ಇಂದಿನ ಭವಿಷ್ಯ ಮಾರ್ಚ್ 25, 2020

Todays horoscope in kannada Todays astrology in kannada

Today astrology in kannada today horoscope in kannada

ಹಲವು ಬಗೆಯ ಆತಂಕಗಳು ನಿಮ್ಮಿಂದ ದೂರವಾಗಲಿದೆ. ಮಾನಸಿಕವಾಗಿ, ದೈಹಿಕವಾಗಿ ವಿಶ್ರಾಂತಿ ಪಡೆಯಬೇಕು ಎಂದೆನಿಸಿ, ಏಕಾಂಗಿಯಾಗಿ ಸಮಯವನ್ನು ಕಳೆಯಲಿದ್ದೀರಿ. ಬಂಧುಗಳು, ಸ್ನೇಹಿತರ ಅಗತ್ಯಗಳಿಗೆ ಸ್ಪಂದಿಸಲಿದ್ದೀರಿ. ಮಕ್ಕಳ ಭವಿಷ್ಯದ ಸಲುವಾಗಿ ಯೋಜನೆಯೊಂದನ್ನು ರೂಪಿಸಲಿದ್ದೀರಿ.

Today astrology in kannada today horoscope in kannada

ಸ್ವಂತ ವ್ಯಾಪಾರ- ವ್ಯವಹಾರ ಮಾಡುತ್ತಿರುವವರು ವಿಸ್ತರಣೆ ಬಗ್ಗೆ ಆಲೋಚನೆ ಮಾಡುತ್ತೀರಿ. ಸಾಲದ ಹಂಗಿಲ್ಲದೆ, ಹೊಸ ಪಾರ್ಟನರ್ ಗಳನ್ನು ಸೇರಿಸಿಕೊಂಡು ವ್ಯವಹಾರ ಮಾಡಬೇಕು ಎಂಬ ಆಲೋಚನೆ ಮೂಡುತ್ತದೆ. ವಾಹನ ಚಾಲನೆಯನ್ನು ಮಾಡಬೇಡಿ. ಅತಿಯಾದ ಸಿಹಿ ಪದಾರ್ಥ ಸೇವನೆ ಬೇಡ.

Today astrology in kannada today horoscope in kannada

ಸಂಗಾತಿ- ಮಕ್ಕಳ ಜತೆಗೆ ಉತ್ತಮವಾದ ಸಮಯ ಕಳೆಯುತ್ತೀರಿ. ರುಚಿಕಟ್ಟಾದ ಊಟವನ್ನು ಸವಿಯುವ ಯೋಗ ಇದೆ. ತಂದೆ- ತಾಯಿ ಹಾಗೂ ಗುರು- ಹಿರಿಯರ ಆಶೀರ್ವಾದ ನಿಮ್ಮ ಮೇಲೆ ಇರಲಿದೆ. ಮನೆಯಲ್ಲಿ ದೇವರ ಪೂಜಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಬಗ್ಗೆ ಚರ್ಚೆ ನಡೆಯಲಿದೆ.

Today astrology in kannada today horoscope in kannada

ಏಕಾಂತದಲ್ಲಿ ಇರಲು ಮನಸ್ಸು ಬಯಸುತ್ತಿದೆ. ಭವಿಷ್ಯದ ಮುಖ್ಯ ಯೋಜನೆಯೊಂದರ ಬಗ್ಗೆ ಸಂಗಾತಿ ಜತೆಗೆ ಚರ್ಚೆ ನಡೆಸಲಿದ್ದೀರಿ. ಬ್ಯಾಂಕ್ ಉದ್ಯೋಗಿಗಳಿಗೆ ಈ ಹಿಂದಿನ ಘಟನೆಯಿಂದಾಗಿ ಒತ್ತಡದ ಸನ್ನಿವೇಶ ಇರುತ್ತದೆ. ಮಕ್ಕಳ ಪ್ರಗತಿ- ಏಳ್ಗೆಗಾಗಿ ಉಳಿತಾಯದ ಹಣವನ್ನು ತೆಗೆಯುವ ಬಗ್ಗೆ ಆಲೋಚನೆ ಮಾಡುತ್ತೀರಿ.

