ಮನೆಯಲ್ಲಿ ಇರುವ ಮುಖ್ಯ ವಸ್ತುಗಳ ಮಾರಾಟದ ಬಗ್ಗೆ ಚರ್ಚೆ ನಡೆಸಲಿದ್ದೀರಿ. ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಸಂಗಾತಿ ಜತೆಗೆ ಗಂಭೀರ ಮಾತುಕತೆ ನಡೆಯಲಿದೆ. ಬ್ಯಾಂಕ್ ಗೆ ಸಂಬಂಧಿಸಿದ ಕಾಗದ ಪತ್ರ, ಪಾಸ್ ಬುಕ್, ಎಟಿಎಂ ಕಾರ್ಡ್ ಗಳು ಇತ್ಯಾದಿಯನ್ನು ಜೋಪಾನವಾಗಿ ಕೈಗೆ ಸಿಗುವಂತೆ ಎತ್ತಿಟ್ಟುಕೊಳ್ಳಿ.
ಇನ್ಷೂರೆನ್ಸ್, ಹೆಲ್ತ್ ಕಾರ್ಡ್ ಇಂಥದ್ದರ ಅಗತ್ಯ ಈ ದಿನ ನಿಮಗೆ ಅಗತ್ಯ ಬೀಳಬಹುದು. ಯಾವುದೂ ನಿರಾಯಾಸವಾಗಿ ದೊರೆಯುವುದಿಲ್ಲ. ಮಕ್ಕಳ ಸಲುವಾಗಿ ಚಿಂತೆ ಮಾಡುವಂತಾಗುತ್ತದೆ. ಉದ್ಯೋಗ ಸ್ಥಳದಲ್ಲಿ ಮಹತ್ತರ ಬದಲಾವಣೆಯೊಂದು ಆಗುವ ಬಗ್ಗೆ ನಿಮಗೆ ಮಾಹಿತಿ ದೊರೆಯಲಿದೆ.
ಮೈಮೇಲೆ ಎಳೆದುಕೊಂಡು ಮಾಡಿದ ಕೆಲಸಗಳ ಫಲಿತಾಂಶ ನಿಮ್ಮ ಪಾಲಿಗೆ ದೊರೆಯಲಿದೆ. ದೂರದ ಊರಿನ ನೆಂಟರಿಂದ ನಷ್ಟದ ಬಗ್ಗೆ ಮಾಹಿತಿ ಬರಬಹುದು. ಮುಖ್ಯವಾಗಿ ಪಿತ್ರಾರ್ಜಿತ ಆಸ್ತಿ ವಿಚಾರದ ವ್ಯಾಜ್ಯವೊಂದು ತಲೆ ಎತ್ತುವ ಸಾಧ್ಯತೆ ಇದೆ. ನಿಮ್ಮಿಂದ ಯಾವುದಾದರೂ ಮುಖ್ಯ ವಿಚಾರ ಬಾಯಿ ಬಿಡಿಸಲು ಹಲವರು ಪ್ರಯತ್ನಿಸಲಿದ್ದಾರೆ.
ಬೇರೆಯವರು ಹೇಳಿದ ಗುಟ್ಟನ್ನು ಯಾರ ಜತೆಗೂ ಚರ್ಚೆ ಮಾಡದಿರಿ. ಅದರಲ್ಲೂ ಉದ್ಯೋಗಕ್ಕೆ ಸಂಬಂಧಿಸಿದ ವೇತನ, ಬಡ್ತಿ, ವರ್ಗಾವಣೆ ಇತ್ಯಾದಿ ವಿಚಾರಗಳನ್ನು ಇತರರೊಂದಿಗೆ ಹಂಚಿಕೊಳ್ಳದಿರಿ. ನೆಗಡಿ, ಕೆಮ್ಮು, ಕಫದಂಥ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.
ನಿಮ್ಮ ಸಹಜ ಸ್ವಭಾವಕ್ಕೆ ವಿರುದ್ಧವಾದ ಧೋರಣೆ ಅನುಸರಿಸಿದರೆ ಉತ್ತಮ. ನಿಮಗೆ ಸರಿ ಎಂದು ಗೊತ್ತಿದ್ದರೂ ಆ ಬಗ್ಗೆ ಮೌನವಾಗಿ ಇದ್ದುಬಿಡಿ. ಹಿತಶತ್ರುಗಳ ಪಿತೂರಿಯಿಂದ ನಿಮ್ಮ ಬಗ್ಗೆ ನಕಾರಾತ್ಮಕವಾದ ಅಭಿಪ್ರಾಯ ರೂಪಿಸಲು ಯತ್ನಿಸಲಾಗುತ್ತದೆ. ನಿಮ್ಮನ್ನು ರೇಗಿಸಿ ಕೂಗಾಡುವಂತೆ ಮಾಡಲಾಗುತ್ತದೆ, ಎಚ್ಚರವಾಗಿರಿ.
ಊಟ- ತಿಂಡಿ, ನೀರು ಸೇವನೆ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಮನೆಗಳಿಂದ ದೂರದಲ್ಲಿ ಇರುವವರಿಗೆ ಬಹಳ ಸವಾಲಿನ ದಿನ ಇದು. ಹಿರಿಯ, ಅನುಭವಿಗಳ ಮಾರ್ಗದರ್ಶನ ಪಡೆದು, ಮುಖ್ಯ ತೀರ್ಮಾನಗಳನ್ನು ತೆಗೆದುಕೊಳ್ಳಿ. ಔಷಧಿಗಳ ಬದಲಾವಣೆ ಮಾಡಿದ್ದಲ್ಲಿ ಒಂದಕ್ಕೆ ಎರಡು ಬಾರಿ ವಿಚಾರಿಸಿ, ಆ ನಂತರ ತೆಗೆದುಕೊಳ್ಳಿ.
ನೀವು ಮನಸಿನಲ್ಲಿ ಅಂದುಕೊಂಡು, ಹೇಳದೆ ಸುಮ್ಮನಿದ್ದರೆ ಎದುರಿನಲ್ಲಿ ಇರುವವರಿಗೆ ಹೇಗೆ ತಿಳಿಯಬೇಕು? ಏನು ಬೇಕು, ಯಾವ ಕೆಲಸ ಆಗಬೇಕು ಎಂಬ ಬಗ್ಗೆ ನಿರ್ದಿಷ್ಟವಾಗಿ ತಿಳಿಸಿ. ಯಾರ ಮನಸ್ಸಿಗೆ ಬೇಜಾರು ಮಾಡಬಾರದು ಅಂದುಕೊಂಡರೆ ನಿಮ್ಮ ಕೆಲಸ- ಕಾರ್ಯಕ್ಕೆ ತೊಂದರೆ ಆಗುತ್ತದೆ.
ನಿಮ್ಮ ನಿಷ್ಠೆಯು ಭವಿಷ್ಯವನ್ನು ತೀರ್ಮಾನಿಸುವ ದಿನ ಇದಾಗಿರುತ್ತದೆ. ಯಾವ ವಿಚಾರದಲ್ಲೂ ಸುಳ್ಳು ಹೇಳಬೇಡಿ. ಏಕೆಂದರೆ, ಈ ದಿನ ಬಹಳ ಸುಲಭವಾಗಿ ಸಿಕ್ಕಿ ಬೀಳ್ತೀರಿ. ತುರ್ತು ಕೆಲಸಗಳು ಮಾಡಬೇಕಾಗುತ್ತದೆ. ಆದರೆ ಅದಕ್ಕೆ ನಾನಾ ಬಗೆಯ ಅಡೆತಡೆಗಳು ಬರಲಿವೆ. ಈ ದಿನ ನಿಮ್ಮ ಸ್ನೇಹಿತರು ನೆರವಾಗಲಿದ್ದಾರೆ.
ಪ್ರೀತಿಪಾತ್ರರ ಜತೆಗೆ ಅತ್ಯುತ್ತಮ ಸಮಯವನ್ನು ಕಳೆಯಲಿದ್ದೀರಿ. ಮನರಂಜನೆಗಾಗಿ ಹಣ ಖರ್ಚಾಗಲಿದೆ. ಕ್ರೆಡಿಟ್ ಕಾರ್ಡ್ ಬಳಸುವವರು, ಆನ್ ಲೈನ್ ವ್ಯವಹಾರ ಮಾಡುವವರು ಖರ್ಚಿನ ಮೇಲೆ ನಿಗಾ ಇಡಿ. ನಿಮ್ಮ ಹವ್ಯಾಸಗಳಿಗೆ ಉತ್ತೇಜನ ದೊರೆಯಲಿದೆ. ರುಚಿಕಟ್ಟಾದ ಊಟ ಸವಿಯಲಿದ್ದೀರಿ.
ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎಂಬ ಮಾತಿದೆ. ನಿಮಗೆ ಈ ಮಾತು ಅನ್ವಯ ಆಗುತ್ತದೆ. ಸಾಧ್ಯವಾದಷ್ಟು ಮೌನ, ತಾಳ್ಮೆಯಿಂದ ಇರಿ. ಕೆಲಸ- ಕಾರ್ಯಗಳಲ್ಲಿ ನಿರಾಸಕ್ತಿ ತೋರಿಸದಿರಿ. ಮಾನಸಿಕ ಸ್ಥಿಮಿತಕ್ಕೆ ಧ್ಯಾನ, ಯೋಗವನ್ನು ಮಾಡಿ. ದೇವತಾರಾಧನೆ ಕಡೆಗೆ ಲಕ್ಷ್ಯ ಕೊಡಿ.
ಬೆಲೆ ಬಾಳುವ, ದುಬಾರಿ ವಸ್ತುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಈ ದಿನ ನಿಮ್ಮ ನೆನಪಿನ ಶಕ್ತಿ ಬಹಳ ಕಡಿಮೆ ಇರುತ್ತದೆ. ಆದ್ದರಿಂದ ಎಚ್ಚರವಾಗಿರಿ. ಯಾರಿಗಾದರೂ ಹಣಕಾಸಿನ ನೆರವು ನೀಡುವ ಭರವಸೆ ಕೊಡುವ ಮೊದಲಿಗೆ ನಿಮ್ಮ ಆರ್ಥಿಕ ಸ್ಥಿತಿ ಹೇಗಿದೆ ಎಂಬ ಬಗ್ಗೆ ಆಲೋಚಿಸಿ.
ಭವಿಷ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡುವ ಕೆಲಸಗಳಿಗೆ ಸೂಕ್ತ ಪ್ರತಿಫಲ ದೊರೆಯಲಿದೆ. ತಂದೆ- ತಾಯಿಯ ಆರೋಗ್ಯ ತಪಾಸಣೆಗೆ ಹಣ ಖರ್ಚು ಮಾಡಲಿದ್ದೀರಿ. ಮಾನಸಿಕವಾಗಿ ನೆಮ್ಮದಿಯಿಂದ ಇರುವ ದಿನ. ಹೊಸ ವ್ಯಾಪಾರ- ವ್ಯವಹಾರದ ವಿಸ್ತರಣೆಗೆ ಯೋಜನೆ ರೂಪಿಸಲಿದ್ದೀರಿ.
Tags:
ದಿನ ಭವಿಷ್ಯ