ಇಂದಿನ ಭವಿಷ್ಯ ಏಪ್ರಿಲ್ 05, 2020

Todays horoscope in kannada Todays astrology in kannada





Today astrology in kannada today horoscope in kannada


ಆಪ್ತರ ಜತೆಗಿನ ಒಡನಾಟ ಮನಸ್ಸಿಗೆ ಸಂತೋಷ ತರುತ್ತದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಅಧ್ಯಾತ್ಮ ಚಿಂತನೆ, ದೇವತಾರಾಧನೆ ಕಡೆಗೆ ಮನಸ್ಸು ಹರಿಯುತ್ತದೆ. ದಾನ- ಧರ್ಮದ ಸಲುವಾಗಿ ಹಣ ವೆಚ್ಚ ಮಾಡಲಿದ್ದೀರಿ. ಸಣ್ಣ-ಪುಟ್ಟ ಅಡ್ಡಿ, ಆತಂಕಗಳು ಸುಲಭವಾಗಿ ಬಗೆಹರಿಯುತ್ತವೆ.



Today astrology in kannada today horoscope in kannada

ಈ ದಿನ ಆಲಸ್ಯ ನಿಮ್ಮನ್ನು ಕಾಡಲಿದೆ. ಮಾಡಿದರಾಯಿತು, ನೋಡಿದರಾಯಿತು ಎಂಬ ಧೋರಣೆ ಬೇಡ. ಮೇಲಧಿಕಾರಿಗಳ ಸೂಚನೆಗಳನ್ನು ಸರಿಯಾಗಿ ಪಾಲಿಸಿದ್ದೀರಾ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಇಲ್ಲದಿದ್ದಲ್ಲಿ ಒಂದಕ್ಕೆ ಎರಡರಷ್ಟು ಸಮಯ ಒಂದೇ ಕೆಲಸಕ್ಕೆ ಹಿಡಿಯುತ್ತದೆ, ಎಚ್ಚರ.




Today astrology in kannada today horoscope in kannada

ಮಕ್ಕಳ ಚಟುವಟಿಕೆ ಮನಸ್ಸಿಗೆ ಖುಷಿ ನೀಡುತ್ತದೆ. ಹಳೆಯ ಸಾಲವನ್ನು ಮರುಪಾವತಿಸಲು ಆಲೋಚನೆ ಮಾಡುತ್ತೀರಿ. ನಿಮ್ಮ ಪಾಲಿನ ಜವಾಬ್ದಾರಿಗಳನ್ನು ಶೀಘ್ರವಾಗಿ ಪೂರೈಸುವ ಲೆಕ್ಕಾಚಾರದಲ್ಲಿ ವೇಗವಾಗಿ ಕೆಲಸ- ಕಾರ್ಯಗಳನ್ನು ಮಾಡುವಿರಿ. ನಿರೀಕ್ಷೆಗಿಂತ ಹೆಚ್ಚಿನ ಆದಾಯ ಬರಲಿದೆ.




Today astrology in kannada today horoscope in kannada

ಭರವಸೆಯೊಂದಿಗೆ ಯಾವ ಸಂದರ್ಭಕ್ಕಾಗಿ ಎದುರು ನೋಡುತ್ತಿದ್ದರೋ ಅದೇ ಬರಲಿದೆ. ನಿಮ್ಮ ಬಗ್ಗೆ ತಾತ್ಸಾರದ ಮಾತನಾಡಿದವರಿಗೆ ಬೆಲೆ ತಿಳಿಯುತ್ತದೆ. ಹಣಕಾಸು ವಿಚಾರದಲ್ಲೂ ಇತರರಿಗೆ ಸಹಾಯ ಮಾಡುವ ಮಟ್ಟದಲ್ಲಿ ಇರುತ್ತೀರಿ. ಸೌಮ್ಯ ಸ್ವಭಾವದ ನಿಮ್ಮ ಗುಣದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಲಿದೆ.






