ಮೋದಿಯಿಂದ ದೀಪ ಹಚ್ಚುವಂತೆ ಕರೆ – ವೈರಲ್ ಆಯ್ತು ಜೋಫ್ರಾ ಆರ್ಚರ್ ನುಡಿದಿದ್ದ ಭವಿಷ್ಯ

ಮೋದಿಯಿಂದ ದೀಪ ಹಚ್ಚುವಂತೆ ಕರೆ – ವೈರಲ್ ಆಯ್ತು ಜೋಫ್ರಾ ಆರ್ಚರ್ ನುಡಿದಿದ್ದ ಭವಿಷ್ಯ


ನವದೆಹಲಿ: ತಮ್ಮ ಟ್ವಿಟ್ಟರ್ ಮೂಲಕವೇ ಭವಿಷ್ಯದ ಘಟನೆಗಳ ಕುರಿತು ಸುಳಿವನ್ನು ನೀಡುತ್ತಿರುವ ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರ ಹಳೆಯ ಟ್ವೀಟ್‍ಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅದರಲ್ಲೂ ಪ್ರಧಾನಿ ಮೋದಿ ಅವರು ಇಂದು ನೀಡಿದ ವಿಡಿಯೋ ಸಂದೇಶದ ಬಳಿಕ ಜೋಫ್ರಾ ಆರ್ಚರ್ ಅವರ ಟ್ವೀಟ್ ಸಾಕಷ್ಟು ಚರ್ಚೆಗಳಿಗೆ ಗ್ರಾಸವಾಗಿದೆ.



ಅನೇಕ ಬಾರಿ ಭವಿಷ್ಯದಲ್ಲಿ ನಡೆಯಬಹುದಾದ ಕೆಲವೊಂದು ಬಗ್ಗೆ ಸುಳಿವು ನೀಡುವ ಮೂಲಕ ಅತೀಂದ್ರಿಯ ಶಕ್ತಿಯನ್ನು ಪ್ರದರ್ಶಿಸಿರುವ ಇಂಗ್ಲೆಡ್ ವೇಗದ ಬೌಲರ್ ಜೋಫ್ರಾ ಇನ್ನೊಮ್ಮೆ ಮತ್ತೆ ಅದೇ ರೀತಿಯ ಸುದ್ದಿಯಲ್ಲಿದ್ದಾರೆ.




ಮಾರ್ಚ್ 23ರಂದು ರಾಷ್ಟ್ರದ ಜನರಲ್ಲಿ ಮನವಿಯನ್ನು ಮಾಡಿದ್ದ ನರೇಂದ್ರಮೋದಿ ಅವರು ಮೂರು ವಾರಗಳ ಕಾಲ ಮಾಹಿತಿಯನ್ನು ನೀಡಿ ಸಹಕಾರ ನೀಡುವಂತೆ ಮನವಿಯನ್ನು ಮಾಡಿದ್ದರು. ಇತ್ತ 2017ರ ಅಕ್ಟೋಬರ್ ನಲ್ಲಿ ಟ್ವೀಟ್ ಮಾಡಿದ್ದ ಆರ್ಚರ್ ‘ಮನೆಯಲ್ಲೇ ಮೂರು ವಾರಗಳ ಉಳಿವುಯುವುದು ಸಾಕಾಗುವುದಿಲ್ಲ’ ಎಂದು ಬರೆದುಕೊಂಡಿದ್ದರು.




ಲಾಕ್‍ಡೌನ್ ಆದೇಶದ ಬಳಿಕ ಮತ್ತೆ ಶುಕ್ರವಾರ ವಿಡಿಯೋ ಸಂದೇಶವನ್ನು ರವಾನೆ ಮಾಡಿರೋ ನರೇಂದ್ರ ಮೋದಿ ಅವರು, ಏಪ್ರಿಲ್ 5ರ ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷ ಲೈಟ್ ಆಫ್ ಮಾಡಿ ದೀಪ ಬೆಳಗಿಸಿ ಎಂದು ರಾಷ್ಟ್ರದ ಜನರನ್ನು ಮನವಿ ಮಾಡಿ ಎಲ್ಲರೂ ಒಟ್ಟಾಗೋಣ ಎಂದು ಮನವಿ ಮಾಡಿದ್ದರು. ಸದ್ಯ ಜೋಫ್ರಾ ಆರ್ಚರ್ ಅವರ ಹಳೆಯ ಟ್ವೀಟ್‍ಗಳಲ್ಲಿ ಮೋದಿ ಅವರ ಮನವಿಯಂತೆ 9 ಫಾರ್ಮ್ 9 ಲೈಟ್ ಅಫ್ ಮಾಡಿ ಟಾರ್ಚ್ ಹಾಕಿ ಎಂದು ಟ್ವೀಟ್ ಮಾಡಿರುವುದು ಎಲ್ಲಾ ಕಡೆ ಸಾಕಷ್ಟು ವೈರಲ್ ಆಗುತ್ತಿದೆ.

ಮೋದಿಯಿಂದ ದೀಪ ಹಚ್ಚುವಂತೆ ಕರೆ – ವೈರಲ್ ಆಯ್ತು ಜೋಫ್ರಾ ಆರ್ಚರ್ ನುಡಿದಿದ್ದ ಭವಿಷ್ಯ

ಮೋದಿಯಿಂದ ದೀಪ ಹಚ್ಚುವಂತೆ ಕರೆ – ವೈರಲ್ ಆಯ್ತು ಜೋಫ್ರಾ ಆರ್ಚರ್ ನುಡಿದಿದ್ದ ಭವಿಷ್ಯ




ಜೋಫ್ರಾ ಆರ್ಚರ್ ಅವರು ಸುಮಾರು ಆರು ವರ್ಷಗಳ ಹಿಂದೆಯೇ ಭವಿಷ್ಯದ ಪರಿಣಾಮದ ಬಗ್ಗೆ ಟ್ವೀಟ್ ಒಂದನ್ನು ಮಾಡಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಜೋಫ್ರಾ ಆರ್ಚರ್ ಅವರ ಟ್ವೀಟ್ ಭಾರೀ ವೈರಲ್ ಆಗಿತ್ತು. ‘ಓಡಲು ಜಾಗವಿಲ್ಲದ ಆ ದಿನಗಳು ಬರಲಿದೆ’ ಎಂದು ಜೋಫ್ರಾ ಆರ್ಚರ್ 2014ರ ಆಗಸ್ಟ್ 20ರಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದರು. ಅಕ್ಷರಶ: ಜೋಫ್ರಾ ಆರ್ಚರ್ ನುಡಿದ ಭವಿಷ್ಯ ಇಂದು ನಿಜವಾಗಿದೆ. ಕೋವಿಡ್ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಕ್ರೀಡಾ ಆಟಗಾರರೆಲ್ಲ ಮನೆಯಲ್ಲೇ ಕುಳಿತುಕೊಳ್ಳುವಂತಾಗಿದೆ. ಕ್ರಿಕೆಟಿಗರ ಅಭ್ಯಾಸ ಸಂಪೂರ್ಣವಾಗಿ ನಿಂತುಹೋಗಿದೆ. ಮೈದಾನಕ್ಕಿಳಿಯದಂತೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗಿದೆ. ವೈರಲ್ ಟ್ವೀಟ್ ಗಮನಿಸಿರುವ ನೆಟ್ಟಿಗರು ಆರ್ಚರ್ ಅವರನ್ನು ಗಾಡ್ (ದೇವರು) ಎಂದು ಸಂಬೋಧಿಸಲು ಶುರುಮಾಡಿದ್ದಾರೆ. ಜೋಫ್ರಾ ಆರ್ಚರ್ ಅವರ ಟ್ವೀಟ್‍ಗಳು ಸಾಕಷ್ಟು ಅಚ್ಚರಿಯನ್ನು ಕೂಡ ಮೂಡಿಸುತ್ತಿದೆ.


ಕಳೆದ ಏಕದಿನ ವಿಶ್ವಕಪ್‍ನಲ್ಲಿ ಇಂಗ್ಲೆಂಡ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿರುವ ಜೋಫ್ರಾ ಆರ್ಚರ್, ಬಳಿಕ ಆಸ್ಟ್ರೇಲಿಯಾ ವಿರುದ್ಧ ಆ್ಯಶಸ್ ಸರಣಿ ವೇಳೆ ಟೆಸ್ಟ್ ಕ್ರಿಕೆಟ್‍ಗೂ ಕೂಡ ಡೆಬ್ಯು ಮಾಡಿದ್ದರು. ಆದರೆ ಗಾಯದ ಸಮಸ್ಯೆಗಳಿಂದಾಗಿ ಮುಂದೆ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಿಂದ ಹೊರಗುಳಿಯುವಂತಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement