ಮನೆಯಲ್ಲಿ ಸಂಭ್ರಮ ಪಡುವುದಕ್ಕೆ ಕೆಲವು ಕಾರಣಗಳು ಸಿಗುತ್ತವೆ. ಇಷ್ಟು ಸಮಯ ಆತಂಕಕ್ಕೆ ಕಾರಣವಾಗಿದ್ದ ಕೆಲ ಸಂಗತಿಗಳನ್ನು ಹೇಗೆ ಇತ್ಯರ್ಥ ಮಾಡಬೇಕು ಎಂಬ ಬಗ್ಗೆ ಸ್ಪಷ್ಟತೆ ಸಿಗುತ್ತದೆ. ಕಾಲು ನೋವಿನ ಸಮಸ್ಯೆ ಅನುಭವಿಸುತ್ತಿರುವವರಿಗೆ ಸೂಕ್ತ ಔಷಧೋಪಚಾರದ ಮಾಹಿತಿ ದೊರೆಯಲಿದೆ.
ತಂದೆ- ತಾಯಿ ಆರೋಗ್ಯದ ಸಲುವಾಗಿ ಹಣ ಖರ್ಚು ಮಾಡುವಂಥ ಪರಿಸ್ಥಿತಿ ಉದ್ಭವಿಸುತ್ತದೆ. ಇಲ್ಲದಿದ್ದಲ್ಲಿ ಅವರ ಇನ್ಷೂರೆನ್ಸ್, ಔಷಧೋಪಚಾರಕ್ಕೆ ದೊಡ್ಡ ಮೊತ್ತದ ಖರ್ಚು ಮಾಡಬೇಕಾಗಬಹುದು. ಕ್ರೆಡಿಟ್ ಕಾರ್ಡ್ ಇರುವವರು ಅದನ್ನು ಬಳಸಬೇಕಾದ, ಇಲ್ಲದವರು ಸಾಲ ಮಾಡಬೇಕಾದ ಸ್ಥಿತಿ ಉದ್ಭವಿಸುತ್ತದೆ.
ಯಾರ ಪರವಾಗಿಯೂ ವಕಾಲತ್ತು ವಹಿಸಬೇಡಿ. ನಿಮಗೆ ಗೊತ್ತಿದ್ದಷ್ಟು ಮಾಹಿತಿಯನ್ನು ನಂಬಿ, ಮುಂದುವರಿದಲ್ಲಿ ಅವಮಾನದ ಪಾಲಾಗುವ ಸಾಧ್ಯತೆ ಇದೆ. ಸಹೋದ್ಯೋಗಿಗಳಿಗೆ ಸಹಾಯ ಮಾಡಲು ಮನಸ್ಸು ಮಾಡಿದಲ್ಲಿ ಪೂರ್ವಾಪರ ಆಲೋಚಿಸಿದ ನಂತರವೇ ಮುಂದಕ್ಕೆ ಹೆಜ್ಜೆ ಇಡಿ.
ಮುಂದೆ ಏನು ಮಾಡಬೇಕು ಎಂಬ ವಿಚಾರದಲ್ಲಿ ಗೊಂದಲ ಏರ್ಪಡುತ್ತದೆ. ಅದು ಉದ್ಯೋಗ ವಿಚಾರವೇ ಆಗಿರಬಹುದು ಅಥವಾ ಸಾಲ ಮರುಪಾವತಿಯೇ ಇರಬಹುದು. ಭವಿಷ್ಯದ ಚಿಂತೆ ಬೆನ್ನು ಬೀಳುತ್ತದೆ. ನಿಮ್ಮ ವೈಫಲ್ಯಕ್ಕೆ ಯಾರನ್ನೋ ಹೊಣೆ ಮಾಡಬೇಡಿ. ಹೀಗೆ ಮಾಡುವುದರಿಂದ ಇತರರ ಕಣ್ಣಲ್ಲಿ ಸಣ್ಣವರಾಗುತ್ತೀರಿ.
ಈ ದಿನ ಉತ್ಸಾಹ ಕಡಿಮೆ ಇರುತ್ತದೆ. ಯಾವುದೋ ಅಹಿತಕರ ವಿದ್ಯಮಾನ ಅಥವಾ ಸುದ್ದಿಯ ಕಾರಣಕ್ಕೆ ಬೇಸರ ಆಗಲಿದೆ. ಅಂದುಕೊಂಡಂತೆ ಯಾವ ಕೆಲಸವೂ ಮುಂದೆ ಸಾಗುವುದಿಲ್ಲ. ಆದರೆ ಹೊಸ ಅವಕಾಶವೊಂದು ನಿಮ್ಮನ್ನು ಹುಡುಕಿಕೊಂಡು ಬರಲಿದ್ದು, ಅದನ್ನು ಹೇಗೆ ಬಳಸಿಕೊಳ್ಳಲಿದ್ದೀರಿ ಎಂಬುದು ಮುಖ್ಯವಾಗುತ್ತದೆ.
ನಿಮ್ಮ ಅನುಭವದ ಪಾಠಗಳು ಸಹಾಯಕ್ಕೆ ಬರಲಿವೆ. ವ್ಯವಹಾರ- ವ್ಯಾಪಾರದಲ್ಲಿ ದಾರಿ ತಪ್ಪಿಸಲು ಪ್ರಯತ್ನಿಸುವವರಿಗೆ ಸೂಕ್ತ ಉತ್ತರ ನೀಡಲಿದ್ದೀರಿ. ಉಳಿತಾಯದ ಹಣವನ್ನು ತುರ್ತು ಕಾರಣಗಳಿಗೆ ಬಳಸಿಕೊಳ್ಳಬೇಕಾದ ಸನ್ನಿವೇಶ ಎದುರಾಗಬಹುದು. ಆದರೆ ಯಾವುದೇ ಸನ್ನಿವೇಶವನ್ನು ಎದುರಿಸುವ ಧೈರ್ಯ ನಿಮ್ಮ ಬಳಿ ಇರುತ್ತದೆ.
