ಅಧ್ಯಾತ್ಮ ಚಿಂತನೆಯತ್ತ ಮನಸ್ಸು ಹೊರಳುತ್ತದೆ. ಸಾಂಸಾರಿಕ ಜವಾಬ್ದಾರಿಗಳನ್ನು ಪೂರೈಸುವುದಕ್ಕೆ ಹೆಚ್ಚಿನ ಸಮಯ, ಹಣವನ್ನು ಮೀಸಲಿಡಲಿದ್ದೀರಿ. ಹೊಸದಾಗಿ ಪುಸ್ತಕ- ಗ್ರಂಥಗಳನ್ನು ಖರೀದಿ ಮಾಡುವ ಯೋಗ ಇದೆ. ಇತರರಿಂದ ಸಾಧಿಸಲಾಗದ ಕೆಲವು ಕೆಲಸಗಳನ್ನು ನೀವು ಪೂರ್ತಿ ಮಾಡಲಿದ್ದೀರಿ.
ಈ ದಿನ ಯಾವುದೇ ಕೆಲಸದಲ್ಲೂ ಆಸಕ್ತಿ ಇರುವುದಿಲ್ಲ. ಸಂಗಾತಿ- ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಸ್ವತಂತ್ರವಾಗಿ ಏನನ್ನೂ ನಿರ್ಧಾರ ಮಾಡಲು ಆಗದಂಥ ಇಕ್ಕಟ್ಟಿನ ಪರಿಸ್ಥಿತಿ ನಿಮ್ಮದಾಗಲಿದೆ. ಹೊಸದಾಗಿ ಆದಾಯ ಮೂಲಗಳು ಗೋಚರ ಆಗಲಿದೆ.
ನಿರೀಕ್ಷಿತ ವೇಗದಲ್ಲಿ ಕೆಲಸ- ಕಾರ್ಯಗಳು ಸಾಗುವುದಿಲ್ಲ. ನಿಮ್ಮ ಮಾತಿಗೆ ಸಹೋದ್ಯೋಗಿಗಳ ಬೆಲೆ ಕೊಡುತ್ತಿಲ್ಲ ಎಂಬ ಭಾವನೆ ಬಲವಾಗಿ ನಿಮ್ಮನ್ನು ಕಾಡಲಿದೆ. ಈ ಹಿಂದೆ ನೀವು ಮಾಡಿದ್ದ ಹೂಡಿಕೆಯನ್ನು ಹಿಂದಕ್ಕೆ ತೆಗೆದುಕೊಳ್ಳಲು ನಿರ್ಧಾರ ಮಾಡುತ್ತೀರಿ. ಬಂಧುಗಳು- ಸ್ನೇಹಿತರ ಮೂಲಕ ಶುಭ ವಾರ್ತೆ ಕೇಳಲಿದ್ದೀರಿ
ಸಂತಾನ ಅಪೇಕ್ಷಿತ ದಂಪತಿಗೆ ಶುಭ ಸುದ್ದಿ ಕೇಳುವ ಯೋಗವಿದೆ. ನಿಮ್ಮನ್ನು ತಾತ್ಸಾರ ಮಾಡುತ್ತಿದ್ದವರಿಗೆ ತಕ್ಕ ಉತ್ತರ ನೀಡಲಿದ್ದೀರಿ. ಕಾನೂನು ವ್ಯಾಪ್ತಿಯ ಅಡಿಯಲ್ಲಿ ಬರುವ ವಿಚಾರಗಳು ಪ್ರಾಮುಖ್ಯ ಪಡೆದುಕೊಳ್ಳುತ್ತವೆ. ವಿವಾಹ ಕಾರ್ಯಗಳಿಗೆ ನಾನಾ ಬಗೆಯಲ್ಲಿ ಅಡ್ಡಿ- ಆತಂಕ ಎದುರಾಗಬಹುದು.
ನೀವೇ ನೀಡಿದ ಮಾತನ್ನು ಪದೇಪದೇ ಬದಲಿಸುವಂತೆ ಆಗುತ್ತದೆ. ಸನ್ನಿವೇಶವನ್ನು ವಿವರಿಸಿ ಹೇಳುವುದಕ್ಕೆ ಮಾಡುವ ಪ್ರಯತ್ನಗಳು ಯಾವುದೇ ಫಲ ನೀಡುವುದಿಲ್ಲ. ಹಿರಿಯರ ಸಲಹೆಗಳನ್ನು ಪಾಲನೆ ಮಾಡಲು ಪ್ರಯತ್ನಿಸಿ. ದೂರ ಪ್ರಯಾಣವನ್ನು ಅನಿವಾರ್ಯ ಇಲ್ಲದಿದ್ದಲ್ಲಿ ಮಾಡಬೇಡಿ.
ಸ್ವಜನರಿಗೆ ಸಹಾಯ ಮಾಡುವ ಅನಿವಾರ್ಯ ಸನ್ನಿವೇಶ ನಿಮಗೆ ಸೃಷ್ಟಿ ಆಗಲಿದೆ. ಬಂಧುಗಳ ಮಧ್ಯೆ ನಿಮ್ಮ ಹೆಸರು ಇನ್ನಷ್ಟು ಚಲಾವಣೆಗೆ ಬರಲಿದೆ. ಕಾರ್ಯಸಾಧನೆಗಾಗಿ ನೀವು ಕೈಗೊಂಡ ಯೋಜನೆಗಳು ಫಲ ನೀಡಲು ಆರಂಭಿಸುತ್ತವೆ. ಆದರೆ ದುಡ್ಡು ಉಳಿಸಿಕೊಳ್ಳುವುದು ಕಷ್ಟ ಇದೆ.
