ಸೋಷಿಯಲ್ ಮೀಡಿಯಾದಲ್ಲಿ ಬಹಳ ಚಟುವಟಿಕೆಯಿಂದ ಇರುವವರು ಕಾಮೆಂಟ್ಸ್, ಪೋಸ್ಟ್ ಬಗ್ಗೆ ಎಚ್ಚರಿಕೆ ವಹಿಸಿ. ನಿಮಗೆ ಸಂಬಂಧಿಸದ ವ್ಯವಹಾರಗಳಲ್ಲಿ ಮೂಗು ತೂರಿಸಬೇಡಿ. ವೃತ್ತಿ- ವ್ಯಾಪಾರಕ್ಕೆ ಸಂಬಂಧಿಸಿದಂತೆ ಹೊಸಬರ ಪರಿಚಯ ಆಗಬಹುದು. ಅವರ ಪರಿಚಯದ ಲಾಭ ಪಡೆದುಕೊಳ್ಳಿ.
ದೇಹಾಲಸ್ಯ ನಿಮ್ಮನ್ನು ಕಾಡಲಿದೆ. ಬಹಳ ಕಾಲದಿಂದ ಸಮಸ್ಯೆಯಾಗಿದ್ದ ಕಾಲು- ಭುಜದ ನೋವು ಮರುಕಳಿಸುವ ಸಾಧ್ಯತೆ ಇದೆ. ನೋವು ತೀವ್ರವಾಗುವ ಮುನ್ನವೇ ವೈದ್ಯರನ್ನು ಭೇಟಿಯಾಗಿ, ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಿ. ಮನಸ್ಸಿನಲ್ಲಿ ಶಿವನ ಸ್ಮರಣೆ ಮಾಡಿದ ನಂತರವೇ ಯಾವುದೇ ಮುಖ್ಯ ಕಾರ್ಯದಲ್ಲಿ ತೊಡಗಿಕೊಳ್ಳಿ.
ಉದ್ಯೋಗ ಸ್ಥಳದಲ್ಲಿ ನಿಮ್ಮ ಸಾಮರ್ಥ್ಯ, ಪ್ರಾಮಾಣಿಕತೆ ಮತ್ತು ನಿಷ್ಠೆಯ ಬಗ್ಗೆ ಗೌರವ ಹೆಚ್ಚಾಗಲಿದೆ. ಉಳಿದವರು ನಿವಾರಿಸಲು ಸಾಧ್ಯವಾಗದಂಥ ಸಮಸ್ಯೆಗಳನ್ನು ನೀವು ಪರಿಹರಿಸಿ, ಉಳಿದವರು ಹೆಮ್ಮೆ ಪಡುವಂತೆ ಮಾಡಲಿದ್ದೀರಿ. ಮೂರನೇ ವ್ಯಕ್ತಿಯ ಕಾರಣಕ್ಕೆ ಆಪ್ತರ ಜತೆಗೆ ವಾಗ್ವಾದ ನಡೆಯುವ ಸಾಧ್ಯತೆಗಳಿವೆ.
ವಂಶಪಾರಂಪರ್ಯವಾಗಿ ಬಂದಿರುವ ವೃತ್ತಿಯನ್ನು ಮುಂದುವರಿಸಿಕೊಂಡು ಬಂದಿರುವವರಿಗೆ ಆದಾಯದಲ್ಲಿ ಇಳಿಕೆ ಕಾಣಿಸಿಕೊಳ್ಳುತ್ತದೆ. ಚಿತ್ತ ಚಂಚಲತೆ ಕಾಡಿ, ಅನಗತ್ಯವಾಗಿ ಖರ್ಚು ಮಾಡುವ ಸನ್ನಿವೇಶ ಸೃಷ್ಟಿಯಾಗಬಹುದು. ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವ ಮುನ್ನ ಒಂದಕ್ಕೆ ಹತ್ತು ಬಾರಿ ಯೋಚನೆ ಮಾಡಿ.
ನಿಮ್ಮ ಆಲೋಚನೆಗಳ ವೇಗಕ್ಕೆ ಕೆಲಸ ಮಾಡುವಂಥ ವ್ಯಕ್ತಿಗಳ ಪರಿಚಯ ಆಗುತ್ತದೆ. ವೃತ್ತಿನಿರತರಿಗೆ ಅನುಭವದ ಕೊರತೆ ಎದ್ದುಕಾಣಬಹುದು. ಕೂಡಿಟ್ಟ ಹಣದಲ್ಲಿ ದೊಡ್ಡ ಪ್ರಮಾಣವನ್ನು ತೆಗೆಯಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಕೆಲವು ತಾತ್ಕಾಲಿಕ ಸವಾಲುಗಳ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯ ಇಲ್ಲ.
ನಿಮ್ಮ ಮಿತಿಯನ್ನೂ ಮೀರಿ ಸಾಲ ಮಾಡುವುದು ಸರಿಯಾದ ನಿರ್ಧಾರ ಅಲ್ಲ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಭವಿಷ್ಯದ ಸವಾಲುಗಳ ಬಗ್ಗೆ ಸುಳಿವು ದೊರೆಯುತ್ತದೆ. ನೀವು ಅಪ್ ಡೇಟ್ ಆಗಲೇಬೇಕಾದ ಸಮಯ ಇದು. ಮೂರನೇ ವ್ಯಕ್ತಿಗಳ ಚಾಡಿ ಮಾತನ್ನು ನಂಬಬೇಡಿ.
ಯಾವ ಕೆಲಸವನ್ನು ಮಾಡಲು ಬಹಳ ಕಷ್ಟ ಆಗಬಹುದು ಎಂದು ಅಂದುಕೊಂಡಿರುತ್ತೀರೋ ಅದು ಬಹಳ ಸುಲಭಕ್ಕೆ ಪೂರ್ಣವಾಗುವ ಸಾಧ್ಯತೆಗಳಿವೆ. ಸಿಗುವ ಯಾವ ಅವಕಾಶವನ್ನೂ ಬಿಡದೆ ಸದುಪಯೋಗ ಮಾಡಿಕೊಳ್ಳಿ. ಆಹಾರ- ಪಥ್ಯದ ವಿಚಾರದಲ್ಲಿ ಕಟ್ಟುನಿಟ್ಟಾಗಿ ಇರಬೇಕು. ಅದರಲ್ಲೂ ರಕ್ತದೊತ್ತಡದ ಸಮಸ್ಯೆ ಇರುವವರು ಜೋಪಾನ.
ದಾಕ್ಷಿಣ್ಯ ಪಟ್ಟುಕೊಂಡು ನೀವು ಕೈ ಬಿಟ್ಟ ಕೆಲಸವನ್ನು ಮತ್ತೊಬ್ಬರು ಯಶಸ್ವಿಯಾಗಿ ಮಾಡಿ, ಮುಗಿಸುವ ಸಾಧ್ಯತೆ ಇದೆ. ಉದ್ಯೋಗಸ್ಥರಿಗೆ ಒತ್ತಡದ ಸನ್ನಿವೇಶ ಇರುತ್ತದೆ. ಮೇಲಧಿಕಾರಿಗಳಿಂದ ಚುಚ್ಚು ಮಾತುಗಳನ್ನು ಕೇಳಬೇಕಾಗುತ್ತದೆ. ಅದೇ ಸಿಟ್ಟಿನಲ್ಲಿ ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಮೇಲೆ ರೇಗುವುದು, ಸಿಟ್ಟು ಮಾಡಿಕೊಳ್ಳುವುದು ಸರಿಯಲ್ಲ.
ಚರ್ಮದ, ರಕ್ತಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆ ಇರುವವರಿಗೆ ಕಾಯಿಲೆ ಉಲ್ಬಣವಾಗುವ ಸಾಧ್ಯತೆ ಇದೆ. ಸೂಕ್ತ ವೈದ್ಯರನ್ನು ಭೇಟಿಯಾಗಿ, ಪರಿಣಾಮಕಾರಿಯಾದ ಔಷಧ ಸೇವನೆ ಅತ್ಯಗತ್ಯವಾಗಿ ಮಾಡಲೇಬೇಕು. ಮನೆಯಲ್ಲಿ ಸ್ವಚ್ಛತೆ ಕಡೆಗೆ ಗಮನ ನೀಡಿ. ಸಂಗಾತಿ- ಮಕ್ಕಳ ಜತೆಗೆ ಹೆಚ್ಚು ಸಮಯ ಕಳೆಯುವಿರಿ.
ಮನೆಗೆ ಅಗತ್ಯ ಇರುವ ವಸ್ತುಗಳ ಖರೀದಿಗಾಗಿ ಕ್ರೆಡಿಟ್ ಕಾರ್ಡ್ ಬಳಸುವ, ಹೆಚ್ಚಿನ ಖರ್ಚು ಮಾಡುವ ಸಾಧ್ಯತೆ ಇದೆ. ಬಹಳ ಉತ್ಸಾಹದಿಂದ ಕೆಲಸ- ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ನೀವು ಈ ಹಿಂದೆ ಪಟ್ಟ ಶ್ರಮಕ್ಕೆ ಈಗ ಪ್ರತಿಫಲ ದೊರೆಯಲಿದೆ. ಆದರೆ ನಾಲಗೆ ಮೇಲೆ ಹಿಡಿತ ಇರಲಿ. ಯಾರ ಬಗ್ಗೆಯೂ ಹಗುರವಾಗಿ ಮಾತನಾಡಬೇಡಿ.
ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ದಾನ- ಧರ್ಮಾದಿ ಕಾರ್ಯಗಳ ನೇತೃತ್ವವನ್ನು ವಹಿಸಲಿದ್ದೀರಿ. ಎಂಥ ಬದಲಾವಣೆಗೂ ಸುಲಭವಾಗಿ ಹೊಂದಿಕೊಳ್ಳುವುದು ನಿಮ್ಮಿಂದ ಸಾಧ್ಯವಾಗುತ್ತದೆ. ರಾಜಕಾರಣಿಗಳಿಗೆ ವಿಪರೀತ ಓಡಾಟದ ದಿನವಾಗಿರುತ್ತದೆ. ವ್ಯಾಪಾರಿಗಳು- ಉದ್ಯಮಿಗಳು ಸಾಲಕ್ಕಾಗಿ ಬ್ಯಾಂಕ್ ಗಳಿಗೆ ಓಡಾಟ ಹೆಚ್ಚು ಮಾಡುತ್ತೀರಿ.
ಕೃಷಿಕರಿಗೆ ನಾನಾ ಬಗೆಯ ಸವಾಲುಗಳು ಎದುರಾಗುತ್ತವೆ. ಕುಟುಂಬ ಸದಸ್ಯರ ಸಲುವಾಗಿ ಹಣ ಹೊಂದಿಸುವುದು ಅತಿ ದೊಡ್ಡ ಕೆಲಸ ಆಗುತ್ತದೆ. ನೀವಾಗಿಯೇ ಒಪ್ಪಿಕೊಂಡ ಕೆಲಸವನ್ನು ಇನ್ನೇನು ಪೂರ್ತಿ ಮಾಡಬೇಕು ಅಂದುಕೊಳ್ಳುವಷ್ಟರಲ್ಲಿ ಹಿತಶತ್ರುಗಳು ಅಡ್ಡಗಾಲು ಹಾಕುತ್ತಾರೆ.
Tags:
ದಿನ ಭವಿಷ್ಯ