ಪ್ರೀತಿ- ಪ್ರೇಮದಲ್ಲಿ ಇರುವವರಿಗೆ ಉತ್ತಮವಾದ ದಿನ ಇದು. ಮನೆಯಲ್ಲಿ ನಿಮ್ಮ ಪ್ರೇಮ ವಿಚಾರವನ್ನು ತಿಳಿಸುವುದಕ್ಕೆ ಸರಿಯಾದ ಸಮಯ ಇದು. ದೂರದ ಊರುಗಳಿಂದ ಶುಭ ಸುದ್ದಿ ಕೇಳಿಬರಲಿದೆ. ವ್ಯಾಪಾರ- ವ್ಯವಹಾರಸ್ಥರಿಗೆ ಲಾಭದಾಯಕವಾದ ವ್ಯವಹಾರ ಮಾಡುವುದಕ್ಕೆ ದಾರಿ ಗೋಚರವಾಗುತ್ತದೆ.
ಆಪ್ತರ ಜತೆಗೆ ಸಣ್ಣ- ಪುಟ್ಟ ವಿಚಾರಗಳಿಗೆ ಭಿನ್ನಾಭಿಪ್ರಾಯ ತಲೆದೋರಬಹುದು. ಯಾರ ಮೇಲೂ ದ್ವೇಷ ಸಾಧನೆ ಮಾಡಬೇಡಿ. ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ಅದು ಉಲ್ಬಣ ಆಗುವ ಸಾಧ್ಯತೆ ಇದೆ. ನವಗ್ರಹಗಳ ಸ್ಮರಣೆ ಮಾಡಿ. ಅತಿಯಾಗಿ ಆಯಾಸವಾಗುವ ಕೆಲಸ ಮಾಡಬೇಡಿ.
ಯಾರನ್ನೋ ಮೆಚ್ಚಿಸುವ ಸಲುವಾಗಿ ಹೆಚ್ಚು ಶ್ರಮ ಪಡುವುದಾಗಲೀ ಅಥವಾ ಹಣ ಖರ್ಚು ಮಾಡುವುದಾಗಲೀ ಸೂಕ್ತ ನಿರ್ಧಾರ ಅಲ್ಲ. ಆಪ್ತ ಸ್ನೇಹಿತರಿಂದ ಆದಾಯಕ್ಕೆ ಹೊಸ ಮಾರ್ಗ ಗೋಚರಿಸುತ್ತದೆ. ಕಾಲು ನೋವಿನಿಂದ ಬಳಲುತ್ತಿರುವವರಿಗೆ ಸಮಸ್ಯೆ ಮತ್ತಷ್ಟು ಉಲ್ಬಣವಾಗುವ ಸಾಧ್ಯತೆ ಇದೆ, ಎಚ್ಚರ.
ಯಾವುದೇ ಸವಾಲನ್ನು ಧೈರ್ಯವಾಗಿ ಎದುರಿಸಿ. ಮುಖ್ಯವಾಗಿ ಹಣಕಾಸಿನ ಸಮಸ್ಯೆಗಳ ಬಗ್ಗೆ ಹೆಚ್ಚು ಚಿಂತೆ ಮಾಡಬೇಡಿ. ದೂರ ಪ್ರದೇಶಗಳಲ್ಲಿ ಇರುವವರಿಗೆ ಸ್ವಂತ ಸ್ಥಳಕ್ಕೆ ಹಿಂತಿರುಗುವ ಅವಕಾಶ ಸಿಗುತ್ತದೆ. ಆದರೆ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಗೊಂದಲ ಏರ್ಪಡುವ ಸಾಧ್ಯತೆ ಇದೆ.
ನೀವು ತೆಗೆದುಕೊಂಡ ನಿರ್ಧಾರ, ಮಾಡಿದ ಕೆಲಸವನ್ನು ಯಾರೂ ಪ್ರಶ್ನೆ ಮಾಡಬಾರದು ಅಂದುಕೊಳ್ಳುವುದು ಸರಿಯಲ್ಲ. ಸರಿ- ತಪ್ಪುಗಳ ವಿಮರ್ಶೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿ. ಈ ದಿನ ನಿಮ್ಮಿಂದ ಸಾಧ್ಯವಾದಲ್ಲಿ ಕನಿಷ್ಠ ಒಬ್ಬರಿಗಾದರೂ ಅಶಕ್ತಿರಿಗೆ ಊಟದ ವ್ಯವಸ್ಥೆ ಮಾಡಿ. ಉತ್ತಮ ಫಲ ದೊರೆಯುತ್ತದೆ.
ಗುರುಗಳ ಸಲಹೆಯನ್ನು ಪಾಲಿಸುವುದರಿಂದ ಮಾನಸಿಕ ನೆಮ್ಮದಿ, ಹಿಡಿದ ಕೆಲಸಗಳಲ್ಲಿ ಜಯ ಇದೆ. ದೈನಂದಿನ ಕೆಲಸ- ಕಾರ್ಯಗಳಿಗೆ ಕೊರತೆ ಬೀಳುವ ಹಣವನ್ನು ಹೊಂದಿಸಿಕೊಳ್ಳುವಲ್ಲಿ ಯಶಸ್ವಿ ಆಗುತ್ತೀರಿ. ಯಾರನ್ನು ನೀವು ನಂಬಿರುತ್ತೀರೋ ಅಂಥವರಿಂದ ಅಗತ್ಯ ಸಮಯಕ್ಕೆ ನೆರವು ದೊರೆಯುವುದು ಕಷ್ಟವಾಗುತ್ತದೆ.
ಧಾರ್ಮಿಕ ಕಾರ್ಯಗಳು ಸಾಂಗವಾಗಿ ನೆರವೇರುತ್ತವೆ. ಕುಟುಂಬದೊಳಗಿನ ಎಲ್ಲ ಕಾರ್ಯಗಳಲ್ಲೂ ಚಟುವಟಿಕೆಯಿಂದ ಪಾಲ್ಗೊಳ್ಳುತ್ತೀರಿ. ದೀರ್ಘ ಕಾಲದಿಂದ ಹುಡುಕುತ್ತಿದ್ದ ದಾಖಲೆ ಪತ್ರಗಳು ದೊರೆಯುವ ಸಾಧ್ಯತೆ ಇದೆ. ಲೇವಾದೇವಿ ವ್ಯವಹಾರ ಮಾಡುವವರಿಗೆ ಅಲ್ಪ ಪ್ರಮಾಣದ ಹಿನ್ನಡೆ ಇದೆ.
ಯಾವುದೇ ಕೆಲಸ ಮಾಡುವುದಕ್ಕೂ ಹಿಂಜರಿಕೆ ಕಾಡುತ್ತದೆ. ಮುಂದೇನು ಎಂಬ ಆತಂಕದಿಂದ ಅವಕಾಶಗಳನ್ನು ಕೈ ಚೆಲ್ಲುವ ಸಾಧ್ಯತೆ ಇದೆ. ಆದ್ದರಿಂದ ಆತಂಕವನ್ನು ಕಡಿಮೆ ಮಾಡಿಕೊಂಡು, ಮುಕ್ತ ಮನಸ್ಸಿನಿಂದಲೇ ಎಲ್ಲ ಅವಕಾಶಗಳನ್ನು ಅಳೆದು- ತೂಗಿ ನೋಡಿ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಜವಾಬ್ದಾರಿಗಳು ಹೆಗಲೇರುತ್ತವೆ.
ಉದ್ಯೋಗ ವಿಚಾರವಾಗಿ ಭರವಸೆಯೇ ಕುಸಿಯುವಂಥ ಕೆಲವು ಬೆಳವಣಿಗೆಗಳು ಆಗಬಹುದು. ಹಳೇ ಪ್ರೇಮ ಪ್ರಕರಣದ ವಿಚಾರವನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ. ಸೋದರ- ಸೊದರಿಯರಿಂದ ಅವಮಾನವನ್ನು ಎದುರಿಸುವಂತೆ ಆಗಬಹುದು. ಸಾಧ್ಯವಾದಷ್ಟೂ ಈ ದಿನ ಮೌನವಾಗಿರಿ.
ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಅನ್ನೋ ಹಾಗೆ ಈ ಹಿಂದಿನಿಂದ ಪ್ರಯತ್ನ ಮಾಡಿಕೊಂಡು ಬಂದಿದ್ದ ಕೆಲಸ ಮುಕ್ತಾಯದ ಹಂತಕ್ಕೆ ಬಂದು ನಿಲ್ಲುತ್ತದೆ. ಅಂದುಕೊಂಡಿದ್ದ ಖರ್ಚಿಗಿಂತ ಕಡಿಮೆಯಲ್ಲೇ ಎಲ್ಲ ಕೆಲಸಗಳು ಆಗುತ್ತವೆ. ಸ್ತ್ರೀಯರ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ನೀವಾಡುವ ಮಾತಿನಿಂದ ಅವಮಾನದ ಪಾಲಾಗುತ್ತೀರಿ.
ಹುಂಬ ಧೈರ್ಯ ಒಳ್ಳೆಯದಲ್ಲ. ಮುಂದೆ ಬರುವ ಆದಾಯ ಎಂದು ನಂಬಿ, ಈಗ ಸಾಲ ಮಾಡಬೇಡಿ. ಕ್ರೆಡಿಟ್ ಕಾರ್ಡ್ ಬಳಸುವವರು ಸಹ ಎಚ್ಚರಿಕೆಯಿಂದ ಇರಬೇಕು. ಅಳತೆ ಮೀರಿ ಖರ್ಚು ಮಾಡಿ, ಮುಂದೆ ಪಶ್ಚಾತ್ತಾಪ ಪಡುವಂತೆ ಆಗಬಹುದು. ಹೊಗಳಿಕೆಗೆ ಉಬ್ಬಿಹೋಗಿ, ಅನಗತ್ಯ ಖರ್ಚನ್ನು ಮಾಡಬೇಡಿ.
ನಿಮ್ಮ ಯಶಸ್ಸು ತಾಳ್ಮೆಯೇ ಮೇಲೆ ಅವಲಂಬಿಸಿದೆ. ಸ್ನೇಹಿತರು- ಬಂಧುಗಳ ಸಹಾಯವನ್ನು ಬಳಾಸಿಕೊಳ್ಳಬೇಕಾದ ಸಂದರ್ಭದಲ್ಲಿ ಯಾವುದೇ ಹಿಂಜರಿಕೆ ಬೇಡ. ಹಣದ ಒತ್ತಡದಿಂದ ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ಎಚ್ಚರಿಕೆಯನ್ನು ವಹಿಸಿ. ಅಗತ್ಯ ಬಿದ್ದಲ್ಲಿ ಕೌನ್ಸೆಲಿಂಗ್ ಪಡೆಯಿರಿ.
Tags:
ದಿನ ಭವಿಷ್ಯ














