ಇಂದಿನ ಭವಿಷ್ಯ ಮಾರ್ಚ್ 22, 2020

Todays horoscope in kannada Todays astrology in kannada





Today astrology in kannada today horoscope in kannada


ನಿಮ್ಮಪತ್ನಿಯ ಜೊತೆಗಿನ ಸಂಬಂಧ ಉತ್ತಮವಾಗಿರಲಿದೆ. ಕಚೇರಿಯಲ್ಲಿ ಹಿರಿಯ ಸಿಬ್ಬಂದಿ ಜೊತೆಗಿನ ವ್ಯವಹಾರ ಸುಲಭವಾಗಲಿದ್ದು, ಕೆಲಸದಲ್ಲಿದ್ದ ಅಡೆತಡೆ ದೂರಾಗಲಿದೆ. ವ್ಯಾಪರಸ್ಥರಿಗೆ ಶುಭದಿನ, ವಾಹನ ಖರೀದಿ ಬಗ್ಗೆ ಆಲೋಚನೆ ಮೂಡಲಿದೆ. ಸ್ನೇಹಿತರ ಮನೆಗೆ ಭೇಟಿ ನೀಡುವುದು, ಸ್ನೇಹಿತರ ಜೊತೆ ಇರುವ ಯೋಜನೆ ಹಾಕಿಕೊಳ್ಳುತ್ತೀರಿ.



Today astrology in kannada today horoscope in kannada

ಸರಿಯಾದ ಸಮಯಕ್ಕೆ ನಿಮ್ಮ ಕಾರ್ಯಗಳು ನಡೆಯಲಿದೆ. ನಿಮ್ಮ ಸಂತೋಷದ ಸ್ವಭಾವದಿಂದ ಮನೆಯಲ್ಲಿ ನೆಮ್ಮದಿ ಮೂಡಲಿದೆ. ರಾಜಕಾರಣಿಗಳಿಗೆ ಶುಭದಿನ. ಕಷ್ಟಕರವಾದ ಕೆಲಸಗಳು ನೆರವೇರಲಿದೆ. ನಿಮ್ಮ ವೃತ್ತಿಬದುಕು ಬದಲಾಯಿಸುವ ಬಗ್ಗೆ ಆಲೋಚಿಸಲಿದ್ದೀರಿ. ನಿಮ್ಮ ಸೋದರನ ನೆರವಿನಿಂದ ಬಾಕಿ ಉಳಿದ ಕಾರ್ಯ ಮುಕ್ತಾಯವಾಗಲಿದೆ. ಕುಟುಂಬಸ್ಥರ ಜೊತೆ ಹೆಚ್ಚು ಕಾಲ ಕಳೆಯಲು ಸಮಯ ಸಿಗಲಿದೆ.




Today astrology in kannada today horoscope in kannada

ಸಣ್ಣ ಪುಟ್ಟ ಕೌಟುಂಬಿಕ ವಿಚಾರಗಳು ನಿಮ್ಮ ಸಂತಸಕ್ಕೆ ಬ್ರೆಕ್ ಹಾಕಬಹುದು. ಹೆಚ್ಚು ಕೋಪ ಮಾಡಿಕೊಳ್ಳದೆ ಇರಲು ಯತ್ನಿಸಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ವಿದೇಶ ಯಾತ್ರೆಯ ಸುದ್ದಿ ಬಂದರೂ ವಿಳಂಬವಾಗಲಿದೆ. ಇಂಜಿನಿಯರಿಂಗ್ ವೃತ್ತಿಪರರಿಗೆ ಕಚೇರಿ ಕಾರ್ಯದಲ್ಲಿ ಪ್ರಶಂಸೆ ಸಿಗಲಿದೆ. ಉದ್ಯೋಗ ಅರಸುವವರಿಗೂ ಶುಭ ಸುದ್ದಿ ಸಿಗಲಿದೆ.




Today astrology in kannada today horoscope in kannada

ವಿದ್ಯಾರ್ಥಿಗಳಿಗೆ ಇದು ಸಕಾಲ, ಆದರೆ, ಹೆಚ್ಚು ಪರಿಶ್ರಮ ಅಗತ್ಯ. ಹೊಸ ಸ್ನೇಹಿತರನ್ನು ಮಾಡಿಕೊಳ್ಳುವ ಮೊದಲು ಹಲವು ಬಾರಿ ಯೋಚಿಸಿ. ಯೋಗಾಭ್ಯಾಸ ಮಾಡುವುದರಿಂದ ನಿಮ್ಮ ಮನಸ್ಸು, ದೇಹ ನಿಯಂತ್ರಣದಲ್ಲಿಡಬಹುದು. ಕಚೇರಿ ಕೆಲಸದಿಂದ ಬಳಲಿಕೆ ದೂರಾಗಲಿದೆ. ಸಂಗಾತಿ ಜೊತೆಗಿದ್ದರೂ ಹೆಚ್ಚು ಮಾತುಕತೆ ಆಡಲು ಸಮಯ ಸಿಗುವುದಿಲ್ಲ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ.






Today astrology in kannada today horoscope in kannada

ಹೊಸ ಯೋಜನೆಗಳನ್ನು ಹಾಕಿಕೊಳ್ಳುವ ಸಮಯ ಇದೀಗ ಬಂದಿದೆ. ಸಣ್ಣ ಉದ್ಯಮ ಸ್ಥಾಪಿಸುವ ಬಗ್ಗೆ ಯೋಚಿಸಲಿದ್ದೀರಿ, ನಿಮ್ಮ ಉತ್ಸಾಹ ಇಮ್ಮಡಿಯಾಗಿರಲಿದೆ. ಹಳೆ ಸಾಲ ವಾಪಸ್ ಸಿಗುವ ಕಾಲ ಬಂದಿದೆ. ಕಚೇರಿ ಕೆಲಸ ಹೆಚ್ಚಾಗಿದ್ದರೂ ಒತ್ತಡದಲ್ಲೇ ಖುಷಿ ಕಾಣುತ್ತೀರಿ. ಹೊಸ ಅವಕಾಶದತ್ತ, ಹೊಸ ಓದಿನತ್ತ ಮನಸ್ಸು ಆಲೋಚಿಸಲಿದೆ.





Today astrology in kannada today horoscope in kannada

ವೃತ್ತಿ ಬದುಕಿನಲ್ಲಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಹಿರಿಯರ ಮಾರ್ಗದರ್ಶನ ಅಗತ್ಯವಾಗಿ ಪಡೆಯಿರಿ. ನಿಮ್ಮೆಲ್ಲಾ ಸಂಕಷ್ಟಗಳು ದೂರವಾಗುವ ಕಾಲ ಬಂದಿದೆ. ಹಳೆ ಗೆಳೆಯರ ಮಾತು ತೆಗೆದು ಹಾಕಬೇಡಿ. ಸೋದರ-ಸೋದರಿ ಜೊತೆಗೆ ಉತ್ತಮ ಒಡನಾಟ ಮೂಡುವ ಕಾಲ ಇದಾಗಿದೆ. ವಿದ್ಯಾರ್ಥಿಗಳಿಗೆ ಸಾಧಾರಣ ಸಮಯ.






Today astrology in kannada today horoscope in kannada

ಧನಾತ್ಮಕ ಸಲಹೆಗಳನ್ನು ಪಾಲಿಸಿ ನಿಮ್ಮ ವ್ಯಾಪಾರ ವೃದ್ಧಿಸಿಕೊಳ್ಳುತ್ತೀರಿ. ಕುಟುಂಬದ ಸಮಸ್ಯೆಗೆ ಸಂಗಾತಿ ನೀಡುವ ಸಲಹೆಯನ್ನು ತಪ್ಪದೇ ಅನುಸರಿಸಿ. ಹಳೆಯ ಗೆಳೆಯನ ಭೇಟಿಯಿಂದ ಎಲ್ಲಾ ಒಳ್ಳೆಯದಾಗಲಿದೆ. ಅವಿವಾಹಿತರಿಗೆ ಮದುವೆ ಯೋಗ ಕೂಡಿ ಬರಲಿದೆ. ಆಸ್ತಿ ಉಳಿಸಿಕೊಳ್ಳುವುದರ ಬಗ್ಗೆ ಮಾತುಕತೆ ಫಲಪ್ರದವಾಗಲಿದೆ.




Today astrology in kannada today horoscope in kannada

ಆರ್ಥಿಕ ಸಮಸ್ಯೆ ಕೊಂಚ ದೂರಾಗಲಿದ್ದು,ಕಚೇರಿಯಲ್ಲಿ ಉತ್ತಮ ಪ್ರಶಂಸೆ ಸಿಗಲಿದೆ. ವಾಹನ ಚಾಲಕರು ಈ ದಿನ ಹುಷಾರಾಗಿ ವಾಹನ ಚಲಿಸಿ. ವೃತ್ತಿಪರರಿಗೆ ಹೊಸ ಅವಕಾಶ ಒದಗಿ ಬರಲಿದೆ. ವ್ಯಾಪಾರಿಗಳಿಗೆ ಶುಭ ದಿನವಾಗಿದೆ. ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯಲಿದ್ದೀರಿ.






Today astrology in kannada today horoscope in kannada

ಪ್ರಗತಿದಾಯಕ ಚಿಂತನೆಗಳಿಂದ ವ್ಯವಹಾರ ಮತ್ತಷ್ಟು ವೃದ್ಧಿಯಾಗಲಿದೆ. ಕಚೇರಿ ಕೆಲಸದ ಮೇಲೆ ಪ್ರಯಾಣ ಸಾಧ್ಯತೆಯಿದೆ. ಗೃಹಕೃತ್ಯಗಳಲ್ಲಿ ಸಮಯ ವ್ಯಯಿಸುತ್ತೀರಿ. ರಾಜಕಾರಣಿಗಳಿಗೆ ಕೆಲಸ ಹೆಚ್ಚಾಗಲಿದೆ. ನಿಮ್ಮ ಸಂಗಾತಿಯ ನೆರವಿನಿಂದ ಕೆಲಸ ಸುಲಭವಾಗಲಿದೆ. ಸಾಮಾಜಿಕ ಕಾರ್ಯಕರ್ತರಿಗೆ ಉತ್ತಮ ಕಾಲ.







Today astrology in kannada today horoscope in kannada

ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲಿದೆ. ಹಣಕಾಸಿನ ವಿಷಯದಲ್ಲಿ ಸ್ವಲ್ಪ ಅಶಾಂತಿ ಮೂಡಬಹುದು. ಗೆಳೆಯರ ಜೊತೆ ಕಾಲ ಕಳೆಯಲು ಆಗದೆ ದುಃಖ ಪಡುತ್ತೀರಿ. ದೇವರು ,ಆಧಾತ್ಮದ ಬಗ್ಗೆ ಹೆಚ್ಚಿನ ಒಲವು ಮೂಡಲಿದೆ. ವಿದ್ಯಾರ್ಥಿಗಳಿಗೆ ಹಿರಿಯ ಮಾತು ಕೇಳುವುದು ಅನಿವಾರ್ಯವಾಗಲಿದೆ.



Today astrology in kannada today horoscope in kannada

ನಿಮ್ಮ ಕಚೇರಿ ಕಾರ್ಯಗಳಲ್ಲಿ ಪ್ರಗತಿದಾಯಕ ಬೆಳವಣಿಗೆ ಕಂಡು ಕೆಲವರಿಗೆ ಅಸೂಯೆ ಮೂಡಲಿದೆ. ಅರೋಗ್ಯ ಪರಿಸ್ಥಿತಿ ಸುಧಾರಣೆಯಾಗಲಿದೆ. ಉದ್ಯಮಿಗಳಿಗೆ ಶುಭ ದಿನ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದವರ ಮೇಲಿನ ಅಪವಾದ ದೂರಾಗಲಿದೆ. ಮನೆಯಲ್ಲಿ ಮೂಡಿದ್ದ ಅಶಾಂತಿ ದೂರಾಗಲಿದ್ದು ,ಎಲ್ಲವೂ ಸರಿಯಾಗಲಿದೆ.






Today astrology in kannada today horoscope in kannada

ಮನೆಯಲ್ಲಿ ಹೆಚ್ಚು ಕಾಲ ಕಳೆಯಲಿದ್ದೀರಿ. ಸಾಲ ನೀಡುವುದನ್ನು ಸದ್ಯಕ್ಕೆ ನಿಲ್ಲಿಸಿ, ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ಗಮನವಿರಲಿ.ಉದ್ಯೋಗಸ್ಥರಿಗೆ ಹೆಚ್ಚಿನ ಕೆಲಸ ಕಾರ್ಯ ಒದಗಿ ಬರಲಿದ್ದು, ಸ್ನೇಹಿತರ ಅಗತ್ಯ ನೆರವಿನಿಂದ ಎಲ್ಲರೂ ಉತ್ತಮವಾಗಿ ಆಗಲಿದೆ. ಪತ್ನಿಯ ಕುಟುಂಬದವರಿಗೆ ನೆರವಾಗುವ ಮೂಲಕ ಪ್ರಶಂಸೆ ಪಡೆಯುತ್ತೀರಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement