ಕೊರೊನಾ ವೈರಸ್ ಅನ್ನು ಹತ್ತಿ ಕಲ ಬೇಕು ಎಂದು ವಿಶ್ವದ ಅನೇಕ ರಾಷ್ಟ್ರಗಳು ಈಗಲೂ ಪರದಾಡುತ್ತಿದೆ ಆದರೆ ಕೆಲವು ರಾಷ್ಟ್ರಗಳು ತಡವಾಗಿ ಎಚ್ಚೆತ್ತುಕೊಂಡು ಈಗ ಪರದಾಡುತ್ತಿದೆ. ವೈರಸ್ ಸೋಂಕು ಜಾಸ್ತಿ ಹರಡದಂತೆ ತಡೆಯಲು ತಡೆಯಲು ಸತತ ಪ್ರಯತ್ನವನ್ನು ನಡೆಸುತ್ತಿದೆ.
ವಿಶ್ವದಲ್ಲಿಯೇ ಬಲಿಷ್ಠ ಸದೃಢ ರಾಷ್ಟ್ರ ಎನಿಸಿಕೊಂಡಿರುವ ರಷ್ಯಾಕ್ಕೂ ಕೂಡ ಮಾರಕ ಕೊರೊನಾ ವೈರಸ್ ಎಂಟ್ರಿ ಕೊಟ್ಟಾಗಿದೆ. ಕೊರೊನಾ ವೈರಸ್ ಹತ್ತಿಕ್ಕಲು ರಷ್ಯಾ ಕೂಡ ಪರದಾಡುತ್ತಿದೆ. ಕೆಲವು ದಿನಗಳ ಹಿಂದೆ ಕೊರೊನಾವೈರಸ್ ತಡೆಯಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ ದೇಶದ ಜನರಿಗೆ ಮನೆಯಲ್ಲೇ ಇರಿ, ಇಲ್ಲವಾದರೆ ಹದಿನೈದು ದಿನಗಳ ಕಾಲ ಜೈಲಿಗೆ ಕಳುಹಿಸಲಾಗುವುದು ಎಂದು ಆದೇಶ ಮಾಡಿದ್ದರು. ಆದರೆ, ಅದನ್ನು ಕೇಳದ ಜನರನ್ನು ಶಿಕ್ಷಿಸಲು ಪುಟಿನ್ ಅವರು ಈಗ ಸಿಂಹಗಳನ್ನು ಬೀದಿಗಿಳಿಸಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ.
1500 ಸಿಂಹಗಳನ್ನು ನಿಜವಾಗಿಯೂ ಬಿಟ್ಟರಾ ಪುಟಿನ್?
ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ರಷ್ಯಾದಲ್ಲಿ ಜನರನ್ನು ಬೀದಿಗಿಳಿಯದಂತೆ ತಡೆಯಲು ರಷ್ಯಾದ ಅಧ್ಯಕ್ಷ ಪುಟಿನ್ ಅವರು ಈಗಾಗಲೇ ವ್ಯಾಪಕ ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೆ ಇದಕ್ಕೆಲ್ಲ ಜನರು ಸೊಪ್ಪುಹಾಕದೇ ಇರುವುದರಿಂದ ರಷ್ಯಾದ ಅಧ್ಯಕ್ಷ ಪುಟಿನ್ ಅವರು ಸುಮಾರು 1500 ಸಿಂಹಗಳನ್ನು ರಸ್ತೆಯಲ್ಲಿ ಬಿಟ್ಟಿದ್ದಾರೆ ಎಂಬ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ವೈರಲ್ ಆಗಿತ್ತು. ಆದರೆ ಇದೆಲ್ಲ ಶುದ್ಧ ಸುಳ್ಳು ಎಂದು ಫಾಸ್ಟ್ ಚೆಕ್ ನಲ್ಲಿ ಬಯಲಾಗಿದೆ.ಫೋಟೊ ಎಲ್ಲಿಯದು? ಸಿಂಹ ಎಲ್ಲಿಯದು?
ಜನರನ್ನು ಹೆದರಿಸಲು ಈ ರೀತಿಯಾಗಿ ಸಿಂಹಗಳನ್ನು ರಷ್ಯಾದ ಅಧ್ಯಕ್ಷ ಪುಟಿನ್ ರಸ್ತೆಗೆ ಬಿಟ್ಟಿದ್ದಾರೆ ಎಂಬ ಫೋಟೊ ರಷ್ಯಾದ್ದು ಅಲ್ಲವೇ ಅಲ್ಲ. ರಸ್ತೆಯಲ್ಲಿ ಸಿಂಹವೊಂದು ಅಡ್ಡಾಡುತ್ತಿರುವ ಫೋಟೊ ಇದಾಗಿತ್ತು. ಈ ಫೋಟೊ ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದ ದೃಶ್ಯವಾಗಿದೆ. 2016 ರಲ್ಲಿ ಕಾಡಿನಿಂದ ನಾಡಿಗೆ ಬಂದಿದ್ದ ಸಿಂಹ ದಕ್ಷಿಣ ಆಫ್ರಿಕಾದ ಕಾಡಂಚಿನ ನಗರದಲ್ಲಿ ತಿರುಗಾಡಿತ್ತು.15 ದಿನ ಜೈಲು ವಾಸವೂ ಸುಳ್ಳು
ಕೊರೊನಾ ವೈರಸ್ ತಡೆಯಲು ರಷ್ಯಾದ ಅಧ್ಯಕ್ಷ ಪುಟಿನ್ ಅವರು ರಷ್ಯಾದ ಜನರಿಗೆ ಕನಿಷ್ಠ 15 ದಿನ ಮನೆಯಲ್ಲಿ ಇರಿ ಎಂದು ಆದೇಶಿಸಿ ಇಲ್ಲವಾದರೆ 15 ದಿನ ಜೈಲು ವಾಸ ಅನುಭವಿಸಿ ಎಂದು ಹೇಳಿದ್ದರು ಎಂಬುದು ಕೂಡ ವೈರಲ್ ಆಗಿತ್ತು. ಆದರೆ ಈ ಸುದ್ದಿಯೂ ಕೂಡ ಸುಳ್ಳು ಎಂದು ಸಾಬೀತಾಗಿದೆ. ಅಧ್ಯಕ್ಷ ಪುಟಿನ್ ಆ ರೀತಿ ಹೇಳಿಕೆ ಕೊಟ್ಟಿಲ್ಲ ಎಂದು ರಷ್ಯಾ ಟುಡೇ ವರದಿ ಮಾಡಿದೆ. ಅಧ್ಯಕ್ಷ ಪುಟಿನ್ ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಜನಕ್ಕೆ ತೊಂದರೆಯಾಗದಿರುವ ಕ್ರಮಗಳನ್ನು ಹೆಚ್ಚು ಕೈಗೊಂಡಿದ್ದಾರೆ ಎಂದು ವಾಹಿನಿ ಹೇಳಿದೆ.