ಕುಮಟಾ — ಇಂದಿನ ಕಾಲದಲ್ಲಿ ಹುಟ್ಟುಹಬ್ಬದ ಸಂಭ್ರಮವು ಸಾಮಾನ್ಯವಾಗಿ ಪಾರ್ಟಿ, ದುಂದು ವೆಚ್ಚ ಮತ್ತು ವೈಭವಕ್ಕೆ ಸೀಮಿತವಾಗಿರುತ್ತದೆ. ಆದರೆ, ಕುಮಟಾ ತಾಲ್ಲೂಕಿನ ಹೆಗಡೆ ಗ್ರಾಮದ ವಕೀಲ ದಂಪತಿಗಳು ತಮ್ಮ ಮಗಳ ಜನ್ಮದಿನವನ್ನು ಸಂಪೂರ್ಣ ವಿಭಿನ್ನ ರೀತಿಯಲ್ಲಿ ಆಚರಿಸಿ ಸಮಾಜಕ್ಕೆ ಹೊಸ ಸಂದೇಶ ನೀಡಿದ್ದಾರೆ.
ವಕೀಲರಾದ ವಿನಾಯಕ ಶಿವರಾಮ ಪಟಗಾರ ಹಾಗೂ ಅರ್ಚನಾ ವಿನಾಯಕ ಪಟಗಾರ ದಂಪತಿಗಳು ತಮ್ಮ ಮಗಳು ಸುವಿಧಾ ವಿನಾಯಕ ಪಟಗಾರ ಅವರ ನಾಲ್ಕನೇ ಜನ್ಮದಿನವನ್ನು ಸಮಾಜಮುಖಿ ಹಾಗೂ ಪರಿಸರ ಸ್ನೇಹಿ ಕಾರ್ಯದ ಮೂಲಕ ವಿಶಿಷ್ಟಗೊಳಿಸಿದರು.