ಮುರುಡೇಶ್ವರ: ರಸ್ತೆಯ ಪಕ್ಕದಲ್ಲಿ ಸಿಲುಕಿಕೊಂಡ ವಾಹನವೊಂದನ್ನು ಎತ್ತಲು ಬಂದ ಕ್ರೇನ್ ನಿಯಂತ್ರಣ ತಪ್ಪಿ ವ್ಯಕ್ತಿಯೋರ್ವರ ಮೇಲೆ ಬಿದ್ದ ಪರಿಣಾಮವಾಗಿ ಆತ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿರುವ ಘಟನೆ ಶನಿವಾರ ಮುಡೇಶ್ವರ ತಾಲೂಕಿನ ಜನತಾ ಕಾಲೊನಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಮುರುಡೇಶ್ವರದ ನಾಗರಾಜ್ ವೆಂಕಟಪ್ಪ ಪೂಜಾರಿ ಎಂದು ಗುರುತಿಸಲಾಗಿದ್ದು ಈತ ಪಕ್ಕದಲ್ಲಿ ನಿಂತು ಕ್ರೇನ್ ಕೆಲಸವನ್ನು ನೋಡುತ್ತಿದ್ದ ಎಂದು ತಿಳಿದುಬಂದಿದೆ.
ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾನೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಪರಾಧ ವಿಭಾಗದ ರವೀಂದ್ರ ಬಿರೇದಾರ್ ತನಿಖೆಯನ್ನು ಮುಂದುವರಿಸಿದ್ದಾರೆ