ಬನವಾಸಿ: ಕದಂಬೋತ್ಸವದ ಅಂಗವಾಗಿ ಬನವಾಸಿಯ ಮಯೂರವರ್ಮ ವೇದಿಕೆಯಲ್ಲಿ ಭಾನುವಾರ “ಶ್ವಾನ ಪ್ರದರ್ಶನ” ಹಮ್ಮಿಕೊಳ್ಳಲಾಯಿತು.
ವಿವಿಧ ಬಗೆಯ ಶ್ವಾನಗಳು ಮುಖ್ಯ ವೇದಿಕೆಯಲ್ಲಿ ನಡೆದಾಡಿ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಮುದೋಳ, ಸೈಬೇರಿಯನ್, ಹಸ್ಕಿ, ಸೈಂಟ್ ಬರ್ನಾಡ್, ಗ್ರೇಟ್ ಡೆನ್, ಗೋಲ್ಡನ್ ರಿಟ್ರೀವರ್, ಡಾಬರಮನ್, ಬೀಗಲ್, ಜರ್ಮನ್ ಶಫರ್ಡ್, ಹಸ್ಕಿ, ಶಿಟ್‍ಜೂ, ರೋಟ್ ವಿಲ್ಲರ್, ಅಮೆರಿಕನ್ ಬುಲ್ಡಾಗ್, ಮುದೋಳ್ ಹೌಂಡ್, ಪಗ್,ಲ್ಯಾಬ್ರಡಾರ್, ಇಂಡಿಯನ್ ಪಮೋರಿಯನ್ ಸೇರಿ ಅನೇಕ ತಳಿಗಳ ಶ್ವಾನಗಳು ನೋಡುಗರ ಮನಸೂರೆಗೊಳಿಸಿದವು
ಕರ್ನಾಟಕದ ಹೆಮ್ಮೆಯ ದೇಶಿ ಮುದೋಳ್ ತಳಿ ಸೇರಿ ದೇಶಿ-ವಿದೇಶಗಳ 25 ಕ್ಕೂ ಹೆಚ್ಚು ತಳಿಗಳಿಂದ ಇಡೀ ವಾತಾವರಣ ಜನಾಕರ್ಶಣೆಯ ಕೇಂದ್ರವಾಯಿತು. 46ಕ್ಕೂ ಹೆಚ್ಚು ವಿವಿಧ ಶ್ವಾನಗಳು ಸ್ಫರ್ಧೆಯಲ್ಲಿ ಭಾಗವಹಿಸಿದ್ದವು.
ಪಾಲ್ಗೊಂಡಿದ್ದ ಎಲ್ಲಾ ಶ್ವಾನಗಳ ಮಾಲೀಕರಿಗೆ ಪ್ರಮಾಣ ಪತ್ರ ನೀಡಲಾಯಿತು.