ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ತಡೆಗೆ ನೆರವು ನೀಡಿದ ಇನ್ಫೋಸಿಸ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ತಡೆಗೆ ನೆರವು ನೀಡಿದ ಇನ್ಫೋಸಿಸ್


ಮಂಗಳೂರು, ಮಾರ್ಚ್ 28: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಸೋಂಕನ್ನು ತಡೆಗಟ್ಟಲು ಇನ್ಫೋಸಿಸ್ ಫೌಂಡೇಶನ್ ನೆರವನ್ನು ನೀಡಿದೆ. ಇನ್ಫೋಸಿಸ್ ಫೌಂಡೇಶನ್ ಸ್ಪಂದನೆಗೆ ಮಂಗಳೂರು ಜಿಲ್ಲಾಡಳಿತ ಧನ್ಯವಾದವನ್ನು ತಿಳಿಸಿದೆ.



ಇನ್ಫೋಸಿಸ್ ಫೌಂಡೇಶನ್ ವತಿಯಿಂದ 28 ಲಕ್ಷ ರೂಪಾಯಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಕೊರೊನಾ ವೈರಸ್‌ ತಡೆಗೆ ನೀಡಿದೆ. ಜಿಲ್ಲಾಡಳಿತ ನೆರವಿಗಾಗಿ ಹಲವು ಸಂಸ್ಥೆಗಳಿಗೆ ಮನವಿಯನ್ನು ಮಾಡಿತ್ತು. ಅದರ ಪೈಕಿ ಶೀಘ್ರವಾಗಿ ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾ ಮೂರ್ತಿ ಅವರು ನೆರವಿಗೆ ಬಂದಿದ್ದಾರೆ. ಈಗಾಗಲೇ ಅನೇಕ ತುರ್ತು ಸಮಯದಲ್ಲಿ ಸಹಾಯಹಸ್ತವನ್ನು ಚಾಚಿರುವ ಅವರು ಈಗ ಮತ್ತೊಮ್ಮೆ ದೇಣಿಗೆಯನ್ನು ನೀಡುವ ಮೂಲಕ ತಮ್ಮ ಸಹಾನುಭೂತಿಯನ್ನು ತೋರಿಸಿದ್ದಾರೆ.



ವೈದ್ಯಕೀಯ ಉಪಕರಣ ಹಾಗೂ ಚಿಕಿತ್ಸೆ ಬೇಕಾಗುವ ಎಲ್ಲ ವಸ್ತುಗಳನ್ನು ಈ ದೇಣಿಗೆಯಿಂದ ಜಿಲ್ಲಾಡಳಿತವು ಸರಬರಾಜು ಮಾಡಿದೆ. ಸ್ಯಾನಿಟೈಸರ್, ಮಾಸ್ಕ್ ಸೇರಿದಂತೆ ಇನ್ನೂ ಅನೇಕ ವಸ್ತುಗಳನ್ನು ನೀಡಿದೆ. ಆ ವಸ್ತುಗಳ ವಿವರ ಈ ರೀತಿ ಇದೆ.



500 ಮಿಲಿ ಲೀಟರ್‌ನ 5000 ಬಾಟಲ್ ಸ್ಯಾನಿಟೈಸರ್, 1,65000 ಮಾಸ್ಕ್, 2000 ಎನ್ 95 ಮಾಸ್ಕ್, 50 ಕ್ಯಾಪ್ ಗಳು, 60 ವಿಶೇಷ ಮಾದರಿಯ ಸರ್ಜಿಕಲ್ ಗ್ಲೌಸ್, 03 ಬ್ಲಾಕ್ ಸರ್ಜಿಕಲ್ ಗ್ಲೌಸ್, 85 ಗಾಗಲ್ಸ್, 300 ಫಾಗ್ ಫ್ರೀ ಮಾಸ್ಕ್ ಹೀಗೆ ಹಲವಾರು ರೀತಿಯ ಅತ್ಯವಶ್ಯಕ ವಸ್ತುಗಳನ್ನು ಮಂಗಳೂರು ಜಿಲ್ಲಾಡಳಿತ ನೀಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement