ಯಲ್ಲಾಪುರದ ಅರಬೈಲ್ ಘಟ್ಟದಲ್ಲಿ ನಡೆದ ಭೀಕರ ಅಪಘಾತ ಸರಣಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಹಾಗೂ ಆರು ಮಂದಿ ಗಂಭೀರ ಗಾಯಗೊಂಡಿದ್ದಾರೆ.
ಲಾರಿ ಮತ್ತು ಟಿಪ್ಪರ್ ನಡುವೆ ಸಿಲುಕಿದ ಬೊಲೆರೋ ವಾಹನ ಸಂಪೂರ್ಣ ನುಜ್ಜುಗುಜ್ಜಾಗಿದ್ದು ಅದರಲ್ಲಿ ಪ್ರಯಾಣಿಸುತ್ತಿದ್ದ ಎಂಟು ಮಂದಿಯಲ್ಲಿ ರಾಜೇಶ್ವರ್ ಹಾಗೂ ಚಿಕ್ಕಮ್ಮ ಪಾಟೀಲ್ ಅವರು ಮೃತರಾಗಿದ್ದಾರೆ. ಇನ್ನುಳಿದ ಆರು ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಏನಿದು ಘಟನೆ?
ಬಾಗಲಕೋಟೆಯ ಒಂದೇ ಕುಟುಂಬಕ್ಕೆ ಸೇರಿದ ಎಂಟು ಮಂದಿ ತಮ್ಮ ಮನೆಯಲ್ಲಿ ಹೊಸ ಬುಲೆರೋ ವಾಹನ ಖರೀದಿಸಿದ ಸಂಭ್ರಮದಲ್ಲಿ ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದ್ದರು. ಈ ಸಮಯದಲ್ಲಿ ಎಲ್ಲಾಪುರದ ಅರಬೈಲ್ ಘಟ್ಟದ ಸಮೀಪ ಹಿಂಬದಿಯಿಂದ ಬರುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಬುಲೆರೋ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೊಲೆರೋ ಮುಂದುಗಡೆ ಯಿಂದ ಬರುತ್ತಿದ್ದ ಟಿಪ್ಪರ್ ಗೆ ಡಿಕ್ಕಿ ಹೊಡೆದು ಲಾರಿ ಮತ್ತು ಟಿಪ್ಪರ್ ಇವೆರಡರ ನಡುವೆ ಸಿಲುಕಿ ನುಜ್ಜುಗುಜ್ಜಾಗಿದ್ದು ಬುಲೆರೋ ದಲ್ಲಿ ಸಿಲುಕಿದ್ದ 8 ಮಂದಿ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ.