Udupi District News Update ಉಡುಪಿ : ಜಿಲ್ಲೆಯ ಕಿನ್ನಿಮೂಲ್ಕಿ ಯಲ್ಲಿ ಮಂಗಳವಾರ (ಡಿ.16) ದುರ್ಘಟನೆ ನಡೆದಿದೆ. ಮನೆಯಿಂದ ನೀರು ಸೇಡಲು ತಾಯಿ ತೆರಳಿದ್ದ ವೇಳೆ, ಜೊತೆಯಲ್ಲಿದ್ದ ಒಂದೂವರೆ ವರ್ಷದ ಮಗು ಬಾವಿಗೆ ಬಿದ್ದಿದೆ.
ಮಗು ಬಿದ್ದುದನ್ನು ಗಮನಿಸಿದ ತಾಯಿ ತಕ್ಷಣವೇ ಮಗುವನ್ನು ರಕ್ಷಿಸಲು ಬಾವಿಗೆ ಇಳಿದಿದ್ದಾರೆ. ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ತಾಯಿಯನ್ನು ಸುರಕ್ಷಿತವಾಗಿ ಮೇಲಕ್ಕೆ ಕರೆತರಲು ಯಶಸ್ವಿಯಾದರು.
ಆದರೆ, ನೀರಿನಲ್ಲಿ ಹೆಚ್ಚು ಸಮಯ ಮುಳುಗಿದ್ದ ಕಾರಣ ಮಗುವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಬಳಿಕ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾದರೂ, ವೈದ್ಯರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ದುರ್ಘಟನೆ ಕುಟುಂಬದಲ್ಲಿ ತೀವ್ರ ಆಘಾತ ಮೂಡಿಸಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.