ಇಂದಿನ ಭವಿಷ್ಯ ಮೇ 09, 2020

Today astrology in kannada today horoscope in kannada
ಇನ್ನೊಬ್ಬರನ್ನು ನಂಬಿಕೊಂಡು ಯಾವುದೇ ಹೊಸ ಯೋಜನೆಗೆ ಕೈ ಹಾಕಬೇಡಿ. ಹಣಕಾಸಿನ ಹೂಡಿಕೆ ವಿಚಾರದಲ್ಲಿ ಅನುಭವಿಗಳ ಸಲಹೆಯನ್ನು ಪಡೆದು, ಮುಂದಕ್ಕೆ ಹೆಜ್ಜೆ ಇಡಿ. ರುಚಿಕಟ್ಟಾದ ಊಟ- ತಿಂಡಿ ಸವಿಯುವ ಯೋಗವಿದೆ. ದೂರಪ್ರಯಾಣ ಮಾಡುವ ಸನ್ನಿವೇಶ ಸೃಷ್ಟಿಯಾಗಲಿದೆ.
Today astrology in kannada today horoscope in kannada
ವ್ಯಾಪಾರ- ವ್ಯವಹಾರ ಮಾಡುತ್ತಿರುವವರು ಹೊಸದಾಗಿ ವಿಸ್ತರಣೆಗೆ ಮುಂದಾಗಲು ಯೋಜನೆ ರೂಪಿಸುತ್ತೀರಿ. ದೀರ್ಘಾವಧಿ ಯೋಜನೆಗಳಿಗಾಗಿ ಸಾಲ ಮಾಡಿಯಾದರೂ ಹಣ ತೊಡಗಿಸುವ ಸಾಧ್ಯತೆ ಇದೆ. ಸಣ್ಣ- ಪುಟ್ಟ ವಿಚಾರಗಳು, ವ್ಯಕ್ತಿಗಳಿಗೂ ಪ್ರಾಮುಖ್ಯ ದೊರೆಯುವಂತೆ ಆಗುತ್ತದೆ.

Today astrology in kannada today horoscope in kannada
ಮನರಂಜನೆ ಸಲುವಾಗಿ ಹೆಚ್ಚು ಹಣ ಖರ್ಚು ಮಾಡುವಂತಾಗುತ್ತದೆ. ದೂರದ ಊರುಗಳಿಂದ ಅಗತ್ಯ ದಿನಸಿ, ಹಣಕಾಸಿನ ನೆರವು ದೊರೆಯುವ ಅವಕಾಶ ಇದೆ. ಸಂಗಾತಿ- ಮಕ್ಕಳ ಸಲುವಾಗಿ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಹಣ ಹೂಡಿಕೆ ಮಾಡುವ ಸಾಧ್ಯತೆಗಳಿವೆ.

Today astrology in kannada today horoscope in kannada
ಬ್ಯಾಂಕ್, ಮಾಧ್ಯಮ, ಚಿತ್ರರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಅವಕಾಶಗಳು ದೊರೆಯಲಿವೆ. ಬಂಧುಗಳು- ಸ್ನೇಹಿತರು ನಿಮ್ಮಿಂದ ನೆರವು ಕೇಳಿಕೊಂಡು ಬರುವ ಸಾಧ್ಯತೆ ಇದೆ. ನೇರವಂತಿಕೆ ಕಾರಣಕ್ಕೆ ಹಲವು ಸವಾಲು ಎದುರಿಸಬೇಕಾಗುತ್ತದೆ. ಮೇಲ್ಲಧಿಕಾರಿಗಳ ಜತೆ ವಾಗ್ವಾದ ಬೇಡ.

Today astrology in kannada today horoscope in kannada
ಈ ಹಿಂದಿನ ಆರೋಗ್ಯ ಸಮಸ್ಯೆಗಳು ಮರುಕಳಿಸುವ ಸಾಧ್ಯತೆಗಳಿವೆ. ಆದ್ದರಿಂದ ಬಹಳ ಎಚ್ಚರಿಕೆಯಿಂದ ಇರಬೇಕು. ಅಗತ್ಯ ಕಂಡುಬಂದಲ್ಲಿ ವೈದ್ಯರನ್ನು ಭೇಟಿ ಮಾಡಿ. ನೀವು ಈ ಹಿಂದೆ ತೆಗೆದುಕೊಂಡ ನಿರ್ಧಾರಕ್ಕೆ ಈಗ ಪಶ್ಚಾತ್ತಾಪ ಪಡುವಂತೆ ಆಗುತ್ತದೆ. ಕಾನೂನು ಪಾಲನೆ ಮಾಡುವಲ್ಲಿ ಗಾಂಭೀರ್ಯ ಇರಲಿ.

Today astrology in kannada today horoscope in kannada
ದಾಕ್ಷಿಣ್ಯಕ್ಕೆ ಸಿಲುಕಿಕೊಂಡು ದೊಡ್ಡ ಮೊತ್ತದ ಸಾಲ ನೀಡಬೇಕಾಗಿಯೋ ಅಥವಾ ಕೊಡಿಸಬೇಕಾಗಿಯೋ ಬರಬಹುದು. ಇಂಥ ಸನ್ನಿವೇಶದಲ್ಲಿ ವಾಸ್ತವ ನೆಲೆಗಟ್ಟಿನಲ್ಲಿ ಆಲೋಚನೆ ಮಾಡಿ. ಭಾವನಾತ್ಮಕದಾಗಿ ತೆಗೆದುಕೊಳ್ಳುವ ನಿರ್ಧಾರದಿಂದ ನಿಮಗೇ ಸಮಸ್ಯೆ ಆಗಬಹುದು, ಎಚ್ಚರಿಕೆಯಿಂದ ಇರಿ.

Today astrology in kannada today horoscope in kannada
ಸಣ್ಣ- ಪುಟ್ಟ ವಿಚಾರಗಳು ಎಂದು ಯಾವುದರ ಬಗ್ಗೆ ಹೆಚ್ಚು ಗಮನ ನೀಡದೆ ಇಷ್ಟು ಕಾಲ ಸುಮ್ಮನಿದ್ದರೋ ದಿಢೀರನೇ ಅವುಗಳಿಗೆ ಪ್ರಾಶಸ್ತ್ಯ ಬರಲಿದೆ. ಅಧ್ಯಾತ್ಮ ಚಿಂತನೆಯತ್ತ ಮನಸ್ಸು ಹೊರಳಿದೆ. ಉದ್ಯೋಗ ವಿಚಾರಕ್ಕೆ ನಿರಾಸಕ್ತಿ ಮೂಡಬಹುದು. ಸ್ವಾತಂತ್ರ್ಯ ಇಲ್ಲದಂತಾಗಿದೆ ಎಂದು ಮನಸಿಗೆ ಖೇದವಾಗಲಿದೆ.

Today astrology in kannada today horoscope in kannada
ಕುಟುಂಬದ ಸಲುವಾಗಿ ವಿಪರೀತ ಖರ್ಚಾಗಲಿದೆ. ಧೈರ್ಯದಿಂದ ನೀವು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಭವಿಷ್ಯ ನಿಂತಿದೆ. ಯಾರಲ್ಲೂ ಹೇಳಿಕೊಳ್ಳಲಾಗದ ಅಂತರಂಗದ ವಿಚಾರವು ನೋವಾಗಿ ಕಾಡಬಹುದು. ಆದರೆ ಆದಾಯಕ್ಕೆ ಹೊಸ ಮೂಲಗಳು ಗೋಚರ ಆಗಲಿವೆ.

Today astrology in kannada today horoscope in kannada
ದಾನ- ಧರ್ಮದ ವಿಚಾರದ ಕಡೆಗೆ ನಿಮ್ಮ ಮನಸ್ಸು ವಾಲುತ್ತಿದೆ. ಪ್ರೇಮಿಗಳಿಗೆ ಸುಮಧುರವಾದ ಕ್ಷಣಗಳನ್ನು ಕಳೆಯುವ ಯೋಗ ಇದೆ. ಊಟ- ತಿಂಡಿ ಸಲುವಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಕುಟುಂಬ ಸದಸ್ಯರ ಸಂತೋಷಕ್ಕಾಗಿ ಕೆಲವು ತ್ಯಾಗಗಳನ್ನು ಮಾಡಲಿದ್ದೀರಿ. ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ.

Today astrology in kannada today horoscope in kannada
ಸ್ವಾರ್ಥ ದೃಷ್ಟಿಯಿಂದಲೇ ಎಲ್ಲವನ್ನೂ ಅಳೆಯುವುದನ್ನು ಬಿಡಿ. ಇತರರ ಪರಿಸ್ಥಿತಿಯನ್ನು ಅರಿತು, ಅವರಿಗೆ ಸ್ಪಂದಿಸಿ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿರುವವರಿಗೆ ಸೂಕ್ತ ಪ್ರತಿಕ್ರಿಯೆ ಸಿಗುವುದು ಅನುಮಾನ. ಮನೆಯ ಖರ್ಚಿಗಾಗಿ ಕ್ರೆಡಿಟ್ ಕಾರ್ಡ್ ಬಳಸಬೇಕಾಗಬಹುದು ಅಥವಾ ಸಾಲ ಮಾಡಬೇಕಾಗಬಹುದು.

Today astrology in kannada today horoscope in kannada
ತಂದೆ- ತಾಯಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿ. ಇನ್ನೊಬ್ಬರು ಹೇಳುವ ಮಾತನ್ನು ನಂಬುವ ಮುಂಚೆ ಪೂರ್ವಾಪರ ಆಲೋಚನೆ ಮಾಡಿ. ಈ ದಿನ ದೈವಾನುಗ್ರಹ ನಿಮ್ಮ ಮೇಲೆ ಇದೆ. ಹಲವು ಸವಾಲುಗಳನ್ನು ಮುಂಚಿತವಾಗಿಯೇ ಗುರುತಿಸುವ ಅಥವಾ ಊಹಿಸುವ ಸಾಮರ್ಥ್ಯ ನಿಮಗೆ ದೊರೆಯುತ್ತದೆ.

Today astrology in kannada today horoscope in kannada
ಕಷ್ಟ ಕಾಲದಲ್ಲಿ ನಿಮಗೆ ಸಹಾಯ ಮಾಡಿದ್ದರು ಈಗ ನಿಮ್ಮಿಂದ ಸಹಾಯ ಕೇಳಬಹುದು. ದೂರ ಪ್ರಯಾಣ ಮಾಡಬೇಕಾದ ಅನಿವಾರ್ಯ ಸೃಷ್ಟಿಯಾಗಬಹುದು. ಸಾಧ್ಯವಾದಷ್ಟು ನೀವು ವಾಹನ ಚಾಲನೆ ಮಾಡದಿದ್ದರೆ ಉತ್ತಮ. ಸರ್ಕಾರದ ಕೆಲಸಗಳಲ್ಲಿ ಗೊಂದಲ ಏರ್ಪಟ್ಟು, ಒಂದೇ ಕೆಲಸ ಎರಡೆರಡು ಸಲ ಮಾಡುವಂತಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement