ಇಂದಿನ ಭವಿಷ್ಯ ಫೆಬ್ರವರಿ 24, 2020

Today astrology in kannada today horoscope in kannada

ದೈಹಿಕ ಆಲಸ್ಯತನದಿಂದ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಉಂಟಾಗುವುದು. ಮಕ್ಕಳ ವಿಷಯದಲ್ಲಿ ಹರ್ಷದಾಯಕ ವಾರ್ತೆಗಳನ್ನು ಕೇಳುವಿರಿ. ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ.

Today astrology in kannada today horoscope in kannada

ಸಂಗಾತಿಯ ಸಕಾಲಿಕ ಎಚ್ಚರಿಕೆಯಿಂದ ನಿಮಗೆ ಒಳಿತಾಗುವುದು. ಯಾವುದೇ ಕಾರಣಕ್ಕೂ ಸ್ವಯಂ ಮಾತ್ರೆಗಳನ್ನು ನುಂಗದೆ ವೈದ್ಯರ ಶಿಫಾರಸಿನಂತೆ ನಡೆದುಕೊಂಡಲ್ಲಿ ಹೆಚ್ಚಿನ ಹಾನಿ ಆಗುವುದಿಲ್ಲ. ದೂರದ ಪ್ರಯಾಣ ಅನಿವಾರ್ಯವಾಗಲಿವೆ.

Today astrology in kannada today horoscope in kannada

ಹಿತಶತ್ರುಗಳು ನಿಮ್ಮ ನೆಮ್ಮದಿಯನ್ನು ಕೆಡಿಸುವ ಹುನ್ನಾರದಲ್ಲಿದ್ದಾರೆ ಮತ್ತು ನಿಮ್ಮ ತಪ್ಪುಗಳನ್ನು ಎತ್ತಿ ಆಡುವರು. ಇದರಿಂದ ಕೋಪಗೊಳ್ಳುವ ನೀವು ಮಾತಿನ ಭರದಲ್ಲಿ ಸತ್ಯವನ್ನು ನುಡಿದು ಪೇಚಿಗೆ ಸಿಲುಕೊಳ್ಳುವಿರಿ. ತಾಳ್ಮೆಯಿಂದ ಇರಿ.

Today astrology in kannada today horoscope in kannada

ಶಿವನ ಕೃಪೆಯಿಂದ ಕೆಲಸ ಕಾರ್ಯಗಳು ಸುಲಲಿತವಾಗಿ ಆಗುವುದು. ಮನಸ್ಸಿನ ತುಮುಲಗಳನ್ನು ಭಗವಂತನ ಮುಂದೆ ಅಲ್ಲದೆ ಇತರರ ಮುಂದೆ ಹೇಳಿಕೊಳ್ಳದಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

Today astrology in kannada today horoscope in kannada

ದೂರ ಪ್ರಯಾಣವನ್ನು ಹಮ್ಮಿಕೊಳ್ಳಬೇಕಾಗುವುದು. ವಾಹನ ಸುಖ, ಆಸ್ತಿಯ ಖರೀದಿಯ ಬಗ್ಗೆ ಮಾತುಕತೆ ಉಂಟಾಗುವುದು. ಕೆಲಸ ಕಾರ್ಯಗಳಲ್ಲಿ ಅಲ್ಪ ಹಿನ್ನಡೆಯುಂಟಾಗುವ ಸಾಧ್ಯತೆ ಇರುತ್ತದೆ.

Today astrology in kannada today horoscope in kannada

ಪರಾಕ್ರಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಮಂಗಳ ಕಾರ್ಯದಲ್ಲಿ ಭಾಗವಹಿಸುವಿರಿ. ನಿಮ್ಮ ಮಾತಿನ ವೈಖರಿಯಿಂದ ಎಲ್ಲರನ್ನು ಆಕರ್ಷಿಸುವಿರಿ. ಸಮಾಜದಲ್ಲಿ ಗೌರವ ಪ್ರತಿಷ್ಠೆಗಳು ಹೆಚ್ಚಾಗುವುದು.

Today astrology in kannada today horoscope in kannada

ಮಾತೇ ಮುತ್ತು ಮಾತೇ ಶತ್ರು ಎನ್ನುವಂತೆ ನೀವು ನಿಮ್ಮ ಮಾತಿನ ಮೂಲಕ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳುವಿರಿ. ಆ ಮೂಲಕ ಹಣಕಾಸಿನ ಹರಿವಿಗೆ ಕಾರಣವಾಗುವುದು. ಸಂಗಾತಿಯ ಆರೋಗ್ಯದ ಕಡೆ ಗಮನ ಹರಿಸಿ.

Today astrology in kannada today horoscope in kannada

ಅನೇಕ ರೀತಿಯ ಒತ್ತಡಗಳ ನಡುವೆಯೂ ಯಶಸ್ಸಿನ ದಾರಿಯನ್ನು ಕಂಡುಕೊಳ್ಳಲು ಸುದಿನವಾಗಿದೆ. ಅಂತೆಯೇ ನಿಮ್ಮನ್ನು ಟೀಕಿಸುವ ಜನರಿಂದ ಮಾನಸಿಕ ಯಾತನೆ ಉಂಟಾಗುವ ಸಂಭವವಿದ್ದು ಮೌನ ತಾಳಿ.

Today astrology in kannada today horoscope in kannada

ಹಣಕಾಸಿನ ವ್ಯವಸ್ಥೆ ಉತ್ತಮವಾಗಿರುವುದರಿಂದ ಬಹು ಬಂಡವಾಳದ ಉದ್ಯಮವನ್ನು ಆರಂಭಿಸಲು ತೊಡಗುವಿರಿ. ಇದಕ್ಕೆ ನಿಮ್ಮ ಸಂಗಾತಿಯ ಮತ್ತು ಸ್ನೇಹಿತರ ಬೆಂಬಲ ದೊರೆಯುವುದು.

Today astrology in kannada today horoscope in kannada

ಆರೋಗ್ಯದ ವಿಚಾರದಲ್ಲಿ ಎಚ್ಚರದಿಂದ ಇರುವುದು ಕ್ಷೇಮ. ಪ್ರಯಾಣದಲ್ಲಿ ವಾಹನವನ್ನು ಚಲಿಸುವಾಗ ಎಡ ಮತ್ತು ಬಲಬದಿಯ ವಾಹನಗಳನ್ನು ಗಮನಿಸಿ. ಸ್ನೇಹಿತರ ಸಕಾಲಿಕ ಎಚ್ಚರಿಕೆಯಿಂದ ನಿಮಗೆ ಒಳಿತಾಗುವುದು.

Today astrology in kannada today horoscope in kannada

ಕೆಲವು ಹಿತೈಷಿಗಳ ಪ್ರಯತ್ನದಿಂದ ನಿಮ್ಮ ಮನಸ್ಸಿಗೆ ಒಪ್ಪುವ ಹೊಸ ಕೆಲಸವು ನಿಮಗೆ ದೊರಕುವ ಸಾಧ್ಯತೆ ಇದೆ. ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವ ನೀವು ಇತರರ ಅಸೂಯೆಗೆ ಒಳಗಾಗುವಿರಿ.

Today astrology in kannada today horoscope in kannada

ಅನಾವಶ್ಯಕ ವಾದ, ವಿವಾದಗಳಲ್ಲಿ ಪಾಲ್ಗೊಳ್ಳದಿರುವುದು ಉತ್ತಮ. ಇಬ್ಬರ ಜಗಳ ತೀರಿಸಲು ಹೋಗಿ ನೀವೇ ಪೆಟ್ಟು ಮಾಡಿಕೊಳ್ಳುವಿರಿ. ಆರೋಗ್ಯದ ತಪಾಸಣೆಗಳನ್ನು ಸಕಾಲದಲ್ಲಿ ಮಾಡಿಸಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement