ಪುತ್ತೂರು, ಮಾರ್ಚ್ 13: ಪುತ್ತೂರು ಗ್ರಾಮೀಣ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ನೇತೃತ್ವದ ಕ್ರೈಮ್ ಡಿಟೆಕ್ಟಿವ್ ಸ್ಕ್ವಾಡ್ ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣೆ ಎಎಸ್‌ಐ ನೇತೃತ್ವದ ತಂಡ ಕುಖ್ಯಾತ ಕಳ್ಳ ಚಿಕ್ಕಮಂಗಳೂರಿನ ಶಂಕರಪುರ ಮೂಲದ ಶೌಕತ್ ಅಲಿ ಅಲಿಯಾಸ್ ಶೌಕತ್ (65) ಎಂಬಾತನನ್ನು ಬಂಧಿಸಿದ್ದಾರೆ.
ಯಾರು ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಮನೆಯ ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿ ಮನೆಯಲ್ಲಿರುವ ಎಲ್ಲಾ ಹಣ ಒಡವೆಗಳನ್ನು ದೋಚಿ ಪರಾರಿಯಾಗುತ್ತಿದ್ದ. ಈತ ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆದರ್ಶ ನಗರ, ನೆಕ್ಕಿಲಾಡಿ, ಕಲ್ಲೇರಿ, ಕೆಂಪಿ ಮಜಲು ಮತ್ತು ಆರ್‌ಟಿಒ ಬಳಿಯ ಅಜಯ ನಗರ, ಮುರಾ, ಬನ್ನುರು ಹರಡಿ, ಕೋಡಿಂಬಾಡಿ, ಜೈನರಗುರಿ, ಸಲ್ಮಾರಾ, ಮೊದಲಾದ ಕಡೆಗಳಲ್ಲಿ ತನ್ನ ಕಳ್ಳತನದ ಕರಾಮತ್ತನ್ನು ತೋರಿಸಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಸುಮಾರು 13 ಕಳ್ಳತನ ಪ್ರಕರಣಗಳಲ್ಲಿ ಆರೋಪಿ ಭಾಗಿಯಾಗಿದ್ದಾನೆ. 18 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯನ್ನು ಪೊಲೀಸರು ಶೌಕತ್‌ನಿಂದ ವಶಪಡಿಸಿಕೊಂಡಿದ್ದಾರೆ.
Tags:
ಮಂಗಳೂರು ಜಿಲ್ಲಾ ಸುದ್ದಿಗಳು