್ಗೆ ನಿಮಗೆ ಹೊಳೆಯುವ ಆಲೋಚನೆಗೆ ವಿರುದ್ಧವಾಗಿ ವರ್ತಿಸಬೇಡಿ.
ಯಾರ ಮೇಲಾದರೂ ಸರಿ, ನಿಮ್ಮ ಸಿಟ್ಟನ್ನು ಪ್ರದರ್ಶನ ಮಾಡಲಿದ್ದೀರಿ. ಆದರೆ ಪೂರ್ವಾಪರ ವಿಚಾರಿಸದೆ ರೇಗಾಡಿದರೆ ನೀವೇ ಅವಮಾನದ ಪಾಲಾಗುತ್ತೀರಿ. ಯೋಗ- ಪ್ರಾಣಾಯಾಮದ ಅಭ್ಯಾಸ ಇದ್ದಲ್ಲಿ ಮಾಡಿ. ಇದರಿಂದ ಮನಸ್ಸು ಹತೋಟಿಗೆ ಬರುತ್ತದೆ. ಗುರು- ಹಿರಿಯರ ಬಗ್ಗೆ ಹಗುರವಾದ ಮಾತನಾಡಬೇಡಿ.
Tags:
ದಿನ ಭವಿಷ್ಯ