ಕುಮಟಾ: ಕರಾವಳಿ ಭಾಗದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಅಂದರೆ 35 ಸಾವಿರಕ್ಕೂ ಹೆಚ್ಚಿನ ಮೀನುಗಾರರು ಕೊರೋನಾ ಸೋಂಕಿನ ಹೊಡೆತದಿಂದ ತತ್ತರಿಸಿಹೋಗಿದ್ದಾರೆ. ಇದರಿಂದಾಗಿ ಮೀನುಗಾರರಿಗೋಸ್ಕರ ಸರ್ಕಾರವು ವಿಶೇಷ ಪ್ಯಾಕೇಜನ್ನು ಘೋಷಿಸಬೇಕು ಎಂದು MLA ದಿನಕರ ಶೆಟ್ಟಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ.
ಕಳೆದ ವರ್ಷವೂ ಕೂಡ ಅತಿ ಮಳೆ ಮತ್ತು ನೆರೆಹಾವಳಿಯ ಪರಿಣಾಮದಿಂದಾಗಿ ಮೀನುಗಾರರು ತುಂಬಾ ಕಷ್ಟವನ್ನು ಅನುಭವಿಸಿದ್ದರು. ಈ ವರ್ಷವೂ ಕೂಡ ಕೊರೋನಾ ಮಹಾಮಾರಿಗೆ ಸಿಕ್ಕಿ ಮೀನುಗಾರರ ಜೀವನ ಸಂಕಷ್ಟದಲ್ಲಿ ಸಿಲುಕಿ ಸಿಲುಕಿಕೊಂಡಿದೆ. ಇದರಿಂದಾಗಿ ಅವರಿಗೆ ವಿಶೇಷ ಪ್ಯಾಕೇಜ ಅಗತ್ಯ ಇದೆ ಎಂದು ಎಂಎಲ್ಎ ಅವರು ಮುಖ್ಯಮಂತ್ರಿಯವರಲ್ಲಿ ಮನವಿಯನ್ನು ಮಾಡಿದ್ದಾರೆ.