Today astrology in kannada today horoscope in kannada

ಸಂಪ್ರದಾಯ, ಪದ್ಧತಿ ಹಾಗೂ ಆಚಾರ- ವಿಚಾರವಾಗಿ ಹೊಸ ಸಂಗತಿಗಳನ್ನು ತಿಳಿದುಕೊಳ್ಳಲು ಸಮಯ ಮೀಸಲಿಡುತ್ತೀರಿ. ನಿಮ್ಮ ಪಾಲಿಗೆ ವಿಶ್ರಾಂತಿಯಿಂದ ಕೂಡಿದ ದಿನವಾಗಿರುತ್ತದೆ. ಮನರಂಜನೆಗಾಗಿ ಹಣವನ್ನು ಖರ್ಚು ಮಾಡಲಿದ್ದೀರಿ. ಗೆಳೆಯ- ಗೆಳತಿಯರೊಂದಿಗೆ ಹರಟೆ ಹೊಡೆಯುತ್ತಾ ಸಮಯ ಕಳೆಯಲಿದ್ದೀರಿ.





Today astrology in kannada today horoscope in kannada

ನಿಮ್ಮ ಬೆಳವಣಿಗೆಯಿಂದ ಇತರರು ಕರುಬುತ್ತಾರೆ. ವೃತ್ತಿನಿರತರಿಗೆ ಆದಾಯದಲ್ಲಿ ಅಲ್ಪ ಪ್ರಮಾಣದಲ್ಲಿ ಕುಸಿತವುಂಟಾಗಲಿದೆ. ನಿಗದಿತ ಅವಧಿಯಲ್ಲಿ ವಹಿಸಿಕೊಂಡ ಜವಾಬ್ದಾರಿಗಳನ್ನು ಪೂರೈಸುವುದಕ್ಕೆ ಸಾಂಸಾರಿಕ ಕಾರಣಗಳು ಬಿಡುವುದಿಲ್ಲ. ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಸವಾಲುಗಳನ್ನು ದಾಟುತ್ತೀರಿ.






Today astrology in kannada today horoscope in kannada

ಇತರರ ವೈಯಕ್ತಿಕ ವಿಚಾರದಲ್ಲಿ ನೀವು ಸಲುಗೆ ತೆಗೆದುಕೊಂಡರೆ, ಅದೇ ರೀತಿ ನೀವೂ ಇತರರಿಗೆ ಸಲುಗೆ ಕೊಟ್ಟಂತೆ ಆಗುತ್ತದೆ. ಆದ್ದರಿಂದ ಮಾತಿನ ಮೇಲೆ ಹಿಡಿತ ಇರಲಿ. ನಿಮಗೆ ಗೊತ್ತಿರುವ ಎಲ್ಲ ಸಂಗತಿಗಳೂ ಸತ್ಯ ಎಂದೇನಿಲ್ಲ. ಅದನ್ನು ನಂಬಿಕೊಂಡು ಯಾರನ್ನೂ ದೂರ ಮಾಡಿಕೊಳ್ಳಬೇಡಿ.




Today astrology in kannada today horoscope in kannada

ರುಚಿ ರುಚಿಯಾದ ಊಟ- ತಿಂಡಿ ಸವಿಯುವ ಯೋಗ ಇದೆ. ಪೂರ್ವ ನಿರ್ಧಾರಿತ ಕೆಲಸಗಳನ್ನು ಪೂರ್ಣ ಮಾಡಲಾಗದೆ ಸ್ವಲ್ಪ ಪ್ರಮಾಣದಲ್ಲಿ ನಷ್ಟ ಅನುಭವಿಸುತ್ತೀರಿ. ಚರ್ಮದ ಅಲರ್ಜಿಯಂಥ ಸಮಸ್ಯೆ ಇರುವವರಿಗೆ ರೋಗ ಉಲ್ಬಣ ಆಗುವ ಸಾಧ್ಯತೆ ಇದೆ. ಆ ಬಗ್ಗೆ ಎಚ್ಚರಿಕೆಯಿಂದ ಇರಬೇಕು.






Today astrology in kannada today horoscope in kannada

ದಾಕ್ಷಿಣ್ಯಕ್ಕೆ ಸಿಲುಕಿಕೊಂಡು ಕೈಯಿಂದ ಹಣ ಕಳೆದುಕೊಳ್ಳಬೇಕಾಗುತ್ತದೆ. ಆಡುವ ಮಾತಿನ ಮೇಲೆ ನಿಗಾ ಇರಲಿ. ಸಂತೋಷದಲ್ಲೋ ಅಥವಾ ಭಾವುಕ ಕ್ಷಣದಲ್ಲೋ ಹೇಳಿದ ಮಾತಿಗೆ ದೊಡ್ಡ ಮಟ್ಟದ ಬೆಲೆ ತೆರಬೇಕಾಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಮೌನವಾಗಿರಿ. ದೇವತಾ ಚಿಂತನೆ ಮಾಡಿರಿ.







Today astrology in kannada today horoscope in kannada

ಉದ್ಯೋಗ ಬದಲಾವಣೆ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಹೊಸ ವ್ಯಾಪಾರ- ವ್ಯವಹಾರ ಆರಂಭಿಸುವ ಬಗ್ಗೆ ಆಪ್ತರ ಜತೆಗೆ ಚರ್ಚೆ ನಡೆಸಲಿದ್ದೀರಿ. ಬಹಳ ಕಾಲದಿಂದ ಹುಡುಕುತ್ತಿದ್ದ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ ಇದೆ. ಅವರ ಅನುಭವದ ಮಾತುಗಳಿಂದ ಲಾಭವಾಗಲಿದೆ.



Today astrology in kannada today horoscope in kannada

ಮನೆಯ ಕೆಲಸದಲ್ಲೇ ಬಹುಪಾಲು ಸಮಯ ಹೋಗುತ್ತದೆ. ಮಕ್ಕಳು- ಸಂಗಾತಿಯ ಬೇಡಿಕೆಗಳನ್ನು ಪೂರೈಸುವುದಕ್ಕೆ ಹಣ ಖರ್ಚಾಗಲಿದೆ. ಮನೆಯಲ್ಲಿ ಕೆಲವು ವಸ್ತುಗಳನ್ನು ದುರಸ್ತಿ ಮಾಡಿಸಲೇಬೇಕಾದ ಸನ್ನಿವೇಶ ಎದುರಾಗಬಹುದು. ಕ್ರೆಡಿಟ್ ಕಾರ್ಡ್ ಬಳಸುವಂಥವರು ಖರ್ಚಿನ ಮೇಲೆ ಹಿಡಿತ ಇಟ್ಟುಕೊಂಡಿರಬೇಕು.






Today astrology in kannada today horoscope in kannada

ಹೊಸ ಪುಸ್ತಕ ಓದುತ್ತಾ, ಇಷ್ಟವಾದ ಸಿನಿಮಾ ನೋಡುತ್ತಾ, ನೆಚ್ಚಿನ ಗೆಳೆಯ ಅಥವಾ ಗೆಳತಿಯರ ಜತೆಗೆ ಹರಟುತ್ತಾ ಸಮಯ ಕಳೆಯಲಿದ್ದೀರಿ. ಕೂಡಿಟ್ಟ ಹಣವನ್ನು ಸೂಕ್ತವಾಗಿ ಹೂಡಿಕೆ ಮಾಡುವ ವಿಧಾನವನ್ನು ತಜ್ಞರೊಂದಿಗೆ ಚರ್ಚೆ ಮಾಡಲಿದ್ದೀರಿ. ಧ್ಯಾನ, ಯೋಗ ಕಲಿಸುವವರಿಗೆ ಆದಾಯದ ಹೆಚ್ಚಳಕ್ಕೆ ದಾರಿ ಗೋಚರಿಸಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement