ನಿಮ್ಮ ನಡವಳಿಕೆ ಇತರರಿಗೆ ಸ್ಫೂರ್ತಿ ಆಗಲಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಮಾಡಲಿದ್ದೀರಿ. ವಿದ್ಯಾರ್ಥಿಗಳಿಗೆ ಹೊಸ ಆತ್ಮವಿಶ್ವಾಸ ಮೂಡಲಿದೆ. ಬಹಳ ಕಾಲದಿಂದ ಮುಂದೂಡುತ್ತಾ ಬಂದಿದ್ದ ವಿಚಾರವೊಂದರ ಇತ್ತೀಚಿನ ಬೆಳವಣಿಗೆಯ ಮಾಹಿತಿ ದೊರೆಯಲಿದೆ. ಸವಿಯಾದ ಮಾತುಗಳನ್ನು ಆಡಿ, ಇತರರನ್ನು ಮೋಡಿ ಮಾಡಲಿದ್ದೀರಿ.
ದುಡ್ಡಿನ ವಿಚಾರವೊಂದಕ್ಕೆ ತೆಗೆದುಕೊಳ್ಳಬೇಕಾದ ನಿರ್ಧಾರವೊಂದನ್ನು ಧೈರ್ಯವಾಗಿ ಮಾಡುವಿರಿ. ವಯಸ್ಸಿನಲ್ಲಿ ಹಿರಿಯರು ಕೂಡ ನಿಮ್ಮನ್ನು ಅನುಸರಿಸುವಂತೆ, ಮಾತು ಕೇಳುವಂತೆ ಆಗುತ್ತದೆ. ಆದರೆ ಉದ್ಯೋಗ ಸ್ಥಳದಲ್ಲಿ ಹಿತಶತ್ರುಗಳಿಂದ ದೂರ ಇರಿ. ನಿಮ್ಮ ವಿರುದ್ಧ ಮಸಲತ್ತು ನಡೆಯುವ ಸಾಧ್ಯತೆ ಇದೆ.
ಹೊಸ ಉತ್ಸಾಹದೊಂದಿಗೆ ಕೆಲಸ- ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಇಷ್ಟು ಸಮಯ ಕಾಡುತ್ತಿದ್ದ ಗೊಂದಲಗಳು ಪರಿಹಾರ ಆಗಲಿವೆ. ಹೊಸ ಆದಾಯ ಮೂಲವೊಂದು ಕಾಣಿಸಿಕೊಳ್ಳುವುದರಿಂದ ಆತ್ಮವಿಶ್ವಾಸ ಹೆಚ್ಚಾಗಲಿದೆ. ಸ್ವಂತ ವ್ಯಾಪಾರ- ವ್ಯವಹಾರ ಮಾಡುವವರಿಗೆ ಪ್ರಗತಿ ಇದೆ.
ಸಾವಯವ ಕೃಷಿ ಮಾಡುವವರಿಗೆ ಸಾಧನೆಗೆ ಸಮ್ಮಾನ- ಮನ್ನಣೆ ಸಿಗುವ ದಿನ ಇದು. ಡೇರಿ ಉತ್ಪನ್ನಗಳ ಮಾರಾಟಗಾರರಿಗೆ ಲಾಭದಾಯಕವಾಗಿ ಇರುತ್ತದೆ. ನೀವಾಗಿಯೇ ಕೇಳದಿದ್ದರೂ ಅಗತ್ಯ ನೆರವು ದೊರೆಯುತ್ತದೆ. ಸಂಗಾತಿ ಜತೆಗೆ ಉತ್ತಮವಾದ ಸಮಯ ಕಳೆಯುವ ಯೋಗ ಇದೆ.
ಸ್ವಾದಿಷ್ಟವಾದ ಆಹಾರ ಪದಾರ್ಥಗಳನ್ನು ಸವಿಯುವ ಯೋಗ ಇದೆ. ಮಧುರವಾದ ಮಾತುಗಳನ್ನು ಕೇಳಿಸಿಕೊಳ್ಳಲಿದ್ದೀರಿ. ಪ್ರೇಮಿಗಳಿಗೆ ಖರ್ಚಿನ ದಿನ ಇದಾಗಬಹುದು. ನಿಮ್ಮ ಅಂತರಂಗದ ರಹಸ್ಯವನ್ನು ಯಾರ ಜತೆಗೂ ಹಂಚಿಕೊಳ್ಳಲಿದ್ದೀರಿ. ಹೊಸಬರನ್ನು ಏಕಾಏಕಿ ನಂಬಬೇಡಿ.
ವೃತ್ತಿಪರರಾಗಿ ಹೊಸ ಸವಾಲು ಎದುರಾಗುವ ದಿನ ಇದು. ಕಲಿತ ವಿದ್ಯೆಯೆಲ್ಲ ಒಂದೇ ದಿನ ಖರ್ಚು ಮಾಡಬೇಕಾಯಿತಲ್ಲ ಎಂಬಷ್ಟು ಆಯಾಸ ಆಗುತ್ತದೆ. ಆದರೆ ದೇವತಾ ಆರಾಧನೆ, ಅಧ್ಯಾತ್ಮ ಚಿಂತನೆ ಮೂಲಕ ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಬಹುದು. ಲೇವಾದೇವಿ ವ್ಯವಹಾರ ಮಾಡುವವರಿಗೆ ನಷ್ಟ ಸಾಧ್ಯತೆ.
ವಯಸ್ಸಾದ ಮಕ್ಕಳನ್ನು ನಿಮ್ಮ ಆಧೀನದಲ್ಲಿ ಇರಿಸಿಕೊಳ್ಳುವುದರಿಂದ ನಿಮಗೂ ಒಳ್ಳೆಯದಲ್ಲ, ಇದನ್ನು ತಡೆಯುವುದರತ್ತ ಗಮನ ಹರಿಸಿ.
ವಯಸ್ಸಾದ ಮಕ್ಕಳನ್ನು ನಿಮ್ಮ ಆಧೀನದಲ್ಲಿ ಇರಿಸಿಕೊಳ್ಳುವುದರಿಂದ ನಿಮಗೂ ಒಳ್ಳೆಯದಲ್ಲ, ಇದನ್ನು ತಡೆಯುವುದರತ್ತ ಗಮನ ಹರಿಸಿ.
ಮಧುಮೇಹ, ರಕ್ತದೊತ್ತಡ, ಕಿಡ್ನಿ ಸಮಸ್ಯೆ ಇರುವಂಥವರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಮಾಡಬೇಕು. ಮಾತ್ರೆ- ಔಷಧ ಬದಲಾಯಿಸಿಕೊಂಡಿದ್ದಲ್ಲಿ ಅಥವಾ ಹೊಸ ವೈದ್ಯರ ಬಳಿ ತೆರಳುತ್ತಿದ್ದಲ್ಲಿ ಜಾಗ್ರತೆ ಅಗತ್ಯ. ಅತಿಯಾದ ಆತ್ಮವಿಶ್ವಾಸ ಅಥವಾ ನಂಬಿಕೆ ಒಳ್ಳೆಯದಲ್ಲ.
ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ತಮಗೆ ದೊರೆಯಬೇಕಾದ ಸವಲತ್ತು, ಸೌಕರ್ಯ, ಸ್ಥಾನ- ಮಾನಗಳು ಇತರರ ಪಾಲಾಗುತ್ತಿವೆ ಎಂಬ ಬೇಸರ ಉಂಟಾಗುತ್ತದೆ. ಮಕ್ಕಳ ಶಿಕ್ಷಣದ ಬಗ್ಗೆ ಚಿಂತೆ ಆಗಬಹುದು. ಸ್ವಂತ ವ್ಯಾಪಾರ- ಉದ್ಯಮ ನಡೆಸುತ್ತಿರುವವರಿಗೆ ಸಾಲ ಬಾಧೆ ಕಾಡಲಿದೆ.
ಅನುಮಾನದ ಪ್ರವೃತ್ತಿಯಿಂದ ನಿಮ್ಮ ಸುಖ- ಸಂತೋಷಕ್ಕೆ ನೀವೇ ಧಕ್ಕೆ ತಂದುಕೊಳ್ಳುವ ಸಾಧ್ಯತೆ ಇದೆ. ಹಳೆಯ ಘಟನೆಯೊಂದು ಪದೇ ಪದೇ ನೆನಪು ತಂದುಕೊಂಡು ದುಃಖ- ಬೇಸರ ಪಡುತ್ತೀರಿ. ಸಮಯಕ್ಕೆ ಸರಿಯಾಗಿ ಊಟ- ತಿಂಡಿ ಮಾಡುವುದಕ್ಕೆ ಸಾಧ್ಯವಾಗದೇ ಹೋಗಬಹುದು.
ನಿಮಗಿಂತ ವಯಸ್ಸಿನಲ್ಲಿ ದೊಡ್ಡವರ ಜತೆ ಅಥವಾ ನೈತಿಕ ಅಲ್ಲದ ಸಂಬಂಧವೊಂದರ ಕಡೆಗೆ ಮೋಹ ಬೆಳೆಯಬಹುದು. ಇದರಿಂದ ಸಮಾಜದಲ್ಲಿ ಅವಮಾನದ ಪಾಲಾಗುವ ಯೋಗ ಇದೆ. ಆದ್ದರಿಂದ ದೇವರ ಪೂಜೆ, ಧ್ಯಾನ ಇತ್ಯಾದಿಗಳ ಕಡೆಗೆ ಮನಸ್ಸನ್ನು ನೀಡಿ. ನಾನು ಮಾಡಿದ್ದೇ ಸರಿ ಎಂಬ ಧೋರಣೆ ಬೇಡ.
ಮನೆಗೆ ಅಗತ್ಯ ಇರುವ ವಸ್ತುಗಳನ್ನು ತರುವ, ಹೊಂದಿಸುವ ಕೆಲಸಕ್ಕೆ ಬಹಳ ಸಮಯ ಹಿಡಿಸುತ್ತದೆ. ಇದರಿಂದ ನಿಮ್ಮ ಬಗ್ಗೆ ಕುಟುಂಬದಲ್ಲಿ ಗೌರವ ಮೂಡುತ್ತದೆ. ಸ್ವತಂತ್ರ ಆಲೋಚನೆ ಮೂಲಕ ಗೆಳೆಯ/ಗೆಳತಿಯರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಹೊಸ ಮನೆ, ಕಚೇರಿಗೆ ಬದಲಾವಣೆ ಮಾಡಬೇಕೆಂದು ಕೊಳ್ಳುತ್ತಿರುವವರಿಗೆ ಸೂಕ್ತವಾದ ಮನೆ ಅಥವಾ ಕಚೇರಿ ದೊರೆಯುತ್ತದೆ.
ಸ್ವತಂತ್ರವಾಗಿ ವ್ಯಾಪಾರ- ವ್ಯವಹಾರ ಮಾಡಬೇಕು ಅಂದುಕೊಳ್ಳುವವರಿಗೆ ಅವಕಾಶಗಳು ದೊರೆಯಲಿವೆ. ನೀವು ಅನುಷ್ಠಾನಕ್ಕೆ ತರಬೇಕು ಅಂದುಕೊಂಡ ಯೋಜನೆಗಳನ್ನು ಕ್ರಮಬದ್ಧವಾಗಿ ಜಾರಿಗೆ ತರಲು ಹಣ ಹೂಡಿಕೆ ಮಾಡುವ ಸಾಧ್ಯತೆ ಇದೆ. ಸಹೋದ್ಯೋಗಿಗಳು, ಆಪ್ತರ ಜತೆಗೆ ಉತ್ತಮ ಸಮಯ ಕಳೆಯಲಿದ್ದೀರಿ.
Tags:
ದಿನ ಭವಿಷ್ಯ