ಬ್ಯಾಂಕೊಂದರ ಸಿಇಓ ಮತ್ತು ಎಂ ಡಿ ಆಗಿರುವ ವ್ಯಕ್ತಿಯೊಬ್ಬರು ತಮ್ಮ ಗುರುಗಳಿಗೆ ಮೂವತ್ತು ಲಕ್ಷ ರೂಪಾಯಿ ಮುತ್ತದ ಶೇರ್ ಗಳನ್ನು ನೀಡಿ ಶ್ಲಾಘನೆಗೆ ಒಳಗಾಗಿದ್ದಾರೆ.
ತನ್ನ ಬದುಕಿನ ಆರಂಭದ ಹಂತದಲ್ಲಿ ತನಗೆ ನೆರವಾದ ಗಣಿತ ವಿಷಯದ ಗುರುವನ್ನು ನೆನಪುಮಾಡಿಕೊಂಡು ಅವರಿಗೆ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಇಕ್ವಿಟಿ ಷೇರನ್ನು ಪ್ರೀತಿಯಿಂದ ಕೊಡುಗೆ ಕೊಟ್ಟಿದ್ದಾರೆ.
ಅವತ್ತಿನ ದಿನ ನನಗೆ ಬಿಟಿಎಸ್ ನಲ್ಲಿ ಕೌನ್ಸಿಲಿಂಗ್ ಫಾರ್ಮಾಲಿಟೀಸ್ ಮತ್ತು ಇಂಟರ್ವ್ಯೂಗೆ ಹೋಗಲು ದುಡ್ಡಿರಲಿಲ್ಲ. ಆಗ ನಮ್ಮ ಗುರುಗಳು ನನಗೆ ಐನೂರು ರೂಪಾಯಿಯನ್ನು ಅವತ್ತು ಕೊಟ್ಟಿದ್ದರು. ಅದರಿಂದಾಗಿ ನಾನು ಅಲ್ಲಿಗೆ ಹೋಗಿ ಕೌನ್ಸಲಿಂಗ್ ಫಾರ್ಮಾಲಿಟೀಸ್ ಮತ್ತು ಇಂಟರ್ವ್ಯೂ ಗಳನ್ನು ಮುಗಿಸಲು ಸಹಾಯ ವಾಗಿತ್ತು. ಅವತ್ತು ಅಲ್ಲಿಗೆ ಹೋಗಲು ಸಾಧ್ಯವಾಗದಿದ್ದರೆ ನಾನು ಇವತ್ತು ಇಂದಿನ ದಿನ ಈ ಸ್ಥಿತಿಯಲ್ಲಿ ಇರುತ್ತಿರಲಿಲ್ಲವೇನೋ ಎಂದು ವೈದ್ಯನಾಥನ್ ಹೇಳಿದ್ದಾರೆ. ನನ್ನ ಈ ಸಾಧನೆಗೆ ನಮ್ಮ ಗುರುಗಳು ಕೂಡ ಪರೋಕ್ಷವಾಗಿ ಕಾರಣ ಎಂದು ಅವರು ಹೇಳಿದ್ದಾರೆ.
ವೈದ್ಯನಾಥನ್ ಅವರ ಈ ನಡೆಗೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರಶಂಸೆ ವ್ಯಕ್ತವಾಗಿದೆ. ಏನೇ ಆಗಲಿ ಗುರುದೇವೋಭವ ಎನ್ನುವ ಮಾತಂತೂ ಸತ್ಯ.