ನಿಮಗಿಂತ ಕೆಳ ಹಂತದಲ್ಲಿ ಇರುವವರ ಬಗ್ಗೆ ದಯೆ ಇರಲಿ. ನಿಮ್ಮ ಸಿಟ್ಟಿನ ಕಾರಣಕ್ಕೆ ಇತರರ ಕೆಲಸ ಹೋಗುವಂತೆ ಮಾಡಬೇಡಿ. ಸಾಧ್ಯವಾದಷ್ಟೂ ತಾಳ್ಮೆಯಿಂದ, ಮೌನವಾಗಿ ಇರುವುದಕ್ಕೆ ಪ್ರಯತ್ನಿಸಿ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನೀವೂ ಅಪ್ ಡೇಟ್ ಆಗಬೇಕಾದ ಅಗತ್ಯ ಇದೆ ಎಂಬುದು ತಿಳಿದುಕೊಳ್ಳಿ.
ಹಳೇ ಪರಿಚಯಸ್ಥರ ಮೂಲಕ ಅವಕಾಶಗಳ ಬಗ್ಗೆ ತಿಳಿದುಬರುತ್ತದೆ. ಆಲಸ್ಯ ಮಾಡದೆ ಮುಂದಕ್ಕೆ ಹೆಜ್ಜೆಗಳನ್ನು ಇಡಿ. ಸೋದರ- ಸೋದರಿಯರ ಸಾಲ- ಜವಾಬ್ದಾರಿಗಳು ನೀವು ಪೂರೈಸಬೇಕಾದ ಸನ್ನಿವೇಶ ಸೃಷ್ಟಿಯಾಗಬಹುದು. ನಿಮ್ಮಿಂದ ಸಾಧ್ಯವಾದಷ್ಟು ಸಹಾಯವನ್ನು ಅವರಿಗೆ ಮಾಡಿ.
ಸ್ವಾಭಿಮಾನವನ್ನು ಬಿಟ್ಟು ಬೇರೆಯವರ ನೆರವನ್ನು ಕೇಳಬೇಕಾದ ಸ್ಥಿತಿ ಬರಬಹುದು. ಅದು ನಿಮ್ಮ ಸಲುವಾಗಿಯಾದರೂ ಸರಿ ಅಥವಾ ಇತರರಿಗಾದರೂ ಸರಿ, ಒಟ್ಟಿನಲ್ಲಿ ಇಂಥದ್ದೊಂದು ನಡೆ ಅನಿವಾರ್ಯ ಆಗಬಹುದು. ಆಹಾರ- ನೀರು ಸೇವನೆ ಬಗ್ಗೆ ಗಮನ ಇರಲಿ. ಇಲ್ಲದಿದ್ದಲ್ಲಿ ಗಂಟಲು ಸಮಸ್ಯೆ ಎದುರಾಗಬಹುದು.
ನಿಮ್ಮ ಮಿತಿಯನ್ನು ಅರಿತು, ವ್ಯಾಪಾರ- ವ್ಯವಹಾರ ಮಾಡಿ. ಅತಿಯಾದ ಆತ್ಮವಿಶ್ವಾಸದಿಂದ ಮುಂದುವರಿದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ. ಕಲಾವಿದರು, ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ವಿಪರೀತ ಒತ್ತಡದ ದಿನ ಇದಾಗಿರುತ್ತದೆ. ನಿಮ್ಮ ಅಂತರಂಗದ ರಹಸ್ಯವನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ.
ಬೆಂಕಿಯ ಮುಂದೆ ಕೆಲಸ ಮಾಡುವಂಥವರಿಗೆ ಒಂದಿಷ್ಟು ಎಚ್ಚರಿಕೆ ಅಗತ್ಯ. ನಿಮ್ಮ ಮುಂದಾಳತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬೇಕಾಗುತ್ತದೆ. ವಾಪಸ್ ಬರಬೇಕಾದ ಸಾಲಗಳು ಇದ್ದಲ್ಲಿ ಪ್ರಯತ್ನಿಸಿ. ಭೂಮಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಪ್ರಗತಿ ಇದೆ. ರೈತರಿಗೆ ಉತ್ತಮವಾದ ದಿನ.
ರಾಜಕೀಯ, ಶೈಕ್ಷಣಿಕ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಮಹತ್ತರವಾದ ಜವಾಬ್ದಾರಿ ನಿರ್ವಹಿಸಬೇಕಾಗುತ್ತದೆ. ಮನೆಗೆ ಅಗತ್ಯ ಇರುವ ವಸ್ತುಗಳನ್ನು ತರಲು ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ವಿವಾಹಕ್ಕಾಗಿ ಸೂಕ್ತ ಸಂಬಂಧಗಳಿಗೆ ಹುಡುಕಾಡುತ್ತಿದ್ದಲ್ಲಿ ಪ್ರಗತಿ ಕಾಣಲಿದ್ದೀರಿ.
Tags:
ದಿನ ಭವಿಷ್ಯ














