ಇಂದಿನ ಭವಿಷ್ಯ ಮಾರ್ಚ್ 14th 2020

Today astrology in kannada today horoscope in kannada

ಲಾಭ- ನಷ್ಟದ ಲೆಕ್ಕ ಹಾಕಿಕೊಳ್ಳದೆ ಉತ್ತಮ ಉದ್ದೇಶದಿಂದ ಕೆಲವು ಕೆಲಸಗಳನ್ನು ಮಾಡಲಿದ್ದೀರಿ. ವಾಹನ ಖರೀದಿ- ಮಾರಾಟ ಮಾಡುವವರಿಗೆ ಲಾಭದ ಪ್ರಮಾಣ ಹೆಚ್ಚಾಗಲಿದೆ. ಮನೆಯಲ್ಲಿ ದೇವತಾರಾಧನೆ ಆಯೋಜಿಸುವ ಬಗ್ಗೆ ಆಲೋಚನೆ ಮಾಡುತ್ತೀರಿ. ಖರ್ಚಿನ ಪ್ರಮಾಣ ಹೆಚ್ಚಾಗಲಿದೆ.

Today astrology in kannada today horoscope in kannada

ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡವರಿಗೆ ಹಣಕಾಸಿನ ವಿಚಾರದಲ್ಲಿ ಹಿನ್ನಡೆ ಆಗಲಿದೆ. ಡೇರಿ ವ್ಯವಹಾರ ಮಾಡುತ್ತಿರುವವರಿಗೆ ವಿಸ್ತರಣೆಗೆ ಅವಕಾಶಗಳಿವೆ. ಆದಾಯದ ಮೂಲದಲ್ಲಿ ಹೆಚ್ಚಳ ಆಗಲಿದ್ದು, ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ಓಡಾಟ ನಡೆಸಲಿದ್ದೀರಿ.

Today astrology in kannada today horoscope in kannada

ಬ್ಯೂಟಿ ಪಾರ್ಲರ್ ನಡೆಸುವವರಿಗೆ ಸಾಲ ಬಾಧೆ ಕಾಡಲಿದೆ. ಪತ್ರಕರ್ತರಿಗೆ, ಕಲಾವಿದರಿಗೆ ಸಮಾಜದಲ್ಲಿ ಸನ್ಮಾನ ದೊರೆಯಲಿದೆ. ಹಿರಿಯ ಸಹೋದ್ಯೋಗಿಗಳಿಂದ ಅಮೂಲ್ಯವಾದ ಸಲಹೆ ದೊರೆಯಲಿದೆ. ಈ ಹಿಂದೆ ಹಣಕಾಸು ಹೂಡಿಕೆ ಮಾಡಿದ್ದಲ್ಲಿ ನಷ್ಟ ಅನುಭವಕ್ಕೆ ಬರಲಿದೆ.

Today astrology in kannada today horoscope in kannada

ವೃತ್ತಿಪರರಿಗೆ ಬಹಳ ಗೊಂದಲ ಏರ್ಪಡಲಿದೆ. ಭವಿಷ್ಯದ ಯೋಜನೆಗಳ ಅನುಷ್ಠಾನವನ್ನು ಕೆಲ ಸಮಯ ಮುಂದಕ್ಕೆ ಹಾಕಿಕೊಳ್ಳಬೇಕಾಗುತ್ತದೆ. ದೇವತಾರಾಧನೆಗೆ ಆಹ್ವಾನ ಬರಲಿದೆ. ಬಂಧು- ಮಿತ್ರರನ್ನು ಭೇಟಿಯಾಗಿ, ತೀರ್ಥಕ್ಷೇತ್ರ ದರ್ಶನ ಮಾಡುವ ಬಗ್ಗೆ ಚರ್ಚೆ ನಡೆಸಲಿದ್ದೀರಿ.

Today astrology in kannada today horoscope in kannada

ಆಪ್ತರ ಜತೆಗೆ ಭಿನ್ನಾಭಿಪ್ರಾಯ ಸೃಷ್ಟಿಯಾಗಬಹುದು. ಹಣಕಾಸು ವಿಚಾರದಲ್ಲಿ ಅನುಮಾನ ಮೂಡುವಂಥ ಸನ್ನಿವೇಶ ಎದುರಾಗುತ್ತದೆ. ಉಳಿತಾಯ ಯೋಜನೆಗಳನ್ನು ವಿಚಾರಿಸಿ, ಹೂಡಿಕೆ ಬಗ್ಗೆ ಗಟ್ಟಿ ತೀರ್ಮಾನ ಮಾಡಲಿದ್ದೀರಿ. ವಾಹನ ಚಾಲನೆ ವೇಳೆ ಎಚ್ಚರಿಕೆಯಿಂದ ಇರಬೇಕು.

Today astrology in kannada today horoscope in kannada

ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಅದಕ್ಕಾಗಿ ಖರ್ಚು ಮಾಡಬೇಕಾಗುತ್ತದೆ. ಉಪನ್ಯಾಸಕರು, ಶಿಕ್ಷಕರು, ವೃತ್ತಿಪರರಿಗೆ ತಮ್ಮ ಮಾತಿನ ಮೂಲಕ ಲಾಭ ಪಡೆಯುವ ಅವಕಾಶಗಳು ದೊರೆಯಲಿವೆ. ಕ್ರೆಡಿಟ್ ಕಾರ್ಡ್ ಪಾವತಿ ಅಂತಿಮ ದಿನಾಂಕ ಯಾವುದು ಎಂಬ ಬಗ್ಗೆ ಗಮನ ಇರಲಿ.

Today astrology in kannada today horoscope in kannada

ಗೃಹ ಬಳಕೆ ವಸ್ತು ಖರೀದಿಗಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಕೃಷಿಕರಿಗೆ ಸಾಲದ ಬಾಕಿ ಬರಬೇಕಿದ್ದಲ್ಲಿ ಆ ಬಗ್ಗೆ ಮಾಹಿತಿ ದೊರೆಯಲಿದೆ. ಕ್ರಿಯೇಟಿವ್ ರಂಗದಲ್ಲಿ ಇರುವವರಿಗೆ ಹೊಸ ಜವಾಬ್ದಾರಿ ವಹಿಸಿಕೊಳ್ಳಬೇಕಾಗುತ್ತದೆ. ಆಹಾರ- ನೀರು ಸೇವನೆ ಬಗ್ಗೆ ಎಚ್ಚರಿಕೆಯಿಂದ ಇರಬೇಕು.

Today astrology in kannada today horoscope in kannada

ರಕ್ತದೊತ್ತಡ ಸಮಸ್ಯೆ ಇರುವವರು ಕಡ್ಡಾಯವಾಗಿ ಔಷಧೋಪಚಾರದ ಕಡೆಗೆ ಗಮನ ನೀಡಿ. ವೈದ್ಯರ ಬದಲಾವಣೆ ಅಥವಾ ಆಹಾರ ಪಥ್ಯದಲ್ಲಿ ಬದಲಾವಣೆ ಮಾಡಿಕೊಳ್ಳುವ ಮುನ್ನ ಎಚ್ಚರಿಕೆಯಿಂದ ಇರಬೇಕು. ತಂದೆ- ತಾಯಿಯ ಪ್ರಯಾಣ ಅಥವಾ ಆರೋಗ್ಯ ತಪಾಸಣೆಗೆ ಹಣ ಖರ್ಚು ಮಾಡಲಿದ್ದೀರಿ.

Today astrology in kannada today horoscope in kannada

ಸಂಗಾತಿಯ ಜವಾಬ್ದಾರಿಗಳ ಪೈಕಿ ಕೆಲವನ್ನು ನೀವು ಹಂಚಿಕೊಳ್ಳಲಿದ್ದೀರಿ. ಸ್ವಂತ ವ್ಯಾಪಾರ- ವ್ಯವಹಾರ ನಡೆಸುತ್ತಿರುವವರಿಗೆ ಅಲ್ಪ ಪ್ರಗತಿ ಇದೆ. ರುಚಿಕಟ್ಟಾದ ಊಟ- ತಿಂಡಿ ಸವಿಯುವ ಯೋಗ ಇದೆ. ಅನಿರೀಕ್ಷಿತವಾಗಿ ಧನಾಗಮದ ಯೋಗ ಇದ್ದು, ಅದು ಹಾಗೇ ಖರ್ಚು ಕೂಡ ಆಗಬಹುದು.

Today astrology in kannada today horoscope in kannada

ಮನರಂಜನೆಗಾಗಿ ಹಣ ಖರ್ಚು ಮಾಡಲಿದ್ದೀರಿ. ನೆಂಟರು ಅಥವಾ ಸ್ನೇಹಿತರ ಮನೆಗೆ ತೆರಳುವ ಸಾಧ್ಯತೆ ಇದೆ. ವಾಹನ ಸೌಖ್ಯ ಇದ್ದು, ಕಿರು ಪ್ರವಾಸ ಕೂಡ ತೆರಳುವ ಯೋಗ ಇದೆ. ಈ ಹಿಂದೆ ನೀವು ನೀಡಿದ ಮಾತಿನಂತೆ ನೆರವು ನೀಡಬೇಕಾಗುತ್ತದೆ. ಅದಕ್ಕಾಗಿ ಸಾಲ ಮಾಡಬೇಕಾಗಬಹುದು.

Today astrology in kannada today horoscope in kannada

ಹೆಣ್ಣುಮಕ್ಕಳು ತವರುಮನೆಗೆ ಹೋಗುವ ಯೋಗ ಇದೆ. ಸೋದರ ಅಥವಾ ಸೋದರಿಯ ಆಹ್ವಾನದ ಮೇರೆಗೆ ನೀವು ತೆರಳಬಹುದು. ವೃತ್ತಿಪ್ರರರಿಗೆ ಅಲ್ಪ ಪ್ರಮಾಣದಲ್ಲಿ ನಷ್ಟ ಅನುಭವಿಸುವ ಯೋಗ ಇದೆ. ಸ್ವಂತ ವ್ಯಾಪಾರ- ವ್ಯವಹಾರ ನಡೆಸುತ್ತಿರುವವರು ಹೊಸ ಕಚೇರಿಗೆ ಬದಲಾವಣೆ ಮಾಡಲು ನಿರ್ಧಾರ ಕೈಗೊಳ್ಳುತ್ತೀರಿ.

Today astrology in kannada today horoscope in kannada

ಮನೆಯಲ್ಲಿ ಸಂಭ್ರಮದ ವಾತಾವರಣ ಇರುತ್ತದೆ. ಪ್ರೇಮಿಗಳಿಗೆ ಜತೆಯಾಗಿ ಸಮಯ ಕಳೆಯಲು ಅವಕಾಶ ದೊರೆಯುತ್ತದೆ. ಮಕ್ಕಳ ಮದುವೆಗೆ ಸಂಬಂಧ ಹುಡುಕುತ್ತಿದ್ದಲ್ಲಿ ಸೂಕ್ತ ವಧು ಅಥವಾ ವರ ದೊರೆಯಲಿದ್ದಾರೆ. ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆಗಳಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement