ಇಂದಿನ ಭವಿಷ್ಯ ಮಾರ್ಚ್ 8th 2020

Today astrology in kannada today horoscope in kannada

ನಿಮ್ಮ ಮೇಲೆ ನಿಜವಾದ ಅಂತಃಕರಣದಿಂದ ಮಿಡಿಯುವ ಜನರ ಭೇಟಿ ಆಗುವುದು. ಇದರಿಂದ ನಿಮಗೆ ಮಾನಸಿಕ ಧೈರ್ಯ-ಸ್ಥೈರ್ಯ ಬರುವುದು ಮತ್ತು ಮಾಡುವ ಕೆಲಸ ಕಾರ್ಯಗಳಲ್ಲಿ ಉತ್ಸಾಹ ತೋರುವಿರಿ.

Today astrology in kannada today horoscope in kannada

ತುಂಬಾ ಎಚ್ಚರಿಕೆಯಿಂದ ಸಂಘಟನೆಯನ್ನು ನಡೆಸಿ. ಇದರ ಮುಂದಾಳತ್ವವನ್ನು ನೀವೇ ವಹಿಸುವುದು ಒಳ್ಳೆಯದು. ಇದರಿಂದ ಜನರು ಸಂತಸಗೊಂಡು ನಿಮ್ಮನ್ನು ಆದರಿಸಿ ಗೌರವ ತೋರುವರು.ಆಹಾರ-ವಿಹಾರದಲ್ಲಿ ನಿಯಮತೆಯನ್ನು ಕಾಪಾಡಿಕೊಳ್ಳಿ.

Today astrology in kannada today horoscope in kannada

ಕುಟುಂಬದ ಹಿರಿಯ ಸದಸ್ಯರ ನಿರೀಕ್ಷೆಗೆ ವಿರುದ್ಧವಾಗಿ ನಿಮ್ಮ ಜೀವನ ಕ್ರಮವನ್ನು ಅನುಸರಿಸದಿರಿ. ಹೀಗೆ ಮಾಡಿದಲ್ಲಿ ವಿನಾಕಾರಣ ನೀವು ನಿಷ್ಟೂರಕ್ಕೆ ಒಳಗಾಗುವಿರಿ ಮತ್ತು ನಿಮ್ಮ ಬಗ್ಗೆ ಇತರೆಯವರು ತೋರುವ ಗೌರವ ಕಡಿಮೆ ಆಗುವುದು.

Today astrology in kannada today horoscope in kannada

ಕೆಲಸದ ಬಗೆಗಿನ ಸಂದರ್ಶನವು ಉತ್ತಮ ರೀತಿಯಲ್ಲಿ ಆಗುವುದು. ಸಂದರ್ಶನದ ಫಲಿತಾಂಶವು ನಿಮ್ಮ ಜೀವನದ ದಿಕ್ಕನ್ನೆ ಧನಾತ್ಮಕವಾಗಿ ಬದಲಿಸುವ ಶಕ್ತಿಯನ್ನು ಹೊಂದಿರುತ್ತದೆ. ಸಂತೋಷದ ದಿನವಾಗಿರುತ್ತದೆ.

Today astrology in kannada today horoscope in kannada

ಆರೋಗ್ಯದ ವಿಚಾರದಲ್ಲಿ ತೂಗುಯ್ಯಾಲೆಯ ರೀತಿಯ ಏರಿಳಿತಗಳು ಉಂಟಾಗುವ ಸಾಧ್ಯತೆ ಇದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಉಂಟಾಗುವುದು. ಹನುಮಾನ್‌ ಚಾಲೀಸ್‌ ಪಠಿಸುವುದು ಒಳ್ಳೆಯದು.

Today astrology in kannada today horoscope in kannada

ಕೆಲಸ ಕಾರ್ಯಗಳಲ್ಲಿ ಏಕಾಗ್ರತೆಯನ್ನು ಸಾಧಿಸಲು ಸಾಧ್ಯವಾಗದೆ ಪರದಾಟ ಉಂಟಾಗುವ ಸಾಧ್ಯತೆ ಇರುತ್ತದೆ. ವಿಷ್ಣುವಿನ ಆರಾಧನೆಯನ್ನು ಮಾಡುವುದು ಮತ್ತು ವಿಷ್ಣು ದೇವಾಲಯಕ್ಕೆ ತುಳಸೀ ಮಾಲೆಯನ್ನು ನೀಡುವುದು ಒಳ್ಳೆಯದು.

Today astrology in kannada today horoscope in kannada

ಚಂಚಲತೆ ಸ್ವಭಾವವುಳ್ಳ ನೀವು ಯಾರೊಟ್ಟಿಗಾದರೂ ಮಾತಾಡಿದರೆ ಏನು ತಿಳಿದುಕೊಳ್ಳವರೋ ಎಂಬ ಸೂಕ್ಷ ಪ್ರವೃತ್ತಿಯವರು. ಹಾಗಾಗಿ ಜನರೇ ನಿಮ್ಮನ್ನು ನೋಯಿಸುವರು. ಅವರಿಗೆ ಪ್ರತ್ಯುತ್ತರ ಕೊಡಲು ಅಸಹಾಯಕರಾಗಿ ನೋವನ್ನು ಅನುಭವಿಸುವಿರಿ.

Today astrology in kannada today horoscope in kannada

ಸಾಂಸಾರಿಕವಾದ ಬಿಕ್ಕಟ್ಟುಗಳನ್ನು ಆಂತರಿಕವಾಗಿಯೇ ಪರಿಹಾರ ಮಾಡಿಕೊಳ್ಳುವುದು ಒಳಿತು. 'ಸಂಸಾರ ಗುಟ್ಟು ವ್ಯಾಧಿ ರಟ್ಟು' ಎನ್ನುವ ನಾಣ್ನುಡಿಯನ್ನು ಅರಿತು ಬಾಳಿ. ಇಲ್ಲದಿದ್ದಲ್ಲಿ ಸಮಾಜದಲ್ಲಿ ನಿಮಗೆ ಗೌರವ ಕಡಿಮೆ ಆಗುವುದು.

Today astrology in kannada today horoscope in kannada

ನಿಮ್ಮ ವಿಚಾರದಲ್ಲಿ ಈ ದಿನದ ಬೆಳವಣಿಗೆಗಳು ಧನಾತ್ಮಕವಾಗಿ ಮೂಡಿಬರುವುದು. ಹಾಗಾಗಿ ನಿಮಗೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆಗಳು ಬರುವವು. ಸಂಗಾತಿಯ ಸಲಹೆಯನ್ನು ಸ್ವೀಕರಿಸಿರಿ ಮತ್ತು ಬೆಳೆದು ನಿಂತ ಮಗನ ಮನಸ್ಸನ್ನು ನೋಯಿಸದಿರಿ.

Today astrology in kannada today horoscope in kannada

ನಿಮ್ಮ ಬಂಧುವರ್ಗ ಅಥವಾ ನಿಮಗೆ ಹತ್ತಿರದವರೇ ನಿಮಗೆ ನೋವಾಗುವಂತಹ ಮಾತುಗಳನ್ನು ಆಡುವ ಸಾಧ್ಯತೆ ಇರುತ್ತದೆ. ಆತ್ಮಸಾಕ್ಷಿ ಶುದ್ಧವಾಗಿರುವುದರಿಂದ ಈಬಗ್ಗೆ ಅನಗತ್ಯ ಭಯ ಬೇಡ.

Today astrology in kannada today horoscope in kannada

ಮಕ್ಕಳು ಶುಭ ವಾರ್ತೆಯನ್ನು ತರಲಿದ್ದಾರೆ. ವಿಶೇಷವಾದ ಸಂತೋಷ ಸಮಾಧಾನಗಳು ನಿಮ್ಮದಾಗುವುದು. ಬಾಕಿ ಬರಬೇಕಾಗಿದ್ದ ಹಣಕಾಸು ಬರುವ ಸಾಧ್ಯತೆ ಇರುತ್ತದೆ. ಆರೋಗ್ಯ ಉತ್ತಮವಾಗಿರುವುದು.

Today astrology in kannada today horoscope in kannada

ಖರ್ಚಿನ ದಾರಿಯನ್ನು ಸ್ಪಷ್ಟವಾಗಿ ನಿಯಂತ್ರಿಸಿ. ತಿಳಿದಿರುವುದಕ್ಕಿಂತಲೂ ಜಾಸ್ತಿ ಖರ್ಚು ವೆಚ್ಚಗಳು ಎದುರಾಗುವುದು. ಸದ್ಯದಲ್ಲಿಯೇ ನಿಮ್ಮ ಜೀವನದಲ್ಲಿ ಹರಡಿಕೊಂಡಿರುವ ಕಷ್ಟದ ಕಾರ್ಮೋಡಗಳು ಕರಗಿ ಸುಖವಾಗುವುದು. ತಾಳ್ಮೆಯಿಂದ ಇರಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement