ಮನಸ್ಸಿನಲ್ಲಿ ಒಂದು ಬಗೆಯ ಅಳುಕು ನಿಮ್ಮನ್ನು ಕಾಡುತ್ತದೆ. ಅದು ಋಣ ಬಾಧೆ ಇರಬಹುದು, ಆರೋಗ್ಯ ಬಾಧೆ ಅಥವಾ ಶತ್ರು ಬಾಧೆ ಇರಬಹುದು. ತಾಳ್ಮೆಯಿಂದ ನಿರ್ಧಾರಗಳನ್ನು ಕೈಗೊಳ್ಳಿ. ಮೊದಲಿನ ಹುಮ್ಮಸ್ಸು, ಉತ್ಸಾಹವನ್ನು ಕಳೆದುಕೊಳ್ಳದೆ ಕೆಲಸದಲ್ಲಿ ತೊಡಗಿಕೊಳ್ಳಿ. ಸರ್ಕಾರಿ ನೌಕರರಿಗೆ ವರ್ಗಾವಣೆ ಯೋಗ ಇದೆ. ಅದು ಬೇರೆ ಸ್ಥಳಕ್ಕೆ ಅಂತಲೇ ಅಲ್ಲ, ಬೇರೆ ಇಲಾಖೆಗಾದರೂ ವರ್ಗಾವಣೆ ಆಗಬಹುದು.
ನಿಮ್ಮ ಧೈರ್ಯ ಇಂದು ಕಾಪಾಡುತ್ತದೆ. ಯಾವುದೋ ಹಳೇ ವಿಚಾರವನ್ನು ಮುಂದೆ ಮಾಡಿಕೊಂಡು ಶತ್ರುಗಳು ನಿಮ್ಮ ವರ್ಚಸ್ಸಿಗೆ ಧಕ್ಕೆ ಮಾಡುವುದಕ್ಕೆ ಪ್ರಯತ್ನಿಸಬಹುದು. ಪ್ರೀತಿ- ಪ್ರೇಮದಲ್ಲಿ ಇರುವವರಿಗೆ ಸುಮಧುರ ಕ್ಷಣಗಳನ್ನು ಕಳೆಯುವ ಯೋಗ ಇದೆ. ಕಿರು ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ.
ಉದ್ಯೋಗಕ್ಕೆ ಸಂಬಂಧಿಸಿದ ಸಂಗತಿಗಳಿಗೆ ಹೆಚ್ಚಿನ ಸಮಯ ಮೀಸಲಿಡಲಿದ್ದೀರಿ. ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಇರುವುದಿಲ್ಲ. ಆದರೆ ಬಂಧುಗಳು, ಸ್ನೇಹಿತರ ಸಹಾಯದಿಂದ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಸಾಧ್ಯವಾಗುತ್ತದೆ. ಆಹಾರ ಪಥ್ಯವನ್ನು ಕಡ್ಡಾಯವಾಗಿ ಪಾಲನೆ ಮಾಡಿ.
ಬ್ಯಾಂಕ್ ಉದ್ಯೋಗಿಗಳು, ಚಿತ್ರರಂಗದಲ್ಲಿ ಇರುವವರಿಗೆ ಸಮಾಧಾನಕರವಾದ ದಿನ. ಅನಿರೀಕ್ಷಿತವಾದ ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರಲಿವೆ. ಯಾರ ಮೇಲೂ ಆಕ್ಷೇಪಗಳನ್ನು ಹೇಳಬೇಡಿ. ನಿಮಗೆ ವಹಿಸಿದ ಜವಾಬ್ದಾರಿಯನ್ನು ಶ್ರದ್ಧೆಯಿಂದ ಮಾಡಿ ಮುಗಿಸಿ. ಇದರಿಂದ ಭವಿಷ್ಯದಲ್ಲಿ ಅನುಕೂಲ ಆಗಲಿದೆ.
ಮನೆಯ ದುರಸ್ತಿ, ಪೇಂಟಿಂಗ್ ಮತ್ತಿತರ ಕೆಲಸಗಳಿಗಾಗಿ ಹೆಚ್ಚಿನ ಹಣ ಖರ್ಚು ಮಾಡುವ ಯೋಗ ಇದೆ. ಇಲ್ಲದಿದ್ದಲ್ಲಿ ಮನೆಗೆ ಅಗತ್ಯ ಇರುವ ಅಲಂಕಾರ ವಸ್ತುಗಳು, ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳನ್ನಾದರೂ ಖರೀದಿಸುವ ಸಾಧ್ಯ ಇದೆ. ಇದಕ್ಕಾಗಿ ಹೆಚ್ಚಿನ ಸಾಲವನ್ನು ಮಾಡಲಿದ್ದೀರಿ.
ಕುಟುಂಬದಲ್ಲಿ ಸಮಾಧಾನಕರವಾದ ವಾತಾವರಣ ಇರಲಿದೆ. ಮಕ್ಕಳ ಸಲುವಾಗಿ ಉಳಿತಾಯ ಯೋಜನೆಗಳಲ್ಲಿ ಹಣ ತೊಡಗಿಸಲು ಚಿಂತನೆ ನಡೆಸುತ್ತೀರಿ. ಈ ಹಿಂದೆ ನೀವು ಪಟ್ಟಿದ್ದ ಶ್ರಮಕ್ಕೆ ಈಗ ಪ್ರತಿಫಲ ದೊರೆಯಲಿದೆ. ದೇವತಾ ಕಾರ್ಯಗಳನ್ನು ಆಯೋಜಿಸಲು ಮನೆಯಲ್ಲಿ ಚರ್ಚೆ ನಡೆಸಲಿದ್ದೀರಿ.
ದುರ್ಜನರ ಸಹವಾಸದಿಂದ ಅವಮಾನಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಅತಿ ವಿನಯದಿಂದ ನಡೆದುಕೊಳ್ಳುವವರ ಬಗ್ಗೆ ಬಹಳ ಹುಷಾರಾಗಿರಬೇಕು. ಸಂಬಂಧಿಗಳು ಹೇಳುವ ಮಾತುಗಳನ್ನು ಗಮನವಿಟ್ಟು ಆಲಿಸಿ. ಅದರಿಂದ ನಿಮಗೆ ಅನುಕೂಲ ಆಗುವ ಸಾಧ್ಯತೆ ಇದೆ. ಚಂಚಲತೆ ಕಡಿಮೆ ಮಾಡಿಕೊಳ್ಳಿ.
ಹೋಟೆಲ್ ಉದ್ಯಮ ನಡೆಸುತ್ತಿರುವವರಿಗೆ ಸೋದರರು, ಸ್ನೇಹಿತರಿಂದ ಹಣಕಾಸಿನ ಸಹಾಯ ದೊರೆಯುವ ಸಾಧ್ಯತೆ ಇದೆ. ಖಾಸಗಿ ಕಂಪೆನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಮೇಲಧಿಕಾರಿಗಳಿಂದ ಹೆಚ್ಚಿನ ಒತ್ತಡ. ಅವಿವಾಹಿತರ ಮದುವೆಗೆ ಮಾಡುತ್ತಿರುವ ಪ್ರಯತ್ನಕ್ಕೆ ನಾನಾ ಬಗೆಯ ಅಡ್ಡಿ- ಆತಂಕ ಎದುರಾಗುತ್ತದೆ.
ವಿಲಾಸಿ ವಸ್ತುಗಳ ಖರೀದಿಗೆ ಮುನ್ನ ಅದರ ಅಗತ್ಯ ಇದೆಯೇ ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಿ. ಭಾವನಾತ್ಮಕವಾಗಿ ನಿರ್ಧಾರ ತೆಗೆದುಕೊಂಡು, ಆ ನಂತರ ಬೇಸರ ಪಡುವಂತಾಗುತ್ತದೆ. ಇತರರು ನಿಮ್ಮನ್ನು ಪುಸಲಾಯಿಸಿ, ಸಿಟ್ಟಿಗೇಳುವಂತೆ ಮಾಡಬಹುದು. ಆ ಬಗ್ಗೆ ಎಚ್ಚರಿಕೆಯಿಂದ ವರ್ತಿಸಿ.
ಇತರರಿಗೆ ಉಡುಗೊರೆ ನೀಡುವ ಆಲೋಚನೆ ಇದ್ದಲ್ಲಿ ಸದ್ಯಕ್ಕೆ ನಿಮ್ಮ ಆರ್ಥಿಕ ಸ್ಥಿತಿ ಹೇಗಿದೆ ಎಂಬುದನ್ನು ಪರಾಮರ್ಶೆ ಮಾಡಿಕೊಳ್ಳಿ. ಕೈ ಮೀರಿ ಖರ್ಚು ಮಾಡಿದರೆ ಆ ನಂತರ ಪರಿತಪಿಸುವಂತೆ ಆಗುತ್ತದೆ. ಉದ್ಯೋಗ ವಿಚಾರವಾಗಿ ಸಹೋದ್ಯೋಗಿಗಳ ಜತೆ ವಾಗ್ವಾದ, ಭಿನ್ನಾಭಿಪ್ರಾಯ ಏರ್ಪಡಬಹುದು.
ಮಕ್ಕಳ ಆರೋಗ್ಯ, ಓಡಾಟ, ಶಿಕ್ಷಣ ಇಂಥದ್ದಕ್ಕೆ ಹೆಚ್ಚಿನ ಸಮಯ ಮೀಸಲಿಡುತ್ತೀರಿ. ರುಚಿಕಟ್ಟಾದ ಊಟ- ತಿಂಡಿ ಸವಿಯುವ ಯೋಗ ಇದೆ. ಭೂಮಿ- ಆಸ್ತಿ ಖರೀದಿ ವಿಚಾರವಾಗಿ ನಿಂತುಹೋಗಿದ್ದ ವ್ಯವಹಾರಗಳು ಮತ್ತೆ ವೇಗವನ್ನು ಪಡೆದುಕೊಳ್ಳಲಿವೆ. ಸಂಗಾತಿಯ ಅಗತ್ಯಗಳಿಗೆ ನಿಮ್ಮ ಬೆಂಬಲ ನೀಡಲಿದ್ದೀರಿ.
ವಿದೇಶ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಆಗಲಿದೆ. ನಿಮ್ಮ ಪ್ರಭಾವ ಬಳಸಿ ಇತರರ ಕೆಲಸಗಳನ್ನು ಮಾಡಿಕೊಡಲಿದ್ದೀರಿ. ದೀರ್ಘಾವಧಿಯಿಂದ ಬಾಕಿ ಉಳಿದಿದ್ದ ಕೆಲಸ- ಕಾರ್ಯಗಳನ್ನು ಒಂದೊಂದಾಗಿ ಮುಗಿಸಲು ಯೋಜನೆ ರೂಪಿಸಲಿದ್ದೀರಿ. ವಾಹನ ಚಾಲನೆ ವೇಳೆ ಎಚ್ಚರಿಕೆಯಿಂದ ಇರಬೇಕು.
Tags:
ದಿನ ಭವಿಷ್ಯ