ಮೊದಲ ಪ್ರಯತ್ನದಲ್ಲೇ ಈ ದಿನ ಯಾವ ಕೆಲಸವೂ ಆಗುವುದಿಲ್ಲ. ಒಂದಕ್ಕೆ ಎರಡು ಬಾರಿ ಪ್ರಯತ್ನಿಸಲೇ ಬೇಕಾಗುತ್ತದೆ. ದೈಹಿಕವಾಗಿ ಬಹಳ ಆಯಾಸವಾಗುವಂಥ ಕೆಲಸಹಳು ಮಾಡುವಂಥ ಸ್ಥಿತಿ ಬರುತ್ತದೆ. ನೆರವು ಕೇಳಿಕೊಂಡು ಬರುವವರಿಗೆ ನಿಮ್ಮಿಂದ ಸಾಧ್ಯವಾದಷ್ಟು ಸಹಾಯವನ್ನು ಮಾಡಿ
ನೀವು ನಿರೀಕ್ಷೆ ಮಾಡಿದಂಥ ಕೆಲವು ಬದಲಾವಣೆಗಳು ಉದ್ಯೋಗದಲ್ಲಿ ಆಗಬಹುದು. ಈ ಪೈಕಿ ಕೆಲವು ಪರವಾಗಿ ಹಾಗೂ ಕೆಲವು ನಿಮ್ಮ ವಿರುದ್ಧವಾಗಿ ಇರುತ್ತವೆ. ಮಾತಿನ ಮೇಲೆ ಬಹಳ ಎಚ್ಚರಿಕೆಯಿಂದ ಇರಿ. ನಿಮ್ಮನ್ನು ಸಿಲುಕಿಸಲು ಹಿತಶತ್ರುಗಳು ಪ್ರಯತ್ನಿಸಬಹುದು. ಆದ್ದರಿಂದ ತಾಳ್ಮೆಯಿಂದ ಇರಬೇಕು.
ಸೋಷಿಯಲ್ ಮೀಡಿಯಾ ಬಳಸುವಾಗ ಎಚ್ಚರಿಕೆಯಿಂದ ಇರಬೇಕು. ನಿಮ್ಮ ಬಗ್ಗೆ ಅಪಪ್ರಚಾರ ಮಾಡುವ ಅವಕಾಶಗಳಿವೆ. ಅದಕ್ಕೆ ನೀವೇ ದಾರಿ ಮಾಡಿಕೊಡಬೇಡಿ. ಎಲ್ಲರ ಮಾತನ್ನೂ ಕೇಳಬೇಕು ಅಂತೇನೂ ಇಲ್ಲ. ಕೆಲವರು ಬೇಕೆಂತಲೇ ದಾರಿ ತಪ್ಪಿಸುವ ಪ್ರಯತ್ನ ಮಾಡಬಹುದು. ಅಂಥವರಿಂದ ಹುಷಾರಾಗಿರಿ
ಯಾರೂ ಒಪ್ಪಿಕೊಳ್ಳದ ಜವಾಬ್ದಾರಿಯೊಂದು ನಿಮ್ಮ ತಲೆಯ ಮೇಲೆ ಬರಬಹುದು. ಸಾಮರ್ಥ್ಯದ ಕಾರಣ ನೀಡಿ, ಅಂಟಿಹಾಕಲು ಯತ್ನಿಸುತ್ತಾರೆ. ಪುರ್ವಾಪರ ಆಲೋಚಿಸಿಯೇ ಉತ್ತರ ನೀಡಿ. ಉದ್ಯೋಗ ವಿಚಾರವಾಗಿ ಮಾನಸಿಕ ನೆಮ್ಮದಿ ಹಾಳಾಗುವ ಸಮಯ ಇದು. ಆದ್ದರಿಂದ ವಿಪರೀತದ ನಿರ್ಧಾರಗಳು ಬೇಡ.
ಅಧ್ಯಾತ್ಮ, ಧಾರ್ಮಿಕ ಚಿಂತನೆಗಳ ಕಡೆಗೆ ಮನಸ್ಸು ವಾಲುತ್ತದೆ. ಈ ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ದೊರೆಯುತ್ತದೆ. ಹಿರಿಯರು, ಅನುಭವಿಗಳು ನಿಮ್ಮ ನೆರವಿಗೆ ನಿಲ್ಲುತ್ತಾರೆ. ದಿರ್ಘಾವಧಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದ ಹಾಗೆ ಮುಖ್ಯ ತೀರ್ಮಾನವನ್ನು ಕೈಗೊಳ್ಳಲಿದ್ದೀರಿ.
ಕಣ್ಣು, ಹಲ್ಲು, ಕಿವಿಯ ಆರೋಗ್ಯ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಯಾವುದೇ ಸಣ್ಣ ಸಮಸ್ಯೆ ಕಾಣಿಸಿಕೊಂಡರೂ ತಕ್ಷಣವೇ ವೈದ್ಯರನ್ನು ಭೇಟಿಯಾಗಿ, ಚಿಕಿತ್ಸೆ ಪಡೆಯಿರಿ. ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಒತ್ತಡದ ದಿನ ಇದಾಗಿರುತ್ತದೆ. ಅವಕಾಶಗಳು ಅಂದುಕೊಂಡ ಮಟ್ಟಿಗೆ ಬರುವುದಿಲ್ಲ.
Tags:
ದಿನ ಭವಿಷ್ಯ