ಯಾವುದೋ ನೆಪ ನೀಡಿ ಕೆಲಸದಿಂದ ಅಥವಾ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಬೇಡಿ. ಒಂದು ವೇಳೆ ನಿಮ್ಮಿಂದ ನಿಭಾಯಿಸಲು ಸಾಧ್ಯವಾಗದ ಜವಾಬ್ದಾರಿಯಾಗಿದ್ದರೆ ಒಪ್ಪಿಕೊಂಡು, ಬೇರೆಯವರಿಗೆ ವಹಿಸಿಕೊಡಿ. ಮನೆಯಲ್ಲಿ ಶುಭ ಸಮಾರಂಭ ಅಥವಾ ಸಂತೋಷ ತರುವಂಥ ಕಾರ್ಯಕ್ರಮಗಳು ನಡೆಯುವ ಯೋಗ ಇದೆ.
ಸಂಬಂಧಿಕರು, ಸ್ನೇಹಿತರ ಭೇಟಿಯಿಂದ ಮನಸಿಗೆ ನೆಮ್ಮದಿಯಿದೆ. ಮನೆಗೆ ಅಗತ್ಯ ಇರುವ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ಔತಣ ಕೂಟಕ್ಕೆ ಸ್ನೇಹಿತರ ಮನೆಗೆ ಆಹ್ವಾನ ಬರುವ ಯೋಗ ಇದೆ. ಬಹಳ ಸಮಯದಿಂದ ಬಾಕಿ ಉಳಿದಿರುವ ಕೆಲಸ- ಕಾರ್ಯಗಳು ಸುಲಭವಾಗಿ ಮುಗಿಯಲಿದೆ.
ನಿಮ್ಮ ನಿರ್ಧಾರಗಳು ತಪ್ಪು ಎಂದು ಸಾಬೀತು ಮಾಡಲು ಶತ್ರುಗಳು ಬಹಳ ಪ್ರಯತ್ನ ಪಡುತ್ತಾರೆ. ಈ ಸಂದರ್ಭದಲ್ಲಿ ತಾಳ್ಮೆಯಿಂದ ನಡೆದುಕೊಳ್ಳುವುದು ಮುಖ್ಯ. ತಂದೆ- ತಾಯಿಗೆ ಬೇಸರವಾಗುವಂತಹ ಮಾತನಾಡಬೇಡಿ. ಸಾಧ್ಯವಾದಲ್ಲಿ ಮನೆಯಲ್ಲಿ ಆದಿತ್ಯಹೃದಯ ಸ್ತೋತ್ರವನ್ನು ಪಠಿಸಿ.
ಸ್ವಂತ ವಿಚಾರಗಳನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ. ನೀವು ನಂಬಿಕೊಂಡು, ಹೇಳಿದ ವಿಚಾರಗಳು ಯಾರ ಕಿವಿಗೆ ತಲುಪಬಾರದೋ ಅಲ್ಲಿಗೆ ತಲುಪುತ್ತದೆ. ಸಾಲಗಾರರಿಂದ ಒತ್ತಡ ಹೆಚ್ಚಾಗಬಹುದು. ಈ ಸಮಯಕ್ಕೆ ಅದರಿಂದ ತಪ್ಪಿಸಿಕೊಂಡರೆ ಸಾಕು ಎಂದು ಸುಳ್ಳು ಹೇಳುವುದು ಸರಿಯಲ್ಲ.
ಆಹಾರ- ಪಥ್ಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ನಾಲಗೆ ರುಚಿಗೋಸ್ಕರ ಮಸಾಲೆ- ಕರಿದ ಪದಾರ್ಥಗಳನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಗುರು- ಹಿರಿಯರು ನಿಮ್ಮ ಬಗ್ಗೆ ಇರಿಸಿಕೊಂಡಿರುವ ನಂಬಿಕೆಗೆ ವಿರೋಧವಾಗಿ ನಡೆದುಕೊಳ್ಳಬೇಡಿ. ಈ ದಿನದ ನಿಮ್ಮ ನೆಮ್ಮದಿ ನಾಲಗೆಯನ್ನು ಅವಲಂಬಿಸಿದೆ.
ಸಂಗಾತಿ- ಮಕ್ಕಳ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ. ಎಲ್ಲ ಸಲವೂ ನೀವೇ ಸರಿ ಎಂದು ಅಂದುಕೊಳ್ಳುವುದು ತಪ್ಪು. ವೃತ್ತಿಪರರಿಗೆ ದೊಡ್ಡ ಸಂಸ್ಥೆಯೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಬರುವ ಸಾಧ್ಯತೆ ಇದೆ. ಖರ್ಚು- ವೆಚ್ಚದ ಲೆಕ್ಕಾಚಾರದಲ್ಲಿ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ.
ಎಲ್ಲವನ್ನೂ ಅಳೆದು ತೂಗಿ ನಿರ್ಧಾರ ಕೈಗೊಳ್ಳುವ ನಿಮ್ಮ ಸ್ವಭಾವದಿಂದಾಗಿ ಹಲವು ಸಮಸ್ಯೆಗಳನ್ನು ನಿವಾರಿಸಿಕೊಳ್ಳುತ್ತೀರಿ. ಕೆಲಸ ಬದಲಾವಣೆ ಮಾಡಿಕೊಳ್ಳಬೇಕು ಅಂದುಕೊಳ್ಳುವವರಿಗೆ ಇದು ಸಮಯವಲ್ಲ. ಪ್ರೀತಿ- ಪ್ರೇಮದಲ್ಲಿ ಇರುವವರಿಗೆ ಒಟ್ಟಾಗಿ ಸಮಯ ಕಳೆಯಲು ಅವಕಾಶ ಸಿಗುತ್ತದೆ.
ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಸೋದರ- ಸೋದರಿಯರ ಜತೆ ಚರ್ಚೆ ನಡೆಸಲಿದ್ದೀರಿ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ತಾಯಿಯ ಮನೆ ಕಡೆ ಸಂಬಂಧಿಕರು ನೆರವು ಕೇಳಿಕೊಂಡು ಬರಬಹುದು. ಕಾಲು ನೋವು, ಜೀರ್ಣಾಂಗದ ಸಮಸ್ಯೆ ಇರುವವರು ಕಡ್ಡಾಯವಾಗಿ ವೈದ್ಯರನ್ನು ಭೇಟಿ ಮಾಡಿ.
ಯಾವ ಕೆಲಸ ಮೊದಲಿಗೆ ಮಾಡಬೇಕು, ಯಾವುದು ನಂತರ ಮಾಡಬೇಕು ಎಂಬ ಬಗ್ಗೆ ಆದ್ಯತೆ ಮೇಲೆ ಕೆಲಸ ಮುಗಿಸಿ. ನಿರ್ದಿಷ್ಟ ಸಮಯದೊಳಗೆ ಕೆಲಸ ಮುಗಿಸದೆ ನಿಮ್ಮ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗಬಹುದು, ಎಚ್ಚರ. ಆದಾಯ ಮೂಲದಲ್ಲಿ ಕಡಿಮೆ ಆಗಬಹುದು.
ಸಾರ್ವಜನಿಕ ಜೀವನದಲ್ಲಿ ಇರುವವರು ಮನ್ನಣೆ, ಗೌರವ ಪಡೆಯಲಿದ್ದೀರಿ. ಉದ್ಯೋಗ ವಿಚಾರದಲ್ಲಿ ನೀವು ಅಂದುಕೊಂಡಂತೆಯೇ ಕೆಲವು ಸಕಾರಾತ್ಮಕ ಬೆಳವಣಿಗೆಗಳು ನಡೆಯಲಿವೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವವರು ಕಡ್ಡಾಯವಾಗಿ ವೈದ್ಯರನ್ನು ಭೇಟಿಯಾಗಿ.
ಹೆಚ್ಚುವರಿ ಆದಾಯ ಮೂಲಕ್ಕೆ ದಾರಿ ಸಿಗುತ್ತದೆ. ಹಳೇ ಸ್ನೇಹಿತರ ಸಹಕಾರದಿಂದ ದೊಡ್ಡ ಕೆಲಸಗಳನ್ನು ಶುರು ಮಾಡುವುದಕ್ಕೆ ಅನುಕೂಲ ಆಗುತ್ತದೆ. ಹೊಸ ಬಟ್ಟೆ, ಆಭರಣಗಳನ್ನು ಖರೀದಿ ಮಾಡುವುದಕ್ಕೆ ಹಣ ಖರ್ಚು ಮಾಡಲಿದ್ದೀರಿ. ಕ್ರೆಡಿಟ್ ಕಾರ್ಡ್ ಬಳಸುವಾಗ ಎಚ್ಚರಿಕೆಯಿಂದ ಇರಬೇಕು.
ಸ್ವಂತ ವ್ಯಾಪಾರ- ವ್ಯವಹಾರ ಮಾಡುತ್ತಿರುವವರಿಗೆ ವಿಸ್ತರಣೆಗೆ ಅವಕಾಶ ದೊರೆಯುತ್ತದೆ. ದೂರ ಪ್ರಯಾಣ ಮಾಡುವ ಅನಿವಾರ್ಯ ಸೃಷ್ಟಿಯಾಗುತ್ತದೆ. ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿ ಇರುವವರಿಗೆ ಮಹತ್ತರವಾದ ಜವಾಬ್ದಾರಿ ನಿರ್ವಹಿಸುವ ಬಗ್ಗೆ ಸೂಚನೆ ದೊರೆಯಲಿದೆ.
Tags:
ದಿನ ಭವಿಷ್ಯ