ಮಧುಮೇಹ, ರಕ್ತದೊತ್ತಡದಂಥ ಆರೋಗ್ಯ ಸಮಸ್ಯೆ ಇರುವವರು ಬಹಳ ಎಚ್ಚರಿಕೆ ಇರಬೇಕು. ಯಾವುದೇ ಸಣ್ಣಪುಟ್ಟ ಆರೋಗ್ಯ ಏರುಪೇರಾದರೂ ಕೂಡಲೇ ವೈದ್ಯರ ಬಳಿ ತೋರಿಸಿಕೊಳ್ಳಿ. ಹಣಕಾಸು ಸಮಸ್ಯೆ ಇರುವವರು ಅದರ ನಿವಾರಣೆಗಾಗಿ ಶಿರಡಿ ಸಾಯಿ ಬಾಬ ದೇವಾಲಯಕ್ಕೆ ಭೇಟಿ ನೀಡಿ, ದರ್ಶನ ಪಡೆಯಿರಿ.
ಮೃದುವಾದ ಆಹಾರ ಪದಾರ್ಥಗಳನ್ನು ಹಾಗೂ ನಾರಿನ ಅಂಶ ಹೆಚ್ಚಿರುವಂಥದ್ದನ್ನು ಸೇವನೆ ಮಾಡಿ. ಉದ್ಯೋಗ ಸ್ಥಳದಲ್ಲಿ ಒತ್ತಡದ ಸನ್ನಿವೇಶವನ್ನು ನಿವಾರಣೆ ಮಾಡಲಿದ್ದೀರಿ. ದೂರದ ಊರಿನಿಂದ ಶುಭ ವಾರ್ತೆ ನಿರೀಕ್ಷೆ ಮಾಡಬಹುದು. ಸ್ನೇಹಿತರ ಆಗಮನದಿಂದ ಮನಸಿಗೆ ಸಂತೋಷ ಇದೆ.
ವಾಹನ ಸೌಖ್ಯ ಇದೆ. ಹೊಸ ವಾಹನ ಖರೀದಿ ವಿಚಾರವಾಗಿ ಹಣಕಾಸು ಹೊಂದಾಣಿಕೆ ಆಗಲಿದೆ. ಬ್ಯಾಂಕ್ ವ್ಯವಹಾರಗಳು ಸಹ ಸುಸೂತ್ರವಾಗಿ ಆಗುವ ಸಾಧ್ಯತೆ ಇದೆ. ವ್ಯಾಪಾರಿಗಳು ಹಾಗೂ ಉದ್ಯಮಿಗಳಿಗೆ ಒತ್ತಡ ಕಡಿಮೆ ಆಗಲಿದೆ. ಬ್ಯಾಂಕ್ ಉದ್ಯೋಗಿಗಳಿಗೆ ಹೆಚ್ಚಿನ ಜವಾಬ್ದಾರಿ ಹೆಗಲೇರುತ್ತದೆ.
ದೀರ್ಘ ಕಾಲದ ಹೂಡಿಕೆಗಳಿಗೆ ಉತ್ತಮ ರಿಟರ್ನ್ಸ್ ಕಾಣಲಿದ್ದೀರಿ. ಅಗತ್ಯ ಕಾರಣಗಳಿಗೆ ಹೂಡಿಕೆಯನ್ನು ವಾಪಸ್ ಪಡೆದುಕೊಳ್ಳಬಹುದು. ಸ್ವತಂತ್ರ ಆಲೋಚನೆ, ವಿಚಾರಗಳ ಮೂಲಕ ಮೇಲಧಿಕಾರಿಗಳ ಗಮನವನ್ನು ಸೆಳೆಯಲಿದ್ದೀರಿ. ಮನರಂಜನೆ ಸಲುವಾಗಿ ಖರ್ಚು ಮಾಡಲಿದ್ದೀರಿ.
ಅಧ್ಯಾತ್ಮ ಚಿಂತನೆಯತ್ತ ಮನಸ್ಸು ವಾಲಲಿದೆ. ಹಿರಿಯರಿಗೆ ಮಂಡಿ ನೋವು, ಗ್ಯಾಸ್ಟ್ರಿಕ್ ನಂಥ ಸಮಸ್ಯೆಗಳು ಕಾಡಲಿವೆ. ಕೃಷಿಕರಿಗೆ ಅಲ್ಪ ಪ್ರಮಾಣದ ಲಾಭ ಇದೆ. ಮುಖ್ಯವಾದ ರಹಸ್ಯಗಳನ್ನು ಇತರರು ನಿಮ್ಮ ಬಳಿ ಹಂಚಿಕೊಳ್ಳಲಿದ್ದಾರೆ. ನಿಮ್ಮ ನಂಬಿಕೆ, ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳುವುದು ಸವಾಲಾಗಿರುತ್ತದೆ.
ಬೆಳ್ಳಿ- ಚಿನ್ನದ ಖರೀದಿ ಮಾಡುವ ಯೋಗ ನಿಮ್ಮ ಪಾಲಿಗಿದೆ. ಪ್ರಮಾಣ ಅಷ್ಟು- ಇಷ್ಟು ಎಂದಾಗಬೇಕಿಲ್ಲ. ಆದರೆ ಸಾಲ ಮಾಡುವುದಕ್ಕೆ ಹೋಗಬೇಡಿ. ಏಕೆಂದರೆ ಈ ಸಂದರ್ಭದಲ್ಲಿ ನೀವು ಮಾಡಿದ್ದ ಸಾಲ ಪೂರ್ಣ ಪ್ರಮಾಣದಲ್ಲಿ ಉದ್ದೇಶಿತ ಕೆಲಸಕ್ಕೇ ಬಳಕೆಯಾಗುವ ಖಾತ್ರಿ ಇಲ್ಲ.
ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದವರಿಗೆ ಗೊಂದಲದ ಸನ್ನಿವೇಶ ಸೃಷ್ಟಿಯಾಗುತ್ತದೆ. ಸಾಲಗಾರರಿಂದ ಒತ್ತಡ ಜಾಸ್ತಿ ಆಗಲಿದೆ. ವಿದೇಶಿ ವ್ಯವಹಾರಗಳು ಅಂದುಕೊಂಡಂಥ ದಿಕ್ಕಿನಲ್ಲಿ ಸಾಗುವುದಿಲ್ಲ. ಈ ಕಾರಣಕ್ಕೆ ಬೇಸರ ಉಂಟಾಗಲಿದೆ. ತಲೆ ನೋವು- ಗಂಟಲು ನೋವು ಕಾಡಬಹುದು. ಆಹಾರ- ನೀರು ಸೇವನೆಯಲ್ಲಿ ಎಚ್ಚರಿಕೆ ಇರಲಿ.
ಭೂಮಿ- ಆಸ್ತಿ ಖರೀದಿ, ಮಾರಾಟ ವ್ಯವಹಾರಗಳು ನೀವು ಅಂದುಕೊಂಡ ರೀತಿಯಲ್ಲಿ ನಡೆಯುವುದಿಲ್ಲ. ಸೋದರ ಸಂಬಂಧಿಗಳಿಗೆ ಹಣಕಾಸಿನ ನೆರವು ನೀಡಲಿದ್ದೀರಿ. ಸಂಗಾತಿ- ಮಕ್ಕಳ ಜತೆಗೆ ಹೆಚ್ಚಿನ ಸಮಯ ಕಳೆಯಲಿದ್ದೀರಿ. ಸ್ವಾದಿಷ್ಟವಾದ ಊಟ- ತಿಂಡಿ ಸವಿಯುವ ಯೋಗ ನಿಮಗಿದೆ.
ಇತರರು ನಿಮ್ಮನ್ನು ಟೀಕಿಸಿದರೆ ಅದಕ್ಕೆ ಕಾರಣ ಕಂಡುಕೊಳ್ಳುವುದಕ್ಕೆ ಪ್ರಯತ್ನಿಸಿ. ಅದನ್ನೇ ದ್ವೇಷ ಸಾಧಿಸಲು ಬಳಸಬೇಡಿ. ಸಾಧ್ಯವಾದಷ್ಟೂ ಮೌನವಾಗಿರಿ. ಅನಗತ್ಯ ವಾದ- ವಿವಾದಗಳಿಂದ ಸಂಬಂಧಗಳು ಹಾಳಾಗಬಹುದು. ಆಪತ್ಕಾಲಕ್ಕೆ ಎಂದು ಎತ್ತಿಟ್ಟಿದ್ದ ದುಡ್ಡನ್ನು ಬಳಸಬೇಕಾದ ಸಂದರ್ಭ ಎದುರಾಗಬಹುದು.
ಮುಖ್ಯವಾದ ವಿಚಾರದಲ್ಲಿ ನಿರಾಳರಾಗಲಿದ್ದೀರಿ. ನಿಮ್ಮ ಮೇಲೆ ವಹಿಸಿದ್ದ ಜವಾಬ್ದಾರಿಯನ್ನು ನಯವಾಗಿ ಬೇರೆಯವರಿಗೆ ವರ್ಗಾಯಿಸುವ ಉಪಾಯ ಮಾಡುತ್ತೀರಿ. ಮೇಲಧಿಕಾರಿಗಳ ಜತೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ವಿಚಾರದಲ್ಲಿ ಮುಚ್ಚುಮರೆ ಮಾಡಬೇಡಿ.
ಕೃಷಿ ಭೂಮಿ ಅಭಿವೃದ್ಧಿಗಾಗಿ ಸಾಲ ಪಡೆಯುವ ಸಾಧ್ಯತೆ ಇದೆ. ಮಕ್ಕಳ ಅಗತ್ಯಕ್ಕಾಗಿ ಉಳಿತಾಯದ ಹಣವನ್ನು ತೆಗೆದುಕೊಡಬೇಕಾಗುತ್ತದೆ. ಕೋರ್ಟ್ ವ್ಯಾಜ್ಯಗಳು ಇದ್ದಲ್ಲಿ ಮುಂದಕ್ಕೆ ಹೋಗುತ್ತವೆ. ಹಿತಶತ್ರುಗಳ ಚಾಡಿ ಮಾತುಗಳಿಂದ ಆಪ್ತರಿಗೆ ನಿಮ್ಮ ಬಗ್ಗೆ ಅಸಮಾಧಾನ ಮೂಡಲಿದೆ.
ದೃಷ್ಟಿ ದೋಷ ನಿಮ್ಮನ್ನು ಕಾಡಲಿದೆ. ಕೆಲವು ಮುಖ್ಯವಸ್ತುಗಳ ಕಳುವಾಗಬಹುದು ಅಥವಾ ಕಳೆದು ಹೋಗಬಹುದು, ಎಚ್ಚರಿಕೆಯಿಂದ ಇರಿ. ನೀವಾಗಿಯೇ ಯಾವುದೇ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಡಿ. ಮುಂಜಾಗ್ರತೆ ವಹಿಸಿದಲ್ಲಿ ಈ ದಿನ ಹಲವು ಅಪಾಯಗಳಿಂದ ನೀವು ತಪ್ಪಿಸಿಕೊಳ್ಳಬಹುದು.