Today astrology in kannada today horoscope in kannada

ನೇರ ಮಾತುಗಳನ್ನು ಆಡುವ ಮೂಲಕ ಆಪ್ತರಿಗೆ ಬೇಸರ ಉಂಟು ಮಾಡಲಿದ್ದೀರಿ. ಎಲ್ಲಿಯದೋ ಕೋಪ ಇನ್ನೆಲ್ಲಿಯೋ ತೋರಿಸುವುದು ಸಮಂಜಸವಲ್ಲ. ವಾಸ್ತವವನ್ನು ಅರಿತು ಮುಂದಿನ ಹೆಜ್ಜೆಯನ್ನು ಇಡುವುದು ಸೂಕ್ತ. ನಿಮ್ಮ ಸಾಮರ್ಥ್ಯದ ಬಗ್ಗೆ ಅತಿಯಾದ ವಿಶ್ವಾಸ ಒಳ್ಳೆಯದಲ್ಲ.

Today astrology in kannada today horoscope in kannada

ಮನೆ ನಿರ್ಮಾಣದ ವೃತ್ತಿಯಲ್ಲಿ ಇರುವವರಿಗೆ ಹಣಕಾಸಿನ ಅಡಚಣೆ ಮುಂದುವರಿಯುತ್ತದೆ. ಕಾನೂನು- ಕಾಯ್ದೆಗಳ ಪಾಲನೆ ಸರಿಯಾಗಿ ಆಗಿದೆಯಾ ಎಂಬ ಬಗ್ಗೆ ಗಮನ ಇರಲಿ. ಯಾರನ್ನೇ ಆಗಲಿ, ಸುಮ್ಮನೆ ನಂಬಿ ಅನುಸರಿಸುವುದು ಸರಿಯಲ್ಲ. ಕಾರ್ಯ ವಿಧಾನದಲ್ಲಿ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಆಲೋಚಿಸುವಿರಿ.

Today astrology in kannada today horoscope in kannada

ನಿಮ್ಮನ್ನು ಬಹುವಾಗಿ ನಂಬಿದವರ ಸಲುವಾಗಿ ಹಣಕಾಸು ನೆರವು ನೀಡಬೇಕಾಗುತ್ತದೆ. ನಿಮಗೆ ಇರುತ್ತದೋ ಇಲ್ಲವೋ ಎಂದು ನೋಡದೆ ಈ ಸಹಾಯ ಮಾಡಬೇಕಾದ ಅನಿವಾರ್ಯ ಎದುರಾಗಬಹುದು. ಭುಜದ ನೋವು ಕಾಡಲಿದ್ದು, ವೈದ್ಯರ ಮೂಲಕ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಿ.

Today astrology in kannada today horoscope in kannada

ವಾಹನವನ್ನು ಮಾರಾಟಕ್ಕೆ ಇಟ್ಟಿರುವವರು ನಿರ್ಧಾರ ಬದಲಿಸುವ ಸಾಧ್ಯತೆ ಇದೆ. ತಾತ್ಕಾಲಿಕವಾಗಿ ಪರಸ್ಥಳ ವಾಸ ಮಾಡುವ ಯೋಗ ಇದೆ. ಉಳಿತಾಯಕ್ಕೆ ಸಂಬಂಧಿಸಿದಂತೆ ಪ್ರಮುಖ ವಿಚಾರಗಳನ್ನು ಸಂಗಾತಿ ಜತೆಗೆ ಚರ್ಚೆ ಮಾಡಲಿದ್ದೀರಿ. ಸ್ವಂತ ವ್ಯಾಪಾರ- ವ್ಯವಹಾರಸ್ಥರಿಗೆ ಗೊಂದಲ.

Today astrology in kannada today horoscope in kannada

ಮನೆ ಬದಲಿಸುವ ಬಗ್ಗೆ ಆಲೋಚಿಸುತ್ತಿರುವವರಿಗೆ ಹಣಕಾಸಿನ ಸಮಸ್ಯೆ ಚಿಂತೆಯಾಗಿ ಕಾಡುತ್ತದೆ. ಯಾರ ಪರಿಸ್ಥಿತಿಯನ್ನು ಕಂಡು ಹಂಗಿಸದಿರಿ. ಈ ದಿನ ಎಷ್ಟೇ ಪ್ರಯತ್ನ ಪಟ್ಟರೂ ನಿಮ್ಮಲ್ಲಿನ ಅಹಂಕಾರ ಹೆಚ್ಚಾಗುವ ಸಾಧ್ಯತೆ ಇದೆ. ಹೀಗೆ ನಡೆದುಕೊಳ್ಳುವುದರಿಂದ ಅವಮಾನದ ಪಾಲಾಗುತ್ತೀರಿ.

Today astrology in kannada today horoscope in kannada

ಈ ಹಿಂದೆ ತೆಗೆದುಕೊಂಡ ಗಟ್ಟಿ ನಿರ್ಧಾರದಿಂದ ನೀವೇ ಹಿಂದೆ ಸರಿಯಬೇಕಾಗುತ್ತದೆ. ದೈವಾನುಗ್ರಹ ನಿಮ್ಮ ಮೇಲಿರುತ್ತದೆ. ಕಾಲು ನೋವಿನ ಸಮಸ್ಯೆ ಇರುವವರಿಗೆ ಅದು ಉಲ್ಬಣವಾಗುತ್ತದೆ. ಸಂಗಾತಿ- ಮಕ್ಕಳಿಂದ ನಿಮ್ಮ ಆಲೋಚನೆಗಳಿಗೆ ಅಡೆತಡೆ ಎದುರಾಗುತ್ತದೆ. ವಾಗ್ವಾದ ಆಗಬಹುದು.

Today astrology in kannada today horoscope in kannada

ನಿಮ್ಮ ಮಾತಿನ ಮೂಲಕ ಇತರರನ್ನು ಆಕರ್ಷಿಸುತ್ತೀರಿ. ತವರು ಮನೆಯಿಂದ ಶುಭ ಸುದ್ದಿ ಕೇಳುವ ಯೋಗ ಇದೆ. ಕೃಷಿಕರಿಗೆ ಮುಖ್ಯ ಕೆಲಸಗಳಲ್ಲಿ ವಿಳಂಬ ಆಗುತ್ತಿರುವುದು ಚಿಂತೆಗೆ ಕಾರಣವಾಗುತ್ತದೆ. ಸಂಬಂಧಿಕರು ನೆರವು ಕೇಳಿಕೊಂಡು ಕರೆ ಮಾಡಬಹುದು. ಅಥವಾ ಬರಬಹುದು.

Today astrology in kannada today horoscope in kannada

ಯಾವುದೇ ವಸ್ತು ಬೇಕಾದರೂ ಕೇಳಿ ಪಡೆದುಕೊಳ್ಳಿ. ಈಗ ತೆಗೆದುಕೊಂಡು, ಆ ಮೇಲೆ ಹೇಳಿದರಾಯಿತು ಎಂಬ ಧೋರಣೆ ಬೇಡ. ನಿಮಗೆ ಅಪವಾದ ಬರುವ ಸಾಧ್ಯತೆ ಇದೆ. ಆಪ್ತರ ಜತೆಗೆ ಯಾವುದೇ ಮುಖ್ಯ ವಿಚಾರವನ್ನು ಮುಚ್ಚಿಡಬೇಡಿ. ಹಾಗೆ ಮಾಡಿದರೆ ಮನಸ್ತಾಪ ಸೃಷ್ಟಿಯಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement