ಇಂದಿನ ಭವಿಷ್ಯ ಮಾರ್ಚ್ 9th 2020

Today astrology in kannada today horoscope in kannada

ಬಹಳ ಒತ್ತಡವನ್ನು ಎದುರಿಸುತ್ತೀರಿ. ಮುಖ್ಯವಾಗಿ ಹಣಕಾಸು ವಿಚಾರವಾಗಿ ದಿಕ್ಕು ತೋಚದ ಪರಿಸ್ಥಿತಿ ಎದುರಾಗಬಹುದು. ಇದೇ ವೇಳೆ ಆರೋಗ್ಯದಲ್ಲೂ ಸ್ವಲ್ಪ ಏರಿಳಿತ ಕಾಣಿಸಿಕೊಳ್ಳಬಹುದು. ಸಾಧ್ಯವಾದಷ್ಟೂ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಿ. ಒತ್ತಡದ ಕಾರಣಕ್ಕೆ ಇತರರ ಮೇಲೆ ಸಿಟ್ಟಾಗಬೇಡಿ.

Today astrology in kannada today horoscope in kannada

ದೈಹಿಕವಾದ ಆಯಾಸ ಕಾಡುತ್ತದೆ. ಕೆಲಸ- ಕಾರ್ಯದಲ್ಲಿ ಏಕಾಗ್ರತೆ ನೀಡುವುದು ಕಷ್ಟವಾಗುತ್ತದೆ. ಬೇರೆಯವರ ಸಲುವಾಗಿ ಹೆಚ್ಚಿನ ಸಮಯ, ನಿಮ್ಮ ಹಣ ಮೀಸಲಿಡಬೇಕಾದ ಸನ್ನಿವೇಶ ಎದುರಾಗಬಹುದು. ಆದ್ದರಿಂದ ಯಾವುದೇ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮುನ್ನ ಸಾಧಕ- ಬಾಧಕಗಳನ್ನು ಯೋಚಿಸಿ.

Today astrology in kannada today horoscope in kannada

ನಿಮಗೆ ಬರಬೇಕಾದ ಹಣವಿದ್ದಲ್ಲಿ ಹೇಗಾದರೂ ವಸೂಲಿ ಮಾಡಬೇಕು ಎಂದು ಯೋಜನೆ ರೂಪಿಸಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ಸ್ವಲ್ಪ ಮಟ್ಟಿಗೆ ಕಿರಿಕಿರಿ ಆಗಬಹುದು. ಕರಿದ ಪದಾರ್ಥ ಮತ್ತು ಮಸಾಲೆಯುಕ್ತ ಆಹಾರ ಪದಾರ್ಥಗಳಿಂದ ಸಾಧ್ಯವಾದಷ್ಟೂ ದೂರವಿರಿ. ಕಲಾವಿದರು, ಬರಹಗಾರರಿಗೆ ಏಳ್ಗೆಯ ದಿನ.

Today astrology in kannada today horoscope in kannada

ಉದ್ಯೋಗ ಬದಲಾವಣೆ ಬಗ್ಗೆ ತೀರಾ ಗಂಭೀರವಾಗಿ ಆಲೋಚನೆ ಮಾಡಲಿದ್ದೀರಿ. ಎಲ್ಲೆಲ್ಲಿ ಅವಕಾಶಗಳಿವೆ ಎಂಬುದೊಂದು ಅಂದಾಜು ಮಾಡಿಕೊಳ್ಳಲಿದ್ದೀರಿ. ಎಲ್ಲರ ಜತೆಗೂ ಉತ್ತಮ ಸಂಬಂಧ ಕಾಯ್ದುಕೊಳ್ಳಲಿದ್ದೀರಿ. ಹೆಚ್ಚಿನ ಶ್ರಮವಿಲ್ಲದೆ ಒಳ್ಳೆ ಹೆಸರು ಪಡೆಯುವ ಅವಕಾಶಗಳಿವೆ.

Today astrology in kannada today horoscope in kannada

ಆರಾಮದಾಯಕವಾಗಿ ದಿನ ಕಳೆಯುವ ಅವಕಾಶ ಇದೆ. ಅಂದುಕೊಂಡಂತೆ ಘಟನೆಗಳು ನಡೆಯುವುದರಿಂದ ಮನಸ್ಸು ಸಂತೋಷವಾಗಿರುತ್ತದೆ. ದೀರ್ಘ ಕಾಲದ ಗೆಳೆಯರು, ಹತ್ತಿರದ ಸಂಬಂಧಿಗಳು, ಆಪ್ತರ ಜತೆಗೆ ಉತ್ತಮವಾದ ಸಮಯ ಕಳೆಯುವ ಯೋಗ ಇದೆ. ರುಚಿಕಟ್ಟಾದ ಊಟ ಸವಿಯುತ್ತೀರಿ.

Today astrology in kannada today horoscope in kannada

ದೇವತಾರಾಧನೆ, ಅಧ್ಯಾತ್ಮ ಚಿಂತನೆ, ದಾನ- ಧರ್ಮಾದಿ ಕಾರ್ಯಗಳ ಬಗ್ಗೆಯೇ ಹೆಚ್ಚಿನ ಸಮಯ ಮೀಸಲಿಡುತ್ತೀರಿ. ಮನೆಯಲ್ಲಿ ನಡೆಯಬೇಕಿರುವ ಶುಭ ಕಾರ್ಯವೊಂದರ ಸಿದ್ಧತೆಗೆ ಹೆಚ್ಚಿನ ಸಮಯ ಮೀಸಲಿಡಲಿದ್ದೀರಿ. ಆದರೆ ಯಾರದೋ ಮುಲಾಜಿಗೆ ಬಿದ್ದು, ಅನಗತ್ಯವಾಗಿ ಹಣ ಕಳೆದುಕೊಳ್ಳುವ ಯೋಗ ಇದೆ.

Today astrology in kannada today horoscope in kannada

ಒಂಟಿತನ ನಿಮ್ಮನ್ನು ಕಾಡಲಿದೆ. ಹಾಗಂತ ಈ ದಿನ ನೀವೊಬ್ಬರೇ ಇರುತ್ತೀರಿ ಎಂದಲ್ಲ. ಅದೆಷ್ಟು ಮಂದಿಯ ಮಧ್ಯೆ ಇದ್ದರೂ ಮಾನಸಿಕ ಕಳವಳ ಕಾಡುವುದರಿಂದ ಇಂಥದ್ದೊಂದು ಭಾವ ಮೂಡುತ್ತದೆ. ದೀರ್ಘಾವಧಿ ಯೋಜನೆಯನ್ನು ಗುರಿಯಲ್ಲಿ ಇಟ್ಟುಕೊಂಡು ಕೈಗೆತ್ತಿಕೊಂಡಿರುವ ಕೆಲಸಕ್ಕೆ ಅಲ್ಪ ಹಿನ್ನಡೆ.

Today astrology in kannada today horoscope in kannada

ಯಾವುದೇ ವಿಚಾರವಾದರೂ ಧೈರ್ಯವಾಗಿ ಹೇಳಿಬಿಡಬೇಕು ಎಂಬ ಮನೋಭಾವ ನಿಮ್ಮದಾಗಿರುತ್ತದೆ. ಫಲಿತಾಂಶ ಏನಾದರೂ ಸರಿ, ವ್ಯಕ್ತಿ ಯಾರಾದರೂ ಸರಿ ಎದುರಿಸಲು ಸಿದ್ಧವಾಗುತ್ತೀರಿ. ಸಂಗಾತಿ- ಮಕ್ಕಳ ಜತೆಗೆ ಉತ್ತಮ ಸಮಯ ಕಳೆಯಲಿದ್ದೀರಿ. ಪ್ರೀತಿಪಾತ್ರರಿಗೆ ಉಡುಗೊರೆ ನೀಡಲಿದ್ದೀರಿ.

Today astrology in kannada today horoscope in kannada

ಗರ್ಭಿಣಿಯರು ಬಹಳ ಎಚ್ಚರಿಕೆಯಿಂದ ಇರಬೇಕು. ಆಹಾರ- ನೀರು ಸೇವನೆ, ನಡೆದಾಡುವಾಗ ಅಥವಾ ಔಷಧ ಸೇವನೆ ಎಲ್ಲ ವಿಚಾರದಲ್ಲೂ ಎಚ್ಚರಿಕೆಯಿಂದ ಇರಬೇಕು. ಇನ್ನು ಯಾರ ಜತೆಗೆ ವಾಗ್ವಾದ ನಡೆಸಬೇಡಿ. ಉಯ್ದೋಗ ಸ್ಥಳದಲ್ಲಿ ವಹಿಸುವ ಹೊಸ ಜವಾಬ್ದಾರಿಯ ಬಗ್ಗೆ ಅತಿಯಾದ ನಿರೀಕ್ಷೆ ಬೇಡ.

Today astrology in kannada today horoscope in kannada

ಯಾರ ಬಳಿಯೂ ಹೆಚ್ಚಿನ ಸಲುಗೆ ತೆಗೆದುಕೊಳ್ಳಬೇಡಿ. ಬೇರೆಯವರ ಸಮಸ್ಯೆ- ಕಷ್ಟಗಳನ್ನು ನಿಮ್ಮದು ಎಂಬಂತೆ ನೋಡಿ, ಅವರ ಜತೆಗೆ ವ್ಯವಹರಿಸಿದರೆ ಈ ದಿನ ನಿಮ್ಮ ಗೌರವಕ್ಕೆ ಧಕ್ಕೆ ಆಗಬಹುದು. ಸಂಬಂಧಿಗಳು, ಸ್ನೇಹಿತರ ಕಣ್ಣಲ್ಲೇ ನಿಮ್ಮ ಬಗ್ಗೆ ಅನುಮಾನಗಳು ಮೂಡುತ್ತವೆ. ಆದ್ದರಿಂದ ಪಾರದರ್ಶಕವಾಗಿ ವರ್ತಿಸಿ.

Today astrology in kannada today horoscope in kannada

ಯಾರನ್ನೂ- ಯಾವ ಸ್ವಭಾವ, ನಡವಳಿಕೆಯನ್ನೂ ಅನುಕರಣೆ ಮಾಡಬೇಡಿ. ಹೀಗೆ ಮಾಡುವುದರಿಂದ ನಿಮ್ಮತನಕ್ಕೆ ಅಗೌರವ ಆಗುತ್ತದೆ. ಆಪ್ತರ ಬಳಿ ಯಾವುದೇ ರಹಸ್ಯವನ್ನು ಮುಚ್ಚಿಡಬೇಡಿ. ಸಂಗಾತಿ, ಮಕ್ಕಳ ಬಳಿ ಹಣಕಾಸು ವಿಚಾರದಲ್ಲಿ ಮುಸ್ತವಾಗಿ ವರ್ತಿಸಿ. ಇಷ್ಟೆಲ್ಲ ಆದಲ್ಲಿ ನೆಮ್ಮದಿ ಇರುತ್ತದೆ. ಇಲ್ಲದಿದ್ದಲ್ಲಿ ಕಲಹ, ಭಿನ್ನಾಭಿಪ್ರಾಯಕ್ಕೆ ಹಾದಿ ಆಗುತ್ತದೆ.

Today astrology in kannada today horoscope in kannada

ಗುರು- ಹಿರಿಯರ ಸಲಹೆ ಬಂದಾಗ ಯಾವ ಅನುಮಾನ ಪಡದೆ ಪಾಲಿಸಿ. ನಿಮ್ಮ ಭವಿಷ್ಯದ ವಿಚಾರಕ್ಕೆ ಅಂಥದ್ದೊಂದು ಸಲಹೆ ಈ ದಿನ ಬರಲಿದೆ. ಅದನ್ನು ಅನುಸರಿಸಿದರೆ ಭವಿಷ್ಯದಲ್ಲಿ ಅನುಕೂಲ ಒದಗಿ ಬರಲಿದೆ. ಪ್ರೀತಿ- ಪ್ರೇಮದಲ್ಲಿ ಇರುವವರಿಗೆ ಸುಮಧುರವಾದ ಕ್ಷಣಗಳನ್ನು ಕಳೆಯುವ ಯೋಗ ಇದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement